ನೀತಾ ಅಂಬಾನಿಗೆ ಕೈಮುಗಿದ್ರಾ ಮೋದಿ, ನಕಲಿ ಫೋಟೋ ಶೇರ್ ಮಾಡಿದ ಜೋಹರ್!
* ನೀತಾ ಅಂಬಾನಿಗೆ ಕೈಮುಗಿದು ನಮಸ್ಕರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ
* ಪಿಎಂ ಮೋದಿಯ ನಕಲಿ ಫೋಟೋ ಶೇರ್ ಮಾಡಿದ ಪ್ರಸಾರ ಭಾರತಿಯ ಮಾಜಿ ಸಿಇಒ
* ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಯಲಾಯ್ತು ಸತ್ಯ
ನವದೆಹಲಿ(ಜೂ.07): ಪ್ರಸಾರ ಭಾರತಿಯ ಮಾಜಿ ಸಿಇಒ ಜೋಹರ್ ಸಿರ್ಕಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನ ಮಮತ್ರಿ ನರೇಂದ್ರ ಮೋದಿಯ ನಕಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಾ ಅಂಬಾನಿ ಎದುರು ಕೈಮುಗಿದು ನಮಸ್ಕರಿಸುವ ದೃಶ್ಯವಿದೆ. ಅಲ್ಲದೇ ಈ ಫೋಟೋ ಶೇರ್ ಮಾಡಿಕೊಂಡಿರುವ ಜೋಹರ್, ಇತರ ಸಂಸದರಿಗೂ ಮೋದಿಯಂತಹ ಸೌಜನ್ಯವಿದ್ದರೆ ಚೆನ್ನಾಗಿತ್ತು ಎಂದು ಬರೆದಿದ್ದಾರೆ.
ಪಿಎಂ ಫೋಟೋ ಶೇರ್ ಮಾಡಿಕೊಂಡಿರುವ ಜೋಹರ್ ಸಹ ಸಂಸದರು ಮತ್ತು ರಾಜಕೀಯದಲ್ಲಿರುವ ಇತರರಿಗೂ ಪ್ರಧಾನ ಮಂತ್ರಿಯಿಂದ ಅಂತಹ ಸೌಜನ್ಯ ಮತ್ತು ಸಾಮರ್ಥ್ಯವನ್ನು ಪಡೆಯಬೇಕಿತ್ತು. ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ, ನಾವು ದ್ವಿಮುಖ ಸಂಬಂಧ, ಪರ, ವ್ಯವಹಾರದ ಬಗ್ಗೆ ತಿಳಿಯುತ್ತೇವೆ. ಮುಂದೊಂದು ದಿನ ಇತಿಹಾಸವು ಇದನ್ನು ನಮಗೆ ತಿಳಿಸುತ್ತದೆ ಎಂದು ಬರೆದಿದ್ದಾರೆ.
ಏನಿದರ ಹಿಂದಿನ ಸತ್ಯ?
ಸಿರ್ಕಾರ್ ಶೇರ್ ಮಾಡಿಕೊಂಡ ಫೋಟೋ ಈ ಹಿಂದೆಯೂ ಒಂದು ಬಾರಿ ವೈರಲ್ ಆಗಿದೆ. ಇದೊಂದದು ಎಡಿಟ್ ಮಾಡಲಾದ ಫೋಟೋ ಆಗಿದೆ. ಅಂದರೆ ಇಲ್ಲಿ ಬೇರೊಬ್ಬರ ಫೋಟೋಗೆ ನೀತಾ ಅಂಬಾನಿ ಮುಖ ಹಾಕಲಾಗಿದೆ. ನಿಜಕ್ಕೂ ಈ ಫೋಟೋ ಎನ್‌ಜಿಒ ನಡೆಸುತ್ತಿರುವ ದೀಪಿಕಾ ಮಂಡಲ್‌ರದ್ದಾಗಿದೆ. ಅವರಿಗೆ ಪ್ರಧಾನಿ ಮೋದಿ ಕೈಮುಗಿದು ನಮಸ್ಕರಿಸಿದ್ದರು.
ನಕಲಿ ಫೋಟೋ ಶೇರ್ ಮಾಡಿ ಸಿಕ್ಕಾಕೊಂಡ ಜೋಹರ್
ಇನ್ನು ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಪ್ರಸಾರ ಭಾರತಿಯ ಈಗಿನ ಸಿಇಒ ಶಶಿ ಶೇಖರ್ ಕಿಡಿ ಕಾರಿದ್ದಾರೆ. ಈ ಫೋಟೋ ಶೇರ್ ಮಾಡಿಕೊಳ್ಳುತ್ತಿರುವ ವಿಚಾರ ನಿಜಕ್ಕೂ ನಿಂದಿಸಉವ ಹಾಗೂ ನಾಚಿಕೆಗೇಡಿನ ವಿಚಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಡದಿರುವುದು ಬೇರೆ ವಿಚಾರ. ಆದರೆ ಪಬ್ಲಿಕ್ ಬ್ರಾಡ್‌ಕಾಸ್ಟ್‌ನ ಮಾಜಿ ಸಿಇಒ ಹಾಗೂ ಮಾಜಿ ಸಾಂಸ್ಕೃತಿಕ ಸಚಿವ ಫೇಕ್ ಫೋಟೋ ಶೇರ್ ಮಾಡಿಕೊಳ್ಳುತ್ತಿರುವುದು ಒಪ್ಪಿಕೊಳ್ಳಲಾಗದ ವಿಚಾರ ಎಂದಿದ್ದಾರೆ. ಈ ವಿಚಾರವಾಗಿ ನಾವು ತಲೆತಗ್ಗಿಸುವಂತಾಗಿದೆ ಎಂದೂ ಹೇಳಿದ್ದಾರೆ.
ಯಾರು ಈ ದೀಪಿಕಾ ಮಂಡಲ್?
ದೀಪಿಕಾ ಮಂಡಲ್ ಅವರು ದಿವ್ಯಜ್ಯೋತಿ ಸಂಸ್ಕೃತಿ ಸಂಸ್ಥೆ ಮತ್ತು ಕಲ್ಯಾಣ ಸೊಸೈಟಿ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಅವರ ಪತಿ ಹೆಸರು ಸಮರ್ ಮಂಡಲ್ ಸಮರ್‌ರವರು ದೇಶದ ಕೊನೆಯ 8 ರಾಷ್ಟ್ರಪತಿಗಳ ಅಧಿಕೃತ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಿವಿನ್ ಇನ್ವೆಸ್ಟಿಚಚರ್ ಸಮಾರಂಭದಲ್ಲಿ ಪ್ರಧಾನ ಮಂತ್ರಿಯ ಈ ಫೋಟೋ ತೆಗೆಯಲಾಗಿತ್ತು.