ನವದೆಹಲಿ(ಜೂ.7): ದೇಶದ ಎಲ್ಲರಿಗೂ ಉಚಿತ ಲಸಿಕೆ ಹಾಗೂ 80 ಕೋಟಿ ಭಾರತೀಯರಿಗೆ ದೀವಾವಳಿ ವರೆಗೆ ಉಚಿತ ರೇಶನ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಈ ಪ್ರಮುಖ ಘೋಷಣೆಗಳನ್ನು ಮೋದಿ ಮಾಡಿದ್ದಾರೆ.

"

ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ, ರಾಜ್ಯಗಳಿಗೆ ಪೂರೈಕೆ ಮಾಡಲಿದೆ. ಇದರಿಂದ ರಾಜ್ಯ ಸರ್ಕಾರ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಭಾರತೀಯರಿಗೆ ಭಾರತ ಸರ್ಕಾರ ಉಚಿತ ಲಸಿಕೆ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ಇದರ ಜೊತೆಗೆ ಕಳೆದ ವರ್ಷದಂತೆ ಈ ವರ್ಷವೂ ನವೆಂಬರ್ ತಿಂಗಳ ವರೆಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಮೋದಿ ಲಸಿಕೆ ಪೂರೈಕೆಗೆ ಕೇಂದ್ರ ಕೈಗೊಂಡ ಕ್ರಮಗಳು, ದೇಶ ಎದುರಿಸುತ್ತಿರುವ ಕೊರೋನಾ ಪಿಡುಗಿನ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನವೀಕರಿಸಬಹುದಾದ ಸಂಪನ್ಮೂಲ 250 ಪ್ರತಿಶತ ಹೆಚ್ಚಳ; ಪರಿಸರ ರಕ್ಷಣೆಯಲ್ಲಿ ಭಾರತ ಮಾದರಿ!.

2ನೇ ಕೊರೋನಾ ಅಲೆ ಹೋರಾಟ ಮುಂದುವರಿದಿದೆ. ವಿಶ್ವದ ಅನೇಕ ರಾಷ್ಟ್ರಗಳು ಕೊರೋನಾ 2ನೇ ಅಲೆ ವಿರುದ್ಧ ಹೋರಾಟ ಮಾಡುತ್ತಿದೆ. ಅನೇಕ ಜನರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಈ ರೀತಿ ಕುಟುಂಬ ಸದಸ್ಯರನ್ನು, ಪೋಷಕರನ್ನು,ಮಕ್ಕಳನ್ನು ಕಳೆದುಕೊಂಡ ಕುಟುಂಬದ ಜೊತೆ ನಾವಿದ್ದೇವೆ. 

ಇದು ವಿಶ್ವ ಕಂಡ ಅತ್ಯಂತ ದೊಡ್ಡ ಸಾಂಕ್ರಾಮಿಕ ಪಿಡುಗು. ಈ ಅತೀ ದೊಡ್ಡ ರೋಗದ ವಿರುದ್ಧ ಭಾರತ ನಿರಂತರ ಹೋರಾಟ ಮಾಡುತ್ತಿದೆ. ಐಸಿಯು ಬೆಡ್ ಹೆಚ್ಚಳ, ವೆಂಟಿಲೇಟರ್ ಉತ್ಪಾದನೆ, ಕೋವಿಡ್ ಪರೀಕ್ಷೆ ಸೆಂಟರ್ ಹೆಚ್ಚಳ ಸೇರಿದಂತೆ ಭಾರತ ಹೊಸ ಮೂಲಭೂತ ಸೌಕರ್ಯಗಳನ್ನು ಜಾರಿಗೊಳಿಸಿದೆ.

 

ಒಲಿಂಪಿಕ್ಸ್ ತಯಾರಿ ಸಭೆ : ಕ್ರೀಡಾಪಟುಗಳ ಬೇಡಿಕೆಗೆ ಮೊದಲ ಆದ್ಯತೆ ಎಂದ ಪ್ರಧಾನಿ!

ಭಾರತ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಆಕ್ಸಿಜನ್ ಬೇಡಿಕೆ ಬಂದಿಲ್ಲ. ದಿಢೀರ್ ಉಂಟಾದ ಬೇಡಿಕೆ ಪೂರೈಕೆಗೆ ರೈಲು, ಸೇನೆ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಭಾರತ ಎಲ್ಲಾ ಪ್ರಯತ್ನ ಮಾಡಲಾಯಿತು. ಇದರ ಪರಿಣಾಮ ಕಡಿಮೆ ಸಮಯದಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಪೂರೈಕೆ ಮಾಡಲು ಸಾಧ್ಯವಾಯಿತು.

ಕೊರೋನಾ ನಿಯಮ ಪಾಲಿಸಿ:

ಕಣ್ಣಿಗೆ ಕಾಣದ, ರೂಪ ಬದಲಿಸುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಕೋವಿಡ್ ನಿಯಮ ಪಾಲನೆ ಅತ್ಯಗತ್ಯ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ನಿಯಮ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇದರ ಜೊತೆಗೆ ಸುರಕ್ಷತೆಗೆ ಲಸಿಕೆ ಪಡೆಯುವುದು ಅಗತ್ಯವಾಗಿದೆ. 

ಆದರೆ ಭಾರತದಂತೆ ಅತೀ ದೊಡ್ಡ ರಾಷ್ಟ್ರಕ್ಕೆ ಲಸಿಕೆ ಪೂರೈಕೆ ಮಾಡುವುದು ಸಾಮಾನ್ಯ ಮಾತಲ್ಲ. ಈ ಹಿಂದೆ ವಿದೇಶದಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿ ಮಾರುಕಟ್ಟೆಯಲ್ಲಿ ಲಭ್ಯವಾದರೂ, ಭಾರತಕ್ಕೆ ಆಗಮಿಸಲು ದಶಗಳೇ ಬೇಕಾಗಿತ್ತು. ಇದು ಪೊಲೀಯೋ ಲಸಿಕೆ ಸೇರಿದಂತೆ ಹಲವು ಲಸಿಕೆಗಳ ಊದಾಹರಣೆ ನೀವು ಗಮನಿಸಬಹುದು. 

ಲಸಿಕೆ ಉತ್ಪಾದನೆ ಶೇ.90ಕ್ಕೆ  ಏರಿಕೆ:

2014ರಲ್ಲಿ ಭಾರತದ ಲಸಿಕೆ ಕವರೇಜ್ 70 ಪ್ರತಿಶತ ಮಾತ್ರ ಇತ್ತು. ಇದರಿಂದ ಪೂರೈಕೆ ಅಸಾಧ್ಯವಾಗಿತ್ತು. ನಾವು ಈ ಸಮಸ್ಯೆ ಪರಿಹರಿಸಲು ಮಿಷನ್ ಧನುಷ್ ಯೋಜನೆ ಜಾರಿಗೊಳಿಸಿದ್ದೇವೆ. ಇದರ ಮೂಲಕ ಲಸಿಕೆ ಉತ್ಪಾದನೆ ಹೆಚ್ಚಿಸಲಾಯಿತು. ಇದೀಗ 90 ಶೇಕಡಾಗೆ ಹೆಚ್ಚಳವಾಗಿದೆ. 

2 ಮೇಡ್ ಇನ್ ಇಂಡಿಯಾ ಲಸಿಕೆ ಉತ್ಪಾದನೆ ಮಾಡಲಾಗಿದೆ. ನಮ್ಮ ವಿಜ್ಞಾನಿಗಳು, ಸಂಶೋಧಕರು ಪ್ರಯತ್ನದಿಂದ  ಅಭಿವೃದ್ಧಿಹೊಂದಿದ ರಾಷ್ಟ್ರಕ್ಕಿಂತ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ನಮ್ಮ ಮೇಲೆ ವಿಶ್ವಾಸವಿದ್ದಾಗ ನಮಗೆ ಯಶಸ್ಸು ಸಿಗಲಿದೆ. ನಮಗೆ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟಿದ್ದೇವೆ. ಪರಿಣಾಮ ಕಡಿಮೆ ಸಮಯದಲ್ಲಿ ಅತ್ಯಂತ ಪರಿಣಾಮಕಾರಿ ಲಸಿಕೆ ಅಭಿವೃದ್ಧಿ ಪಡಿಸಿದ್ದಾರೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಕೊರೋನಾ ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ಲಸಿಕೆ ಉತ್ಪಾದನೆ ಮಾಡಬಲ್ಲ ಕಂಪನಿಗಳ ಜೊತೆ ಮಾತುಕತೆ ನಡೆಸಿತು. ಇದಕ್ಕೆ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಿತು. ಆತ್ಮನಿರ್ಭರ್ ಭಾರತ್ ಯೋಜನೆಯಡಿ ಆರ್ಥಿಕ ನೆರವು ಸೇರಿದಂತೆ ಎಲ್ಲಾ ನೆರವು ನೀಡಲಾಗಿತ್ತು. 

ಶೀಘ್ರದಲ್ಲೇ ಮತ್ತೆರಡು ಹೊಸ ಲಸಿಕೆ:

ಇದೀಗ ಉತ್ಪಾದನೆ ಹೆಚ್ಚಿಸಲು ಎಲ್ಲಾ ಕ್ರಮಕೈಗೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆಯಾಗಲಿದೆ. ಇದರ ಜೊತೆ ಇನ್ನೆರಡು ಹೊಸ ವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ. ಇದರ ಜೊತೆಗೆ ನೇಸಲ್ ಲಸಿಕೆ ಪ್ರಯೋಗವೂ ಯಶಸ್ಸಿನ ಹಾದಿಯಲ್ಲಿದೆ. ಇದರಿಂದ ನಮ್ಮ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ಬಲಬಂದಿದೆ.

ಕಡಿಮೆ ದೇಶಗಳಲ್ಲಿ ಲಸಿಕೆ ಅಭಿಯಾನ ಆರಂಭಗೊಂಡಿದೆ. ಇದರಲ್ಲಿ ಭಾರತ ಕೂಡ ಒಂದು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ವಿಶ್ವ ಆರೋಗ್ಯಸಂಸ್ಥೆ ನಿಯಮದಂತೆ ಪರೀಕ್ಷೆ ನಡೆಸಲಾಗಿದೆ. ಎಲ್ಲಾ ಮಾರ್ಗಸೂಚಿ ಪಾಲನೆ ಮಾಡಿ ಅತ್ಯಂತ ಪರಿಣಾಮ ಕಾರಿ ಲಸಿಕೆ ಅಭಿವದ್ಧಿ ಪಡಿಸಲಾಗಿದೆ. 

ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕಸ್, ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನ ನೆಡೆಸಲಾಯಿತು. ನಮ್ಮ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್, ಆ್ಯಂಬುಲೆನ್ಸ್ ಡ್ರೈವರ್‌ಗಳಿಗೆ ಲಸಿಕೆ ಹಾಕದಿದ್ದರೆ, ಇತರರ ಜೀವ ರಕ್ಷಣೆ ಹೇಗೆ ಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಹೆಲ್ತ್ ವರ್ಕಸ್‌ಗೆ ಮೊದಲು ಲಸಿಕೆ ನೀಡಲಾಯಿತು. 

ಸತತ ಹೋರಾಟದ ನಡುವೆ ಹಲವು ಆರೋಪ:

ಇದರ ನಡುವೆ ಹಲವ ಆರೋಪಗಳು ಎದುರಿಸಬೇಕಾಯಿತು. ಎಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ಲಸಿಕೆಗೆ ವಯಸ್ಸಿನ ಮೂಲಕ ನಿರ್ಧರಿಸಿದ್ದು ಯಾಕೆ? ಶ್ರೀಮಂತ ದೇಶಗಲಿಗೆ ಲಸಿಕೆ ಪೂರೈಕೆ ಮಾಡಿದ್ದು ಯಾಕೆ? ಈ ಕುರಿತು ಹಲವು ಪ್ರಶ್ನೆಗಳು, ಆರೋಪಗಳು ಕೇಳಿಬಂದಿತ್ತು ಹೀಗಾಗಿ ಭಾರತ ಸರ್ಕಾರ ವಿಸ್ತಾರವಾದ ಮಾರ್ಗಸೂಚಿ ನೀಡಲಾಯಿತು. ಈ ಮಾರ್ಗಸೂಚಿಯಲ್ಲಿ ರಾಜ್ಯಗಳಿಗೆ ಲಾಕ್‌ಡೌನ್ ಸೇರಿದಂತೆ ಕೊರೋನಾ ನಿಯಂತ್ರಣಕ್ಕೆ ಸಂಪೂರ್ಣ ಅಧಿಕಾರ ನೀಡಲಾಯಿತು.

ಮೋದಿ ಮೊದಲು ವ್ಯಾಕ್ಸಿನ್ ಪಡೆಯಲಿಲ್ಲ: ಗಂಭೀರ ಆರೋಪ

ಲಸಿಕೆ ವಿಕೇಂದ್ರೀಕರಣ ರಾಜ್ಯಗಳ ಒತ್ತಾಯವನ್ನು ಕೇಂದ್ರ ಸ್ವೀಕರಿಸಿತ್ತು. ಆದರೆ ರಾಜ್ಯಗಳು ತೀವ್ರ ಸಮಸ್ಯೆ ಎದುರಿಸಲು ಆರಂಭಿಸಿತು. ಹೀಗಾಗಿ ಮೊದಲ ವ್ಯವಸ್ಥೆ ಉತ್ತಮವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದರಿಂದ ಮತ್ತೆ ಕೇಂದ್ರ ಸರ್ಕಾರ ಹಿಂದಿನ ವ್ಯವಸ್ಥೆಯನ್ನೇ ಜಾರಿಗೆ ತಂದಿದೆ. 

ಎಲ್ಲರಿಗೂ ಉಚಿತ ಲಸಿಕೆ:

ರಾಜ್ಯ ಸರ್ಕಾರಗಳಿಗೆ ಲಸಿಕೆ ತಲೆನೋವು ಇಲ್ಲ. ಕಾರಣ ಕೇಂದ್ರ ಸರ್ಕಾರವೇ ಎಲ್ಲಾ ಜವಾಬ್ದಾರಿ ವಹಿಸಲಿದೆ. ಕೇಂದ್ರ ಲಸಿಕೆ ಖರೀದಿ ಮಾಡಿ ಎಲ್ಲಾ ರಾಜ್ಯಗಳಿಗೆ ಉಚಿತ ಲಸಿಕೆ ಪೂರೈಕೆ ಮಾಡಲಿದೆ. ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ.  ಶೇಕಡಾ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಇಚ್ಚಿಸುವವರು, ಖಾಸಗಿ ಆಸ್ಪತ್ರೆ ಲಸಿಕೆ ಖರೀದಿಸಿದ ದರದ ಜೊತೆಗೆ ಸರ್ವೀಸ್ ಚಾರ್ಜ್ 150 ರೂಪಾಯಿ ನೀಡಿ ಲಸಿಕೆ ಪಡೆಯಬಹುದು.  

ದೀಪಾವಳಿ ವರೆಗೆ 80 ಕೋಟಿ ಮಂದಿಗೆ ಉಚಿತ ರೇಶನ್:

ಹಿಂದಿನ ವರ್ಷ ಕೊರೋನಾ ಕಾರಣ ಲಾಕ್‌ಡೌನ್ ಹೇರಲಾಗಿತ್ತು. ಇದರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮೂಲಕ 80 ಕೋಟಿ ಮಂದಿಗೆ ಉಚಿತ ರೇಶನ್ ವ್ಯವಸ್ಥೆ ನೀಡಲಾಗಿತ್ತು. ಈ ವರ್ಷವೂ ಮೇ ಹಾಗೂ ಜೂನ್ ತಿಂಗಳಲ್ಲಿ ಈ ಯೋಜನೆ ವಿಸ್ತರಿಸಿದ್ದೇವೆ. ಇದೀಗ ದೀಪಾವಳಿ ವರೆಗೆ ಅಂದರೆ ನವೆಂಬರ್ ತಿಂಗಳ ವರಗೆ ಈ ಯೋಜನೆ ವಿಸ್ತರಿಸುತ್ತಿದ್ದೇವೆ. ಈ ಮೂಲಕ ಬಡವರು ಯಾರೂ ಕೂಡ ಹಸಿವಿನಿಂದ ಮಲಗಬಾರದು ಎಂದು ಮೋದಿ ಹೇಳಿದ್ದಾರೆ.

ಸುಳ್ಳು ಸುದ್ದಿ ಹರಡಬೇಡಿ, ಲಸಿಕೆ ಹಾಕಲು ಪ್ರೇರೇಪಿಸಿ:

ಲಸಿಕೆ ಹಾಕಬೇಡಿ, ಸುರಕ್ಷಿತವಲ್ಲ, ಇದು ಕೇಂದ್ರದ ಲಸಿಕೆ ಸೇರಿದಂತೆ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಮೂಲಕ ಅಮಾಯಕರನ್ನು ಲಸಿಕೆ ಪಡೆಯುವಿಕೆಯಿಂದ ವಂಚಿಸಲಾಗಿತ್ತು. ಆದರೆ ಈಗ ಲಸಿಕೆ ಮಹತ್ವ ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ನಾನು ಎಲ್ಲರಲ್ಲಿ ಮನವಿ ಮಾಡುತ್ತೇನೆ, ಎಲ್ಲರೂ ಲಸಿಕೆ ಪಡೆಯಿರಿ, ಇತರರನ್ನೂ ಲಸಿಕೆ ಪಡೆಯಲು ಪ್ರೇರಿಪಿಸಿ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಕಡಿಮೆಯಾಗಿದೆ. ಆದರೆ ಕೊರೋನಾ ಇಲ್ಲ ಎಂದು ಮೈಮರೆಯಬಾರದು. ಕೊರೋನಾ ನಿಯಮ ಪಾಲಿಸಬೇಕು ಎಂದು ಮೋದಿ ಹೇಳಿದ್ದಾರೆ.

ಕೊರೋನಾ 2ನೇ ಅಲೆ ಅಬ್ಬರಿಸಲು ಆರಂಭಿಸಿದ ಬಳಿಕ ರಾಜ್ಯದಲ್ಲಿ ಆಸ್ಪತ್ರೆ ಬೆಡ್, ಆಕ್ಸಿಜನ್ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿತ್ತು. ಇದರ ನಡುವೆ ಪ್ರಧಾನಿ ಮೋದಿ ಏಪ್ರಿಲ್ 20 ರಂದು ದೇಶನ್ನುದ್ದೇಶಿ ಭಾಷಣ ಮಾಡಿದ್ದರು. ಈ ವೇಳೆ ಕೇಂದ್ರ ಸರ್ಕಾರ ಲಾಕ್‌ಡೌನ್ ಹೇರುವುದಿಲ್ಲ. ಲಾಕ್‌ಡೌನ್ ನಿರ್ಧಾರ ಆಯಾ ರಾಜ್ಯಗಳು ತೆಗೆದುಕೊಳ್ಳಲಿದೆ. ಆದರೆ ಲಾಕ್‌ಡೌನ್ ಅಂತಿಮ ನಿರ್ಧಾರವಾಗಿರಲಿ ಎಂದು ಸಲಹೆ ನೀಡಿದ್ದರು. 2ನೇ ಅಲೆಯಲ್ಲಿ ಇದೀಗ 2ನೇ ಬಾರಿಗೆ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.