ಪ್ರತಾಪ್ ಘಢ(ಜೂ.  07) ನನಗೆ ಈ ಮದುವೆ ಬೇಡ ಎಂದು ವಧು ಮಂಟಪದಿಂದ ಹೊರಗೆ ನಡೆದಿದ್ದಾಳೆ. ಸ್ಟೋರಿ ಕೊಂಚ ವಿಚಿತ್ರವಾಗಿದೆ. ತನ್ನ ಮದುವೆಗೆ ಕುಡಿದು ಬಂದ ವರ ಅಶ್ಲೀಲವಾಗಿ ನೃತ್ಯ ಮಾಡಿದ್ದೂ ಅಲ್ಲದೆ ವಧುವಿಗೂ ನೃತ್ಯ ಮಾಡು ಎಂದು ಒತ್ತಾಯ ಮಾಡುತ್ತಿದ್ದ.

 22 ವರ್ಷದ ವಧು ಮದುಮಗಳು ಮದುವೆ ನಿರಾಕರಿಸಿ ಹೊರಟಿದ್ದಾಳೆ.  ಶನಿವಾರ ರಾತ್ರಿ ಟಿಕ್ರಿಯಲ್ಲಿ ಈ ಘಟನೆ ನಡೆದಿದೆ. ವರನನ್ನು, ಅವನ ಸ್ನೇಹಿತರು ಜತೆಗೆ ಆತನ ಕುಟುಂಬದವರ ವರ್ತನೆ ನೋಡಿ ವಧು ಬೆಚ್ಚಿದದ್ದಾಳೆ.  ಮದ್ಯ ಸೇವಿಸಿ ಬಂದು ಮದುಮಗಳನ್ನು ಡ್ಯಾನ್ಸ್ ಪ್ಲೋರ್ ಗೆ ಎಳೆದುಕೊಂಡು ಹೋಗಲು ವರ ಯತ್ನ ಮಾಡಿದಾಗ ಯುವತಿ ನಿರ್ಧಾರ ತೆಗೆದುಕೊಂಡಿದ್ದಾಳೆ.

ಮಂಟಪದಲ್ಲಿ ವರನ ನಾಗಿನಿ ಡ್ಯಾನ್ಸ್.. ಮದುವೆ ಕ್ಯಾನ್ಸಲ್

ಇದಾದ ಮೇಲೆ ವಾಗ್ವಾದ ಶುರುವಾಗಿದ್ದು ವರದಕ್ಷಿಣೆ ಎಂದು ನೀಡಿದ್ದ ಗಿಫ್ಟ್ ಗಳನ್ನು ವಾಪಸ್ ಕೊಡಲು ವಧುವಿನ ಕುಟುಂಬ ಪಟ್ಟುಹಿಡಿದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಿದ್ದಾರೆ. ಮತ್ತೆ ಮದುವೆಯಾಗು ಎಂದು ವಧುವನ್ನು ಮನವೊಲಿಸುವ ಕೆಲಸವೂ ಆಗಿದೆ. ವರನ ಕಡೆಯವರು ಮದುವೆ ಹೆಸರಿನಲ್ಲಿ ಪಡೆದುಕೊಂಢಿದ್ದ ಎಲ್ಲ ವಸ್ತುಗಳನ್ನು ಹಿಂದಕ್ಕೆ ಕೊಡಲು ಒಪ್ಪಿಕೊಂಡ ನಂತರ ಪ್ರಕರಣ ಅಂತ್ಯವಾಗಿದೆ. 

ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಕ್ರಿಯೆ ಬಂದಿದ್ದು ಅನೇಕರು ಯುವತಿ ಪರವಾಗಿ ನಿಂತಿದ್ದಾರೆ. ಯುವತಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಮಾಡಿದ್ದಾಳೆ ಎಂದಿದ್ದಾರೆ.