Asianet Suvarna News

ಮುಜುಗರಕ್ಕೀಡಾದ ಆನ್‌ಲೈನ್ ಕ್ಲಾಸ್, ಹೇಗಿದೆ ದರ್ಶನ್ ಫಾರ್ಮ್‌ಹೌಸ್; ಸೆ.15ರ ಟಾಪ್ 10 ಸುದ್ದಿ!

ಆನ್‌ಲೈನ್ ಕ್ಲಾಸ್ ನಡೆಯುತ್ತಿರುವಾಗಲೇ ಮಕ್ಕಳು ಹಾಗೂ ಟೀಚರ್ ಕಕ್ಕಾಬಿಕ್ಕಿಯಾಗಿದ ಘಟನೆ ನಡೆದಿದೆ. ಭಾಷೆ ಕುರಿತು ನಡೆಯುತ್ತಿರುವ ಸಮರಕ್ಕೆ ಅಂತ್ಯಹಾಡುವ ಪ್ರಯತ್ನವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾಡಿದ್ದಾರೆ. ಡ್ರಗ್ಸ್ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್ ಆಗಿದ್ದಾರೆ. ಸೂಪರ್ ಓವರ್ ಗೆಲ್ಲಿಸಿಕೊಡಬಲ್ಲ ಬ್ಯಾಟ್ಸ್‌ಮನ್, ದರ್ಶನ್ ಫಾರ್ಮ್ ಹೌಸ್ ಸೇರಿದಂತೆ ಸೆಪ್ಟೆಂಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Online class to Darshan Farm house top 10 news of September 15
Author
Bengaluru, First Published Sep 15, 2020, 5:20 PM IST
  • Facebook
  • Twitter
  • Whatsapp

ಆನ್‌ಲೈನ್‌ ಕ್ಲಾಸ್ ವೇಳೆ ಪ್ರಸಾರವಾಯ್ತು ಪೋರ್ನ್, ಕಕ್ಕಾಬಿಕ್ಕಿಯಾದ ಮಕ್ಕಳು, ಟೀಚರ್..!...

ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತಲೇ ಇವೆ.

ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು!...

ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು. ಯಾವುದೇ ಭಾಷೆಯನ್ನು ಹೇರಬಾರದು ಅಥವಾ ವಿರೋಧಿಸಬಾರದು. ಭಾರತದ ಎಲ್ಲ ಭಾಷೆಗಳಿಗೂ ಶ್ರೀಮಂತ ಇತಿಹಾಸವಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಡ್ರಗ್ ಮಾಫಿಯಾ : ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್...

ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳು  ಪ್ರಕರಣದಲ್ಲಿ ಹೊರಬರುತ್ತಿದೆ.  ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ   ಆರೋಪಿಯಾಗಿದ್ದಾರೆ. ಇದೀಗ ಆದಿತ್ಯ ಆಳ್ವಾ ರೆಸಾರ್ಟ್ ಮ್ಯಾನೇಜರ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ. 

ಐಪಿಎಲ್ 2020: ಈ 4 ತಂಡಗಳಲ್ಲಿದ್ದಾರೆ ಸೂಪರ್ ಓವರ್ ಗೆಲ್ಲಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್‌ಗಳು..!

 ನಾಲ್ಕು ತಂಡಗಳು ಬಲಿಷ್ಠ ಸೂಪರ್ ಓವರ್ ಸ್ಪೆಷಲಿಸ್ಟ್‌ಗಳನ್ನು ಹೊಂದಿದ್ದು, ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಯಾವವು ಆ 4 ತಂಡಗಳು? ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಸಿಕ್ಕಿದೆ.


ಶೂಟಿಂಗ್‌ ಮಾಡುತ್ತಲೇ ಕುಸಿದು ಬಿದ್ದ ಖ್ಯಾತ ನಟ ಸಾವು!...

ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತೆ ಮೂಡಿಸುವ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ನಟ ಪ್ರಬೀಶ್‌ ಚಕ್ಕಲಕ್ಕಲ್ (44) ಕೊನೆ ಉಸಿರೆಳೆದಿದ್ದಾರೆ.


ಹೇಗಿದೆ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮೈಸೂರು ಫಾರ್ಮ್‌ಹೌಸ್!...

ನಟ ದರ್ಶನ್‌ ಮೈಸೂರಿನಲ್ಲಿ ಮನೆ ಹೊಂದಿದ್ದರೂ ಟಿ. ನರಸಿಪುರದಲ್ಲಿರುವ ವಿನೀಶ್ ಫಾರ್ಮ್‌ಹೌಸ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ತಮ್ಮಗಿಷ್ಟದ ರೀತಿಯಲ್ಲಿ ಡಿಸೈನ್ ಮಾಡಿಕೊಂಡಿರುವ ಫಾರ್ಮ್‌ಹೌಸ್‌ ಹೇಗಿದೆ ಗೊತ್ತಾ?

ಬ್ಯಾನ್ ಆದ ಟಿಕ್‌ಟಾಕ್ ಭಾರತಕ್ಕೆ ಮತ್ತೆ ಎಂಟ್ರಿ?

 ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಒರಾಕಲ್‌ ಕಂಪನಿಯೊಂದಿಗೆ ಪಾಲುದಾರಿಕೆ ಹಂಚಿಕೊಳ್ಳುವ ಮೂಲಕ ಅಮೆರಿಕದಲ್ಲಿ ಟಿಕ್‌ಟಾಕ್‌ ಉದ್ಯಮವನ್ನು ಮಾರಾಟ ಮಾಡುವ ಪ್ರಸ್ತಾಪಕ್ಕೆ ಚೀನಾದ ಬೈಟ್‌ ಡ್ಯಾನ್ಸ್‌ ಎಳ್ಳು ನೀರು ಬಿಟ್ಟಿದೆ. ಹಾಗಾದ್ರೆ ಭಾರತದಲ್ಲಿ ಬ್ಯಾನ್ ಆದ ಟಿಕ್‌ಟಾಕ್ ಮತ್ತೆ ಕಾರ್ಯಾರಂಭ ಮಾಡುತ್ತಾ? ಅಧಿಕಾರಿಗಳು ಹೇಳೋದೇನು? 

ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಭಾರೀ ಕುಸಿತ, ಇಲ್ಲಿದೆ ಇಂದಿನ ದರ!

ಕೊರೋನಾತಂಕ ನಡುವೆ ಭಾರೀ ಬದಲಾವಣೆ ಕಂಡಿದ್ದು ಚಿನ್ನದ ದರ. ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ತಾಮ್ರದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ. 

ನೊವಸ್ ಎಲೆಕ್ಟ್ರಿಕ್ ಬೈಕ್ ಅನಾವರಣ, ಇದು ದುಬಾರಿ EV!...

ದುಬಾರಿ ಬೈಕ್ ಈಗಿನ ಕಾಲದಲ್ಲಿ ಹೊಸದೇನಲ್ಲ. ಮಾರುಕಟ್ಟೆಯಲ್ಲಿ ಹಲವು ದುಬಾರಿ ಬೈಕ್‌ಗಳು ಲಭ್ಯವಿದೆ. ಇದೀಗ ನೊವಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡಿದೆ. ಬೈಕ್‌ನಲ್ಲಿ ಹೆಚ್ಚಿನ ವಿಶೇಷತೆಗಳಿಲ್ಲ, ಆದರೆ ಈ ಬೈಕ್ ಡಿಸೈನ್‌ಗೆ ಬಾರಿ ಬೆಲೆ ತೆರಬೇಕು.

Exclusive: ಸಿಸಿಬಿ ಫೈಲ್‌ನಲ್ಲಿ ಡ್ರಗ್ಗಿಣಿಯರ ರೋಚಕ ಕತೆಗಳು, ಕೆಜಿಗೆ ಆರು ಕೋಟಿ!...

 ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಫೈಲ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ. ಇಡೀ ಫೈಲ್ ಸುವರ್ಣ ನ್ಯೂಸ್ ಬಳಿ ಇದ್ದು ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Follow Us:
Download App:
  • android
  • ios