ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತೆ ಮೂಡಿಸುವ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ನಟ ಪ್ರಬೀಶ್‌ ಚಕ್ಕಲಕ್ಕಲ್ (44) ಕೊನೆ ಉಸಿರೆಳೆದಿದ್ದಾರೆ. 

ಮಾಲಿವುಡ್‌ ಚಿತ್ರರಂಗದ ಹೆಸರಾಂತ ನಟ ಹಾಗೂ ಡಬ್ಬಿಂಗ್ ಆರ್ಟಿಸ್ಟ್‌ ಪ್ರವೀಶ್‌ ಚಕ್ಕಲಕ್ಕಲ್ ಸೋಮವಾರ ಕೊಚ್ಚಿನ್‌ನಲ್ಲಿ ಚಿತ್ರೀಕರಣ ಮಾಡುತ್ತಲೇ ಮೃತಪಟ್ಟಿದ್ದಾರೆ.

ಹಿರಿಯ ತಮಿಳು ನಟ ಕೊರೋನಾದಿಂದ ಸಾವು

'ಕೊಚ್ಚಿನ್ ಕೊಲಾಜ್'ಎಂದು ಜಾಗೃತಿ ಮೂಡಿಸುವ ಕಿರುಚಿತ್ರ ಚಿತ್ರೀಕರಣ ಮಾಡುತ್ತಿದ್ದ ಪ್ರಬೀಶ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸಹ ಕಲಾವಿದರಿಂದ ನೀರು ಕೇಳಿ ಕುಡಿದಿದ್ದಾರೆ. ಆದರೂ ಅಸ್ಥಸ್ತವಾಗಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ನೀಡಿರುವ ಮಾಹಿತಿ ಪ್ರಕಾರ ನಟ ಆಸ್ಪತ್ರೆ ಸೇರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಜೆಎಸ್‌ಡಬ್ಲು ಸೀಮೆಂಟ್‌ ಲಿಮಿಟೆಡ್‌ ಕಂಪನಿ ಜೊತೆ ಕೆಲಸ ಮಾಡುತ್ತಲೇ ಇವರು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಹತ್ತಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಪ್ರಬೀಶ್‌ ಕೊನೆಯ ಸಿನಿಮಾವೇ 'ದಿ ಕುಂಗ್ ಫು ಮಾಸ್ಟರ್‌' ಎಂದು.

ಸೈಕ್ಲಿಂಗ್​ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮಾಜಿ ಶಾಸಕರ ಪುತ್ರ ಸಾವು

ಪತ್ನಿ ಜಾನ್ಸಿ, ಪುತ್ರಿ ತಾನ್ಯಾ ಹಾಗೂ ತಂದೆ ಜೋಸೆಫ್‌ ಅವರನ್ನು ಅಗಲಿರುವ ಪ್ರಬೀಶ್ ಆತ್ಮಕ್ಕೆ ಶಾಂತಿ ಸಿಗಲಿ.