ನೊವಸ್ ಎಲೆಕ್ಟ್ರಿಕ್ ಬೈಕ್ ಅನಾವರಣ, ಇದು ದುಬಾರಿ EV!

ದುಬಾರಿ ಬೈಕ್ ಈಗಿನ ಕಾಲದಲ್ಲಿ ಹೊಸದೇನಲ್ಲ. ಮಾರುಕಟ್ಟೆಯಲ್ಲಿ ಹಲವು ದುಬಾರಿ ಬೈಕ್‌ಗಳು ಲಭ್ಯವಿದೆ. ಇದೀಗ ನೊವಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡಿದೆ. ಬೈಕ್‌ನಲ್ಲಿ ಹೆಚ್ಚಿನ ವಿಶೇಷತೆಗಳಿಲ್ಲ, ಆದರೆ ಈ ಬೈಕ್ ಡಿಸೈನ್‌ಗೆ ಬಾರಿ ಬೆಲೆ ತೆರಬೇಕು.

Novus electric motorcycle unveil expensive electric bike in Germany

ಜರ್ಮನಿ(ಸೆ.15): ಆಟೋಮೊಬೈಲ್ ಕ್ಷೇತ್ರದಲ್ಲಿ ದುಬಾರಿ, ಐಷಾರಾಮಿ, ಸ್ಟೈಲೀಶ್, ಕಂಫರ್ಟ್ ವಾಹನ ನೀಡುತ್ತಿರುವ ಹೆಗ್ಗಳಿಕೆಗೆ ಜರ್ಮನಿಗಿದೆ. ಇದೀಗ ಜರ್ಮನಿಯ ಸ್ಟಾರ್ಟ್ಅಪ್ ಕಂಪನಿ ನೊವಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಇದರ ವಿನ್ಯಾಸವೇ  ಈ ಬೈಕ್‌ನ ಪ್ರಮುಖ ಆಕರ್ಷಣೆ.

100 ಕಿ.ಮೀ ಮೈಲೇಜ್, ಕಡಿಮೆ ಬೆಲೆ; ಬಿಡುಗಡೆಯಾಗುತ್ತಿದೆ ಆಟಮ್ 1.0 ಎಲೆಕ್ಟ್ರಿಕ್ ಬೈಕ್!.

ನೊವಸ್ ಕಂಪನಿ ಈ ಬೈಕ್‌ ಉತ್ಪಾದನೆಗಿಂತ ಇದರ ಡಿಸೈನ್‌ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಸುದೀರ್ಘ ದಿನ ತೆಗೆದುಕೊಳ್ಳಲಾಗಿದೆ. ಹಲವು ಬಾರಿ ಚರ್ಚೆ ನಡೆಸಿ ಅಂತಿಮ ರೂಪ ನೀಡಲಾಗಿದೆ. ಜೊತೆಗೆ ಪವರ್‌ಫುಲ್ ಮೋಟಾರ್ ಬಳಸಲಾಗಿದೆ. ಹೀಗಾಗಿ ನೊವಸ್ ಎಲೆಕ್ಟ್ರಿಕ್ ಬೈಕ್ 23.67 BHP ಪವರ್ ನೀಡಲಿದೆ. ಇನ್ನು ಗರಿಷ್ಟ ವೇಗ 120 kmph. 

ಶೀಘ್ರದಲ್ಲೇ ಕಡಿಮೆ ಬೆಲೆಯ KRIDN ಎಲೆಕ್ಟ್ರಿಕ್ ಬೈಕ್ ಬಿಡುಗಡೆ!

50 ಕಿ.ಮೀ ವೇಗ ತಲುಪಲು ಕೇವಲ 3 ಸೆಕೆಂಡ್ ತೆಗೆದುಕೊಳ್ಳಲಿದೆ.   4.3 kWh ಬ್ಯಾಟರಿ ಬಳಸಲಾಗಿದೆ. ಬ್ಯಾಟರಿ ತೂಕ 19 ಕೆಜಿ ಇದ್ದು, ಬೈಕ್ ಒಟ್ಟು ತೂಕ 75 ಕೆ.ಜಿ. ಈ ಬೈಕ್‌ನ ಇನ್ನೊಂದು ವಿಶೇಷ ಅಂದರೆ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಸಂಪೂರ್ಣ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ನೀಡಲಿದೆ. ಇತರ ಎಲೆಕ್ಟ್ರಿಕ್ ಬೈಕ್ ಅಥವೂ ಸ್ಕೂಟರ್‌ಗೆ ಹೋಲಿಸಿದರೆ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜಿಂಗ್  ಈ ಬೈಕ್‌ನ ವಿಶೇಷತೆ.

ಕಡಿಮೆ ಸಮಯದಲ್ಲಿ ಚಾರ್ಜ್ ಆಗಲಿದೆ. ಇನ್ನು ಹೊಸ ವಿನ್ಯಾಸ ಹೊಂದಿದೆ. ಈ ಎರಡು ಕಾರಣಕ್ಕೆ ಈ ಬೈಕ್ ಬೆಲೆ 46,284 ಜರ್ಮನ್ ಯೂರೋ.  ಭಾರತೀಯ ರೂಪಾಯಿಗಳಲ್ಲಿ 40 ಲಕ್ಷ ರೂಪಾಯಿ.  ಈ ಬೆಲೆಗೆ ಭಾರತದಲ್ಲಿ  ದುಬಾರಿ ಹಾಗೂ ಐಷಾರಾಮಿ ಕಾರುಗಳನ್ನು ಖರೀದಿಸಬಹುದು.

Latest Videos
Follow Us:
Download App:
  • android
  • ios