ಆನ್‌ಲೈನ್ ಕ್ಲಾಸ್ ವೇಳೆ ಪ್ರಸಾರವಾಯ್ತು ಪೋರ್ನ್, ಕಕ್ಕಾಬಿಕ್ಕಿಯಾದ ಮಕ್ಕಳು, ಟೀಚರ್..!
ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತಲೇ ಇವೆ.
ಭೋಪಾಲ್, (ಸೆ.15) ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಶಾಲಾ-ಕಾಲೇಜುಗಳು ಕ್ಲೋಸ್ ಆಗಿದ್ದು, ಮಕ್ಕಳಿಗೆ ಆನ್‌ಲೈನ್ ಪಾಠಗಳು ಶುರುವಾಗಿವೆ. ಆದ್ರ, ಈ ಆನ್‌ಲೈನ್ ಕ್ಲಾಸ್ ವೇಳೆ ಪೋರ್ನ್ ವಿಡಿಯೋ ಪ್ಲೇ ಆಗ್ಬಿಟ್ಟಿದೆ.
ಹೌದು..ಅಚ್ಚರಿ ಎನಿಸಿದರೂ ಸತ್ಯ, ಮಧ್ಯಪ್ರದೇಶದ ಶಿಯೋಪುರ ಎಂಬಲ್ಲಿ ವಾಟ್ಸಾಪ್ ಗ್ರೂಪ್ ನಲ್ಲಿ ಮಕ್ಕಳಿಗೆ ಆನ್‌ಲೈನ್ ಪಾಠ ಹೇಳಿಕೊಡಲಾಗ್ತಿತ್ತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಪೋರ್ನ್ ವಿಡಿಯೋ ಪ್ರಸಾರವಾಗಿದೆ.
ಬೆಂಗಳೂರು ಕಾಲೇಜಿನ ಆನ್‌ಲೈನ್ ಕ್ಲಾಸ್‌ನಲ್ಲಿ ಪೋರ್ನ್, ಎಲ್ಲಾ ಜೂಮ್ ಮಹಿಮೆ!
ಮೊಬೈಲ್ ನಲ್ಲಿ ಪೋರ್ನ್ ಚಿತ್ರ ಪ್ರಸಾರವಾಗ್ತಿದ್ದಂತೆ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಘಟನೆ ಬಳಿಕ ಪೋಷಕರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣವೇ ಶಿಕ್ಷಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರಂತೆ. ಘಟನೆ ನಂತ್ರ ಆನ್‌ಲೈನ್ ಕ್ಲಾಸ್ ಬಂದ್ ಮಾಡಲಾಗಿದ್ದು, ಈ ಬಗ್ಗೆ ಶಾಲಾ ಸಂಸ್ಥೆ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಇದೊಂದೇ ಅಲ್ಲ. ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಕೆಂಗೇರಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಥ ಘಟನೆ ನಡೆದುಹೋಗಿದೆ. ಕೆಮೆಸ್ಟ್ರಿ ಕ್ಲಾಸ್ ನಡೆಯುತ್ತಿದ್ದ ವೇಳೆ ಪೋರ್ನ್ ಚಿತ್ರ ಪ್ರಸಾರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದು ಕೇವಲ ಆನ್‌ಲೈನ್ ಕತೆಯಾಗಿದ್ರೆ, ಆನ್‌ಲೈನ್ ಮೀಟಿಂಗ್‌ನಲ್ಲಿ ಬೆತ್ತಲೆಯಾಗಿ ಓಡಾಡಿದ, ಆನ್‌ಲೈನ್ ಮೀಟಿಂಗ್‌ನಲ್ಲೇ ಕ್ಯಾಮೆರಾ ಆಫ್ ಮಾಡದೇ ಸ್ನಾನ ಮಾಡಿದ ಎಂಬೆಲ್ಲ ಘಟನೆಗಳು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.