Asianet Suvarna News Asianet Suvarna News

ಕಣ್ತುಂಬಿಕೊಳ್ಳಿ ಜಂಬೂ ಸವಾರಿ, 8 ಲಕ್ಷ ದಾಟಿದ ಕೊರೋನಾ ಮಹಾಮಾರಿ: ಅ.26ರ ಟಾಪ್ 10 ಸುದ್ದಿ!

ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದ್ದರೂ, ಸಂಭ್ರಮಕ್ಕೆ ಯಾವುದೇ ಕೊರತೆ ಇರಲಿಲ್ಲ. ರಾಜ್ಯದಲ್ಲಿ ಇಬ್ಬರು ಕೈನಾಯಕರು ಬಿಜೆಪಿ ಸೇರುತ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಇತ್ತ ಕೊರೋನಾ ಮಾಹಾಮಾರಿ ಸಂಖ್ಯೆ ಕರ್ನಾಟಕದಲ್ಲಿ 8 ಲಕ್ಷ ದಾಟಿದೆ. ಐಪಿಎಲ್ ಟೂರ್ನಿಯ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಗೊಂಡಿದೆ. ರಶ್ಮಿಕಾ ಮಂದಣ್ಣಾ ದಸರಾ ಲುಕ್,  ರಾಜ್ಯಕ್ಕೆ ಆವರಿಸಿದ ಮಳೆ ಭೀತಿ ಸೇರಿದಂತೆ ಅಕ್ಟೋಬರ್ 26 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ.

mysore dasara 2020 jambu savari to Coronavirus top 10 news of ocotber 26 ckm
Author
Bengaluru, First Published Oct 26, 2020, 4:59 PM IST

ಬಿಜೆಪಿಗೆ ಬರುತ್ತಾರಾ ಇಬ್ಬರು ಕಾಂಗ್ರೆಸ್ ನಾಯಕರು : ಪ್ರಹ್ಲಾದ್ ಜೋಶಿ ರಿಯಾಕ್ಷನ್...

mysore dasara 2020 jambu savari to Coronavirus top 10 news of ocotber 26 ckm

ರಾಜ್ಯದಲ್ಲಿ ಇದೀಗ ಇಬ್ಬರು ಕೈ ನಾಯಕರು ಬಿಜೆಪಿ ಸೇರುವ ವಿಚಾರ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿದರು

ಕಮಲಾ ಹ್ಯಾರಿಸ್‌, ಟ್ರಂಪ್‌ಗೆ ಬಿಸಿ ತುಪ್ಪವಾದ ಸಂದರ್ಶನ: ಅರ್ಧದಲ್ಲೇ ಎದ್ದು ಹೋದ ಅಮೆರಿಕ ಅಧ್ಯಕ್ಷ!...

mysore dasara 2020 jambu savari to Coronavirus top 10 news of ocotber 26 ckm

ಅಮೆರಿಕದಲ್ಲಿ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಮತದಾನ ನಡೆಸಲು ನಿಂತವರ ಓಲೈಸಲು ಕಮಲಾ ಹ್ಯಾರಿಸ್ ಕಸರತ್ತು ನಡೆಸಿದ್ದಾರೆ. ಹೀಗಿರುವಾಗ ಅವರು ಅಂತಿಮ ಕ್ಷಣದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. 

ಸರ್ವಾಲಂಕಾರ ಭೂಷಿತೆಯಾಗಿ ರಾರಾಜಿಸುತ್ತಿರುವ ನಾಡದೇವತೆ; ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಿ...

mysore dasara 2020 jambu savari to Coronavirus top 10 news of ocotber 26 ckm

ಮೈಸೂರು ದಸರಾ ಎಷ್ಟೊಂದು ಸುಂದರ... ಹೌದು. ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಸಂಭ್ರಮಕ್ಕೇನೂ ಕೊರತೆ ಇಲ್ಲ. ಆದರೆ ಸರಳ ದಸರಾ ಆಚರಿಸಲಾಗುತ್ತಿದೆ. 

ಕರ್ನಾಟಕದಲ್ಲಿ 8 ತಿಂಗಳಲ್ಲಿ 8 ಲಕ್ಷ ಕೊರೋನಾ ಕೇಸ್..!...

mysore dasara 2020 jambu savari to Coronavirus top 10 news of ocotber 26 ckm

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ.

IPL 2020: ಪ್ಲೇ ಆಫ್‌ & ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ..!...

mysore dasara 2020 jambu savari to Coronavirus top 10 news of ocotber 26 ckm

ಹೀಗಿರುವಾಗಲೇ ಬಿಸಿಸಿಐ ಈ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ಲೇ ಆಫ್‌ ಪಂದ್ಯಗಳು ಯಾವ ಮೈದಾನದಲ್ಲಿ ನಡೆಯಲಿದೆ ಹಾಗೂ ಫೈನಲ್‌ ಪಂದ್ಯಕ್ಕೆ ಯಾವ ಮೈದಾನ ಆತಿಥ್ಯವನ್ನು ವಹಿಸಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ದಸರಾಗೆ ರಶ್ಮಿಕಾ ಮಂದಣ್ಣ ಲುಕ್ ಹೀಗಿತ್ತು..! ಇಲ್ನೋಡಿ ಫೊಟೋಸ್...

mysore dasara 2020 jambu savari to Coronavirus top 10 news of ocotber 26 ckm

ನಟಿ ರಶ್ಮಿಕಾ ಮಂದಣ್ಣ ದಸರಾಗೆ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಮಸ್ತೆ ಪೋಸ್ ಕೊಟ್ಟ ನಟಿ ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಸುರಿಯುತ್ತೆ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ...

mysore dasara 2020 jambu savari to Coronavirus top 10 news of ocotber 26 ckm

ರಾಜ್ಯದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಈ 21 ಆಪ್‌ ಬಗ್ಗೆ ಎಚ್ಚರವಿರಲಿ, ನಿಮ್ಮ ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್ ಮಾಡಿ!...

mysore dasara 2020 jambu savari to Coronavirus top 10 news of ocotber 26 ckm

ಸೈಬರ್ ಸೆಕ್ಯುರಿಟಿ ಫರ್ಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 21 ಅಡ್ವೆಂಚರ್ ಗೇಮಿಂಗ್ ಆಪ್ ಬಗ್ಗೆ ಎಚ್ಚರಿಕೆ ನೀಡಿದೆ. ಈ ಕಂಪನಿ ಅನ್ವಯ ಈ 21 ಆಪ್‌ಗಳು ಹಿಡನ್ ಆಡ್‌ ಆದ ಫ್ಯಾಮಿಲಿ ಟ್ರೋಜನ್ ಭಾಗವೆಂದು ತಿಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಗೂಗಲ್ ಈ ಗೇಮಿಂಗ್ ಆಪ್‌ಗಳ ವರದಿ ಪರಿಶೀಲನೆ ಆರಂಭಿಸಿದೆ. ಇನ್ನು ಸೆನ್ಸರ್ ಟವರ್ ನೀಡಿದ ದಾಖಲೆಯನ್ವಈ ಆಪ್‌ಗಳನ್ನು ಗೂಗಲ್ ಆಪ್‌ನಿಂದ ಬರೋಬ್ಬರಿ 80 ಲಕ್ಷ ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಭಾರತದಲ್ಲಿ 5 ವರ್ಷ ಪೂರೈಸಿದ ಮಾರುತಿ ಬಲೆನೋ, ಸಂಭ್ರಮದಲ್ಲಿ ಮತ್ತೊಂದು ದಾಖಲೆ!...

mysore dasara 2020 jambu savari to Coronavirus top 10 news of ocotber 26 ckm

ಭಾರತದ ಅತ್ಯಂತ ಜನಪ್ರಿಯ ಹಾಗೂ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಬಲೆನೋ ಕಾರು ಬಿಡುಗಡೆಯಾಗಿ 5 ವರ್ಷಗಳು ಸಂದಿದೆ. ಕಳೆದ 5 ವರ್ಷದಲ್ಲಿ ಮಾರುತಿ ಬೆಲೆನೋ ಕಾರು ಹಲವು ದಾಖಲೆ ಬರೆದಿದೆ. ಇದೀಗ 5 ವರ್ಷದ ಪೂರೈಸಿದ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ-ಡಿಕೆಶಿ ಕಾರಣ: ಹೀಗೊಂದು ಗಂಭೀರ ಆರೋಪ...

mysore dasara 2020 jambu savari to Coronavirus top 10 news of ocotber 26 ckm

ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ  ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಸಾವನ್ನಪ್ಪಿದ್ದು, ಇವರ ಸಾವಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಲಾಗಿದೆ.

Follow Us:
Download App:
  • android
  • ios