ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ, ಮೂರು ನಗರಗಳಿಗೆ ಮೂಲ ಹೆಸರಿಡಲು ವಿಧಾನಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಯಾವ ಮೂರು ನಗರದ ಹೆಸರು ಬದಲಾವಣೆ ಮಾಡಲಾಗುತ್ತಿದೆ?  

ಜೈಪುರ (ಫೆ.27) ಭಾರತದಲ್ಲಿ ನಗರ, ಪಟ್ಟಣ, ಜಿಲ್ಲೆ ಹೆಸರು ಬದಲಾವಣೆ ಹೊಸದೇನಲ್ಲ. ಮರುನಾಮಕರಣದಲ್ಲಿ ಕ್ರಾಂತಿ ಮಾಡಿದವರ ಪೈಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಇತ್ತೀಚೆಗೆ ಕೇರಳ ತನ್ನ ರಾಜ್ಯದ ಹೆಸರನ್ನೇ ಬದಲಾಯಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಸಂಪುರಣ ಅನುಮೋದನೆ ನೀಡಿದೆ. ಇದೀಗ ಕೇರಳ ರಾಜ್ಯ ಕೇರಳಂ ಆಗಿ ಮರುನಾಮಕರ ಮಾಡಲಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಮೂರು ನಗರದ ಹೆಸರು ಬದಲಾವಣೆಗೆ ಘೋಷಣೆ ಮಾಡಲಾಗಿದೆ.

ಮೂರು ನಗರಗಳ ಬದಲಾವಣೆ ಘೋಷಣೆ ಮಾಡಿದ್ದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ. ರಾಜಸ್ಛಾನದ ಮೂರು ನಗರಗಳ ಹೆಸರು ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. ಈ ಮೂರು ನಗರಗಳೆಂದರೆ:

  • ಮೌಂಟ್ ಅಬು
  • ಜಹಝಪುರ್
  • ಕಾಮ

ರಾಜಸ್ಥಾನದಲ್ಲಿರುವ ಏಕೈಕ ಪರ್ವತ ಪ್ರದೇಶಗಳ ಪ್ರವಾಸಿ ತಾಣ ಮೌಂಟ್ ಅಬು. ಇದು ಬ್ರಿಟಿಷರ ಕಾಲದಲ್ಲಿ ಈ ಹೆಸರು ಬಂದಿತ್ತು. ಇದೀಗ ಮೌಂಟ್ ಅಬು ಮೂಲ ಹೆಸರಿಗೆ ಮರಳುತ್ತಿದೆ. ಮೌಂಟ್ ಅಬು ಹೆಸರನ್ನು ಅಬು ರಾಜ್ ಎಂದು ಮರುನಾಮಕರಣ ಮಾಡಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಇನ್ನು ಜಹಝಪುರ ರಜಪೂತರ ರಾಜರ ಪ್ರಮುಖ ಸ್ಥಳವಾಗಿತ್ತು. ಇಲ್ಲಿ ಐತಿಹಾಸಿಕ ದೇವಸ್ಥಾನಗಳು ಇವೆ. ರಾಜ ಮಹಾರಾಜರ ಕಾಲದಲ್ಲೇ ಇದು ರಜಪೂತರ ಆಳ್ವಿಕೆಯ ಪ್ರದೇಶವಾಗಿತ್ತು. ದಾಳಿಕೋರರ ದಾಳಿಗೆ ನಲುಗಿದ ಇದು ಜಹಝ್‌ಪುರ ಎಂದಾಗಿತ್ತು. ಇದೀಗ ರಾಜಸ್ಥಾನ ಸರ್ಕಾರ ಯಗ್ಯಾಪುರ್ ಎಂದು ಮರುನಾಮಕರಣ ಮಾಡುತ್ತಿದೆ. ಇನ್ನು ಕಾಮಾ ನಗರ ಭಗವಾನ್ ಶ್ರೀಕೃಷ್ಣನ ಜೊತೆ ಬೆಸೆದುಕೊಂಡಿರುವ ನಗರ. ಈ ನಗರದ ಹೆಸರನ್ನು ಕಾಮವನ ಎಂದು ಮರುನಾಮಕರಣ ಮಾಡಲಾಗುತ್ತಿದೆ.

ಬಾಂಗ್ಲಾ ಪ್ರಸ್ತಾಪ ತಿರಸ್ಕಾರ

ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡೇಬೇಕು ಅನ್ನೋ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶಿಗಳು ತುಂಬಿಕೊಂಡಿದ್ದಾರೆ ಅನ್ನೋ ಆರೋಪವಿದೆ. ಇದರ ಬೆನ್ನಲ್ಲೇ ಬಾಂಗ್ಲಾ ಎಂಬ ಮರುನಾಮಕರಣಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.