ಮನ:ಶಾಂತಿಗಾಗಿ ಜನ ಏನು ಬೇಕಾದ್ರೂ ಮಾಡ್ತಾರೆ. ಇದನ್ನೇ ಮಹಿಳೆಯೊಬ್ಬಳು ಬ್ಯುಸಿನೆಸ್ ಮಾಡ್ಕೊಂಡಿದ್ದಾಳೆ. ಬರೀ ಬಣ್ಣದ ಕ್ಯಾಂಡಲ್ ಮಾರಾಟ ಮಾಡಿ ಒಂದಲ್ಲ ಎರಡಲ್ಲ 63 ಕೋಟಿ ಸಂಪಾದಿಸಿದ್ದಾಳೆ. ಆಕೆ ಬ್ಯುಸಿನೆಸ್ ಟ್ರಿಕ್ ಏನು ಗೊತ್ತಾ? 

ಒತ್ತಡಕ್ಕೊಳಗಾದ ಯುವಕರು ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸಾಂತ್ವನದ ಹುಡುಕಾಟ ನಡೆಸ್ತಿದ್ದಾರೆ. ಇದನ್ನೇ ಅನೇಕರು ಬಂಡವಾಳ ಮಾಡ್ಕೊಂಡಿದ್ದಾರೆ. ಚೀನಾ ಮಹಿಳೆಯೊಬ್ಬಳು ಬರೀ ಬಣ್ಣದ ಮೇಣದಬತ್ತಿ (colored candle) ಮಾರಾಟ ಮಾಡಿ 63 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಯುವಕರು ತಮ್ಮ ಪ್ರೀತಿಯ ಸಂಬಂಧವನ್ನು ಮತ್ತೆ ಚಿಗುರಿಸಲು ಮಹಿಳೆ ಮಾರಾಟ ಮಾಡ್ತಿದ್ದ ಬಣ್ಣದ ಕ್ಯಾಂಡಲ್ ಗೆ ದುಬಾರಿ ಹಣ ನೀಡಿ ಖರೀದಿ ಮಾಡ್ತಿದ್ದರು. ಈಗ ಮಹಿಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ.

Add Asianetnews Kannada as a Preferred SourcegooglePreferred

ಮೇಣದಬತ್ತಿ ಮಾರಾಟ ಮಾಡಿ 63 ಕೋಟಿ ಸಂಪಾದನೆ

ಲಿ ಜುಫಾನ್ ಎಂಬ ಇನ್ಫ್ಲುಯೆನ್ಸರ್, ರಷ್ಯಾದ ರಿಯಾಲಿಟಿ ಶೋ ದಿ ಬ್ಯಾಟಲ್ ಆಫ್ ಸೈಕಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದಳು. ನಂತ್ರ ಸೋಶಿಯಲ್ ಮೀಡಿಯಾದಲ್ಲಿ 600,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು. ಅಲ್ಲಿ ಅವಳು ಕಾರಿನ ಟ್ರಂಕ್ನಲ್ಲಿ ಅಡಗಿದ್ದ ವ್ಯಕ್ತಿಯನ್ನು ಮೇಣದಬತ್ತಿಯನ್ನು ಬಳಸಿ ಪತ್ತೆ ಮಾಡಿದ್ದಳು. ಭವಿಷ್ಯದಲ್ಲಿ ಏನಾಗುತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳ್ತೇನೆ ಅಂತ ಲಿ ಜುಫಾನ್ ನಂಬಿಸಿದ್ದಳು.

ಗೊಲ್ಲರಹಟ್ಟಿ ಕಾವ್ಯಾಳನ್ನು 8 ವರ್ಷ ಪ್ರೀತಿಸಿ, ನಿಶ್ಚಿತಾರ್ಥ ಬಳಿಕ ವರದಕ್ಷಿಣೆಗಾಗಿ ಕೈಕೊಡಲು ಮುಂದಾದ ಶಿಕ್ಷಕ!

ಚೀನಾಕ್ಕೆ ವಾಪಸ್ ಆಗ್ತಿದ್ದಂತೆ ಲಿ ಜುಫಾನ್, ಬಯಕೆ ಈಡೇರಿಸಬಲ್ಲ ಕ್ಯಾಂಡಲ್ ಗಳನ್ನು ಆನ್ಲೈನ್ ಮಾರಾಟ ಮಾಡಲು ಶುರು ಮಾಡಿದ್ದಳು. ಈ ಕ್ಯಾಂಡಲ್ ಗಳನ್ನು ಹರಳು ಮತ್ತು ಒಣಗಿದ ಹೂಗಳಿಂದ ಮಾಡಲಾಗಿತ್ತು. ಅದಕ್ಕೆ ಸಾರಭೂತ ತೈಲಗಳನ್ನು ಮಿಕ್ಸ್ ಮಾಡಲಾಗಿತ್ತು. ಬೇರೆ ಬೇರೆ ಮಿಶ್ರಣದ ಕ್ಯಾಂಡಲ್ ಬೇರೆ ಬೇರೆ ಆಸೆ ಈಡೇರಿಸುತ್ತೆ ಅಂತ ನಂಬಿಸಿ ಲಿ ಜುಫಾನ್ ಜನರಿಗೆ ಮೋಸ ಮಾಡ್ತಿದ್ದಳು.

ಆರ್ಥಿಕ ಸಮಸ್ಯೆ ಪರಿಹಾರ, ವೃತ್ತಿ ಜೀವನ, ಪ್ರೀತಿಯಲ್ಲಿ ಯಶಸ್ಸು ಸೇರಿದಂತೆ ಎಲ್ಲದಕ್ಕೂ ಈ ಮೇಣದಬತ್ತಿ ಪರಿಹಾರ ನೀಡುತ್ತೆ ಎಂದು ಲಿ ಜುಫಾನ್ ಮಾರಾಟ ಮಾಡುತ್ತಿದ್ದಳು. ಒಂದು ಕ್ಯಾಂಡಲ್ ಗೆ 2,888 ಯುವಾನ್ ಅಂದ್ರೆ ಸುಮಾರು ಒಂದು ಲಕ್ಷ ರೂಪಾಯಿ ಚಾರ್ಜ್ ಮಾಡ್ತಿದ್ದಳು ಲಿ ಜುಫಾನ್. ಈ ಮೇಣದಬತ್ತಿಗಳು ಟ್ರಿಪಲ್ ಲಕ್ ಆವೃತ್ತಿಯಂತಹ ಮೇಣದಬತ್ತಿಯನ್ನು ಒಳಗೊಂಡಿತ್ತು. ಲಿ ಜುಫಾನ್, ಆನ್ಲೈನ್ ನಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ವಿಡಿಯೋಗಳನ್ನು ತಯಾರಿಸಲು ತಂಡವನ್ನು ನೇಮಿಸಿಕೊಂಡಿದ್ದಳು. ಅಲ್ದೆ ಆನ್ಲೈನ್ ಭವಿಷ್ಯವಾಣಿಯನ್ನೂ ಹೇಳ್ತಿದ್ದಳು.

 ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಹಿಗ್ಗಾಮುಗ್ಗಾ ಥಳಿಸಿದ ಅತ್ತೆ

ಬಣ್ಣ ಬಯಲು

ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರಿಯೊಬ್ಬರು ಲಿ ಜುಫಾನ್ 5,888 ಯುವಾನ್ ಪಾವತಿಸಿ ಮೇಣದಬತ್ತಿ ಖರೀದಿ ಮಾಡಿದ್ದರು. ಆದ್ರೆ ಇದ್ರಿಂದ ಯಾವುದೇ ಪರಿಣಾಮ ಆಗಿರಲಿಲ್ಲ. ಹಾಗಾಗಿ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಲಿ ಜುಫಾನ್ ಬಂಧಿಸಿದ್ದಾರೆ. ಲಿ ಜುಫಾನ್ ಅರೆಸ್ಟ್ ಆದ್ಮೇಲೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯೊಬ್ಬಳು ಕ್ಯಾಂಡಲ್ ವರ್ಕ್ ಆಗಿದೆ ಎನ್ನುತ್ತಿದ್ದಾಳೆ. ಮತ್ತೆ ಕೆಲವರು ಪ್ರಕರಣ ಮರು ಪರಿಶೀಲನೆಗೆ ಒತ್ತಾಯ ಮಾಡಿದ್ದಾರೆ.

ಆಸೆಗಳನ್ನು ಪೂರೈಸುವ ಮೇಣದಬತ್ತಿಗಳ ಕ್ರೇಜ್ ಚೀನಾದ ಆಧ್ಯಾತ್ಮಿಕ ಆರ್ಥಿಕತೆಯಲ್ಲಿ ಆಳವಾಗಿ ಬೇರೂರಿದೆ. ಮೇಣದಬತ್ತಿಗಳು, ಸ್ಫಟಿಕಗಳು, ಟ್ಯಾರೋ ಕಾರ್ಡ್ ಮತ್ತು ಆಧ್ಯಾತ್ಮಿಕ ರೆಸ್ಟ್ ಸೇರಿದಂತೆ ಅನೇಕ ಉತ್ಪನ್ನಗಳ ಮಾರಾಟ ಹೆಚ್ಚಾಗಿದೆ. ಯುವ ಪೀಳಿಗೆಯ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರಿದೆ. ಅವರ ಒತ್ತಡವನ್ನು ಮಾರಾಟಗಾರರು ದುರುಪಯೋಗಪಡಿಸಿಕೊಳ್ತಿದ್ದಾರೆ. ಆನ್ಲೈನ್, ಎಐ ಬಳಸಿಕೊಂಡು ಮೋಸ ಮಾಡ್ತಿದ್ದಾರೆ. ಲಿ ಜುಫಾನ್ ತಪ್ಪು ಸಾಭೀತಾದ್ರೆ ಹತ್ತು ವರ್ಷ ಜೈಲು ಶಿಕ್ಷೆ ಜೊತೆ ದಂಡ ವಿಧಿಸುವ ಸಾಧ್ಯತೆ ಇದೆ.