ಮೈಸೂರು (ಅ. 26):  ದಸರಾ ಎಷ್ಟೊಂದು ಸುಂದರ... ಹೌದು. ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಸಂಭ್ರಮಕ್ಕೇನೂ ಕೊರತೆ ಇಲ್ಲ. ಆದರೆ ಸರಳ ದಸರಾ ಆಚರಿಸಲಾಗುತ್ತಿದೆ. 

ಇಂದು ದಸರಾದ ಕೊನೆಯ ದಿನವಾಗಿದ್ದು, ತಾಯಿ ಚಾಮುಂಡೇಶ್ವರಿಯನ್ನು ಬೆಟ್ಟದಿಂದ ಅರಮನೆಗೆ ತರಲಾಗುತ್ತದೆ. ಅಲ್ಲಿ ಪೂಜೆ ನೆರವೇರುತ್ತದೆ. ಸರ್ವಾಲಂಕಾರ ಭೂಷಿತೆಯಾಗಿ ತಾಯಿ ರಾರಾಜಿಸುತ್ತಾಳೆ. ಸಾವಿರಾರು ಮಂದಿ ಮೈಸೂರಿಗೆ ಆಗಮಿಸಿ ತಾಯಿಯ ಆಶೀರ್ವಾದ ಪಡೆಯುತ್ತಾರೆ.  ಪ್ರತಿ ವರ್ಷದಂತೆ ಜಂಬೂ ಸವಾರಿಯನ್ನು ಈ ಬಾರಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಸರಳ ಜಂಬೂ ಸವಾರಿಯನ್ನು ನಡೆಸಲಾಗುತ್ತಿದೆ. ಅದನ್ನು ಸುವರ್ಣ ನ್ಯೂಸ್‌ನಲ್ಲಿ ಕಣ್ತುಂಬಿಕೊಳ್ಳಬಹುದು.