ನವದೆಹಲಿ(ಅ.26):  ಭಾರತದಲ್ಲಿ ಹಲವು ಹ್ಯಾಚ್‌ಬ್ಯಾಕ್ ಕಾರುಗಳು ಲಭ್ಯವಿದೆ. ಆದರೆ ಮಾರುತಿ ಬಲೆನೋ ಕಾರು ಅತ್ಯಂತ ಜನಪ್ರಿಯವಾಗಿದೆ. 2015ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ಮಾರುತಿ ಬಲೆನೋ ಕಾರು ಇದೀಗ ಅತೀ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ.  5 ವರ್ಷಗಳಲ್ಲಿ ಮಾರುತಿ ಬಲೆನೋ ಬರೋಬ್ಬರಿ 8 ಲಕ್ಷ ಕಾರುಗಳನ್ನು ಮಾರಾಟವಾಗಿದೆ.

44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!..

ಆಕರ್ಷಕ ವಿನ್ಯಾಸ, ಆರಾಮದಾಯಕ ಪ್ರಯಾಣ, ಕಾರಿನೊಳಗಿನ ಸ್ಛಳಾವಕಾಶ, ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ಮಾರುತಿ ಬಲೆನೋ ಕಾರು ಭಾರತೀಯರನ್ನು ಮೋಡಿ ಮಾಡಿದೆ.  ಈಗಲೂ ಬಲೆನೋ ಕಾರು ಅದೇ ಬೇಡಿಕೆಯನ್ನು  ಉಳಿಸಿಕೊಂಡಿದೆ.

ಬಿಡುಗಡೆಯಾದ ಒಂದೇ ವರ್ಷಕ್ಕೆ ಮಾರುತಿ ಬಲೆನೋ 1 ಲಕ್ಷ ಕಾರುಗಳು ಮಾರಾಟವಾಗಿತ್ತು. 2018ರ ವೇಳೆ ಈ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿತ್ತು. 2019 ಹಾಗೂ 2020ರಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸಿದರೂ, ಮಾರುತಿ ಬಲೆನೋ ಕಾರು ಮಾರಾಟಕ್ಕೆ ಹೆಚ್ಚಿನ ಅಡೆತಡೆಯಾಗಿಲ್ಲ. ಹೀಗಾಗಿ ಕಳೆದೆರಡು ವರ್ಷದಲ್ಲಿ 3 ಲಕ್ಷ ಕಾರುಗಳು ಮಾರಾಟವಾಗಿದೆ. 

ಮಾರುತಿ ಬಲೆನೊ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ- 23.87 Kmpl ಮೈಲೇಜ್!.

ನೂತನ ಬಲೆನೋ ಕಾರು BS6 ಎಂಜಿನ್ ಹೊಂದಿದ್ದು, 1.2 ಡ್ಯುಯೆಲ್ ಜೆಟ್ ಡ್ಯುಯೆಲ್ VVT ಎಂಜಿನ್ ಹಾಗೂ ಹೈಬ್ರಿಡ್ ಎಂಜಿನ್ ಆಯ್ಕೆಯೂ ಲಭ್ಯವಿದೆ. 2017ರಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್( CVT ) ವರ್ಶನ್ ಪರಿಚಯಿಸಿತು. ಭಾರತದ 200 ನಗರಗಳಲ್ಲಿ 377ಕ್ಕೂ ಹೆಚ್ಚು ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಮಾರುತಿ ಸುಜುಕಿ ಬಲೆನೋ ಕಾರು ಲಭ್ಯವಿದೆ. 

ಭಾರತದಲ್ಲಿ ಉತ್ಪಾದನೆಯಾದ ಬಲೆನೋ ಕಾರು ಆಸ್ಟ್ರೇಲಿಯಾ, ಯುರೋಪ್, ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಮಿಡ್ಲ್ ಈಸ್ಟ್ ಹಾಗೂ ಸೌತ್ ಈಸ್ಟ್ ಏಷ್ಯಾ ದೇಶಗಳಿಗೆ ಮಾರುತಿ ಬಲೆನೋ ಕಾರು ರಫ್ತು ಮಾಡಲಾಗಿದೆ.