ಎಣ್ಣೆ ಸಿಗದೆ ಆತ್ಮಹತ್ಯೆ ಶರಣಾದ್ರು 6 ಜನ, ಒಂದೇ ದಿನ 3 ಬಲಿ ಪಡೆದ ಕೊರೋನಾ; ಮಾ.29ರ ಟಾಪ್ 10 ಸುದ್ದಿ!

ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ 1000 ಗಡಿ ದಾಟಿದೆ. ಒಂದೇ ದಿನ ಮಹಾರಾಷ್ಟ್ರದಲ್ಲಿ ಮೂವರು ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೆ, ನಮ್ಮ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಎಣ್ಣೆ ಸಿಕ್ಕಿಲ್ಲ ಎಂದು 6 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಗಿಗಳ ನೋವು ತಾಳಲಾರದೆ ನಟನೆ ಬಿಟ್ಟ ನಟಿ ನರ್ಸ್ ವೃತ್ತಿ ಆರಂಭಿಸಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆಯಾದ ಕಾರಣ ಪೆಟ್ರೋಲ್ ಡೀಸೆಲ್ ಬೆಲೆ ಕುಸಿತ ಕಂಡಿದೆ. ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಿ ಅಂಗಡಿ ವಿವರ, ಬಿಸಿಸಿಗೆ ದೇಣಿಗೆ ಸೇರಿದಂತೆ ಮಾರ್ಚ್ 29ರ ಟಾಪ್ 10 ಸುದ್ದಿ ಇಲ್ಲಿವೆ.

Liquor ban trouble to Coroaviurs death top 10 news of march 29

ಪುಟ್ಟ ಕಂದನ ಕೊರೋನಾ ಜಾಗೃತಿಗೆ ಪಿಎಂ ಮೋದಿ ಫುಲ್ ಫಿದಾ!

Liquor ban trouble to Coroaviurs death top 10 news of march 29

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಪಿಂ ಮೋದಿ ನಿರಂತರವಾಗಿ ಜನರ ಬಳಿ ಸೋಶಿಯಲ್ ಡಿಸ್ಟೆಂನ್ಸಿಂಗ್ ಪಾಲಿಸಿ, ಮನೆಯಲ್ಲಿರುವಂತೆ ಮನವಿ ಮಾಡಿಕೊಳ್ಳುಉತ್ತಿದ್ದಾರೆ. ಸೋಶಿಯಲ್ ಮಿಡಿಯಾ ಮೂಲಕವೂ ಜನರನ್ನು ಮನೆಯಲ್ಲೇ ಇರುವಂತೆ ಪ್ರೇರೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ಪಿಎಂ ಮೋದಿ ತನಮ್ಮ ಟ್ವಟರ್ ಖಾತೆಯಲ್ಲಿ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದು, ವಿಶೇಷವಾಗಿ ಗಮನ ಸೆಳೆದಿದೆ

ಕೊರೋನಾ ಲಾಕ್‌ಡೌನ್: ಎಣ್ಣೆ ಸಿಗದೇ ಕರ್ನಾಟಕದಲ್ಲಿ 6 ಜನರು ಆತ್ಮಹತ್ಯೆ

Liquor ban trouble to Coroaviurs death top 10 news of march 29

ಕೊರೋನಾ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜನ ಹೊರಗೆ ಬರಲಾಗದೆ ಪರದಾಡುತ್ತಿದ್ದಾರೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ. ಹೊಟ್ಟಿಗೆ ಊಟ ಇಲ್ಲ.  ಹೀಗೆ ಜನರು ಸಾಲು-ಸಾಲು ತೊಂದರೆಗಳಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿರುವುದು ಇದೇ ಮಾರಿ ಕೊರೋನಾ ವೈರಸ್‌ನಿಂದ. ಇದರ ಮಧ್ಯೆ ಕುಡುಕರು ಸಹ ಪರದಾಡುತ್ತಿದ್ದಾರೆ. ಅಲ್ಲದೇ ಕುಡಿಯಲು ಮದ್ಯ ಸಿಗದೇ ಆರು ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಸಂಗತಿ.

ಕೊರೋನಾಗೆ ರಾಜಮನೆತನದ ಮೊದಲ ಬಲಿ, ರಾಜಕುಮಾರಿ ಸಾವು!.

Liquor ban trouble to Coroaviurs death top 10 news of march 29

ಚೀನಾದ ವುಹಾನ್ ನಗರದಿಂದ ಇಡೀ ಜಗತ್ತಿಗೆ ವ್ಯಾಪಿಸಿರುವ ಕೊರೋನಾ ವೈರಸ್‌ಗೆ ರಾಜಕುಮಾರಿಯೊಬ್ರು ಬಲಿಯಾಗಿದ್ದಾರೆ. ಈ ಮೂಲಕ ಮಾರಕ ವೈರಸ್‌ಗೆ  ರಾಜಮನೆತನದ ಮೊದಲ ಬಲಿಯಾಗಿದೆ.


ಭಾರತದಲ್ಲಿ ಇಂದು ಒಂದೇ ದಿನ ಮೂವರು ಕೊರೋನಾಗೆ ಬಲಿ

Liquor ban trouble to Coroaviurs death top 10 news of march 29

ಭಾರತದಲ್ಲಿ ಇಂದು ಒಂದೇ ದಿನ ಮೂವರು ಕೊರೋನಾಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 40 ವರ್ಷದ ಮಹಿಳೆ ಬಲಿಯಾಗಿದ್ದರೆ,  ಗುಜರಾತ್ ಹಾಗೂ ಜಮ್ಮು- ಕಾಶ್ಮೀರದಲ್ಲಿಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಮಹಾರಾಷ್ಟ್ರವೊಂದರಲ್ಲೇ 7 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 1045 ಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 

ನೋಡಲಾಗಲಿಲ್ಲ ರೋಗಿಗಳ ನೋವು, ನಟನೆ ಬಿಟ್ಟು ನರ್ಸ್ ಆದ ನಟಿ!

Liquor ban trouble to Coroaviurs death top 10 news of march 29

ಮಾರಕ ಕೊರೋನಾದಿಂದಾಗಿ ಸದ್ಯ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಭಾರತದಲ್ಲೂ ಪ್ರಧಾನಿ ಮೋದಿ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಿದ್ದು, 14 ಏಪ್ರಿಲ್‌ವರೆಗೆ ಮುಂದುವರೆಯಲಿದೆ. ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ.  19 ಮಂದಿ ಭಾರತದಲ್ಲಿ ಮೃತಪಟ್ಟಿದ್ದಾರೆ. ಅತ್ತ ಕೊರೋನಾ ಪೀಡಿತರ ಸೇವೆಗಾಗಿ ವೈದ್ಯ ಸಿಬ್ಬಂದಿ ಹಗಲು ರಾಥ್ರಿ ಎಂಬಂತೆ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಚೆಲಲುವೆಯೊಬ್ಬರು ರೋಗಿಗಳ ನೋವು ನೋಡಲಾಗದೇ ನರ್ಸ್ ಆಗಿ ಸೇವೆ ಸಲ್ಲಿಸಲಾರಂಭಿಸಿದ್ದಾರೆ.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!.

Liquor ban trouble to Coroaviurs death top 10 news of march 29

ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ಕೇರ್ಸ್ ನಿಧಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) 51 ಕೋಟಿ ರು. ದೇಣಿಗೆ ಘೋಷಣೆ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು, ಕೊರೋನಾ ತಡೆಗಾಗಿ ಸಂಶೋಧನೆಗಳಿಗೆ ಪ್ರೋತ್ಸಾಹ ಹಾಗೂ ದೇಶದ ಸುರಕ್ಷತೆಗಾಗಿ ಬಿಸಿಸಿಐ ವತಿಯಿಂದ 51 ಕೋಟಿ ರು. ನೀಡುವುದಾಗಿ ಹೇಳಿದ್ದಾರೆ. 

ಹಾಕ್ರಿ ಆಂದ್ರೆ ಇಂಥ ಫೋಟೋನಾ?; ನಟಿ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು!

Liquor ban trouble to Coroaviurs death top 10 news of march 29

 2011ರಲ್ಲಿ  'ನೀನು ನಾನಾ ಅಬಾದಂ' ಚಿತ್ರದ ಮೂಲಕ ಟಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀ ರೆಡ್ಡಿ, ನಟನೆಗಿಂತಲೂ ಕಾಂಟ್ರವರ್ಸಿಯಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಶ್ರೀ ಶೇರ್‌ ಮಾಡುತ್ತಿರುವ ಫೋಟೋಗಳಿಗೆ ನೆಟ್ಟಿಗರು ಫುಲ್ ಗರಂ.....

ಯಾವ ಅಂಗಡಿ ತೆರೆದಿದೆ? ವೆಬ್‌ಸೈಟ್‌ ನೋಡಿ

Liquor ban trouble to Coroaviurs death top 10 news of march 29

ಕೊರೋನಾ ವೈರಸ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಜನರಿಗೆ ಅಗತ್ಯ ಸೇವೆಗಳು ಎಲ್ಲಿ ಲಭ್ಯವಿರಲಿದೆ ಎನ್ನುವುದನ್ನು ತಿಳಿಸಲು ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ‘ಕೊರೋನಾ ಹೆಲ್ಪ… ಇನ್‌’ ಎಂಬ ವೆಬ್‌ಸೈಟ್‌ ಆರಂಭಿಸಿದ್ದಾರೆ.

ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್!...

Liquor ban trouble to Coroaviurs death top 10 news of march 29

ರಾಯಲ್ ಎನ್‌ಫೀಲ್ಡ್ ನೂತನ ಮೆಟೊರ್ 350 ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಕೊರೋನಾ ವೈರಸ್ ಆರ್ಭಟ ತಣ್ಣಗಾದಂತೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕ್ ಬಿಡುಗಡೆಯಾಗುತ್ತಿದ್ದಂತೆ ರಾಯಲ್‌ ಎನ್‌ಫೀಲ್ಡ್ ಪ್ರತಿಷ್ಠಿತ ಬೈಕ್‌ ಉತ್ಪಾದನೆ ನಿಲ್ಲಿಸಲಿದೆ. 

ಕಚ್ಚಾ ತೈಲ ಬೆಲೆ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ

Liquor ban trouble to Coroaviurs death top 10 news of march 29

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ ಕಾಣುತ್ತಿದ್ದರೂ ಪೆಟ್ರೋಲ್, ಡಿಸೇಲ್ ದರ ಮಾತ್ರ ಇಳಿಕೆಯಾಗದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 71.97 ರೂ. ಹಾಗೂ ಡೀಸೆಲ್ ದರ 64.41 ರೂ. ನಿಗದಿಯಾಗಿದೆ. ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 69.59 ರೂ. ಹಾಗೂ ಡೀಸೆಲ್ ದರ 62.29 ರೂ. ಇದೆ.
 

Latest Videos
Follow Us:
Download App:
  • android
  • ios