ಕಚ್ಚಾ ತೈಲ ಬೆಲೆ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತ| ಹೇಗಿದೆ ಪೆಟ್ರೋಲ್, ಡೀಸೆಲ್ ದರ? ಇಲ್ಲಿದೆ ನೋಡಿ ಇಂದಿನ ದರ

crude oil slumps another 5 percent No rate cut for 13 days in petrol and diesel

ಬೆಂಗಳೂರು(ಮಾ.29): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ ಕಾಣುತ್ತಿದ್ದರೂ ಪೆಟ್ರೋಲ್, ಡಿಸೇಲ್ ದರ ಮಾತ್ರ ಇಳಿಕೆಯಾಗದೆ ಯಥಾಸ್ಥಿತಿ ಕಾಯ್ದುಕೊಂಡಿದೆ. 

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 71.97 ರೂ. ಹಾಗೂ ಡೀಸೆಲ್ ದರ 64.41 ರೂ. ನಿಗದಿಯಾಗಿದೆ. ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 69.59 ರೂ. ಹಾಗೂ ಡೀಸೆಲ್ ದರ 62.29 ರೂ. ಇದೆ.

ಸುಂಕ ಏರಿಕೆ: ಕಚ್ಚಾ ತೈಲ ಅಗ್ಗವಾದರೂ, ಪೆಟ್ರೋಲ್, ಡೀಸೆಲ್ ಬೆಲೆ ತುಟ್ಟಿ!

ಚೆನ್ನೈನಲ್ಲಿ ಪೆಟ್ರೋಲ್ ದರ 72.28 ರೂ. ಇದ್ದರೆ, ಡೀಸೆಲ್ ದರ 65.71 ರೂ. ಇದೆ. ಇನ್ನು ಕೋಲ್ಕತ್ತಾದಲ್ಲಿ 72.29 ರೂ. ಹಾಗೂ ಡಿಸೇಲ್ ದರ 64.62 ರೂ. ಇದೆ. 

ಇನ್ನು ಮಾಯಾನಗರಿ ಮುಂಬೈನಲ್ಲಿ ಪೆಟ್ರೋಲ್ ದರ 75.30 ರೂ. ಮತ್ತು ಡೀಸೆಲ್ ಬೆಲೆ 65.21 ರೂ.ಗೆ ನಿಗದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 1,701 ರೂ. ಇದೆ.

Latest Videos
Follow Us:
Download App:
  • android
  • ios