ಮ್ಯಾಡ್ರಿಡ್(ಮಾ.29): ಚೀನಾದ ವುಹಾನ್ ನಗರದಿಂದ ಇಡೀ ಜಗತ್ತಿಗೆ ವ್ಯಾಪಿಸಿರುವ ಕೊರೋನಾ ವೈರಸ್‌ಗೆ ರಾಜಕುಮಾರಿಯೊಬ್ರು ಬಲಿಯಾಗಿದ್ದಾರೆ. ಈ ಮೂಲಕ ಮಾರಕ ವೈರಸ್‌ಗೆ  ರಾಜಮನೆತನದ ಮೊದಲ ಬಲಿಯಾಗಿದೆ.

ಹೌದು ಲಕ್ಷಾಂತರ ಮಂದಿಗೆ ತಗುಲಿರುವ ಕೊರೋನಾ ಸೋಂಕು ಸ್ಪೇನ್‌ನ ರಾಜಕುಮಾರಿ ಮರಿಯಾ ತೆರೆಸಾ ಮೃತಪಟ್ಟಿದ್ದಾರೆ. 86 ವರ್ಷ ವರ್ಷದ ಮರಿಯಾ ತೆರೆಸಾ  ಸ್ಪೇನ್‌ ರಾಜ ಆರನೇ ಕಿಂಗ್‌ ಫೆಲಿಪ್‌ರ ಸೋದರ ಸಂಬಂಧಿ. 

ಬಡವನಾದರೇನು, ಸಿರಿವಂತನಾದರೇನು, ಬ್ರಿಟನ್ ರಾಜಕುಮಾರನನ್ನೂ ಬಿಡಲಿಲ್ಲ ಕೊರೋನಾ

ರಾಜಕುಮಾರಿ ಮರಿಯಾ ತೆರೆಸಾ ಮೃತಪಟ್ಟಿರುವ ಕುರಿತಾಗಿ ಸ್ಪೇನ್‌ ರಾಜಮನೆತನ ಅಧಿಕೃತ ಮಾಹಿತಿ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಸ್ಪೇನ್‌ ರಾಜ ಕಿಂಗ್‌ ಫೆಲಿಪ್‌ರವರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್‌ ಬಂದಿತ್ತು.

ಸ್ಪೇನ್‌ನಲ್ಲಿ ಕೊರೋನಾ ತನ್ನ ಮರಣ ಮೃದಂಗ ಬಾರಿಸುತ್ತಿದ್ದು, ಈವರೆಗೆ ಈ ಮಾರಕ ವೈರಸ್‌ಗೆ ಇಲ್ಲಿ 5982 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 73,235 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.    

"