ಪುಟ್ಟ ಕಂದನ ಕೊರೋನಾ ಜಾಗೃತಿಗೆ ಪಿಎಂ ಮೋದಿ ಫುಲ್ ಫಿದಾ!

ಕೊರೋನಾ ನಿಯಂತ್ರಣಕ್ಕೆ ದೇಶವೇ ಲಾಕ್‌ಡೌನ್| ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ರೂ ಕ್ಯಾರೇ ಎನ್ನುತ್ತಿಲ್ಲ ಜನ| ವಿಭಿನ್ನ ರೂಪದಲ್ಲಿ ಜಾಗೃತಿ ಅಭಿಯಾನ| ಪುಟ್ಟ ಕಂದನ ಜಾಗೃತಿ ಸಂದೇಶಕ್ಕೆ ಮೋದಿ ಫಿದಾ

Modi Shares Baby Photo Holding placard of coronavirus awareness

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಪಿಂ ಮೋದಿ ನಿರಂತರವಾಗಿ ಜನರ ಬಳಿ ಸೋಶಿಯಲ್ ಡಿಸ್ಟೆಂನ್ಸಿಂಗ್ ಪಾಲಿಸಿ, ಮನೆಯಲ್ಲಿರುವಂತೆ ಮನವಿ ಮಾಡಿಕೊಳ್ಳುಉತ್ತಿದ್ದಾರೆ. ಸೋಶಿಯಲ್ ಮಿಡಿಯಾ ಮೂಲಕವೂ ಜನರನ್ನು ಮನೆಯಲ್ಲೇ ಇರುವಂತೆ ಪ್ರೇರೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ಪಿಎಂ ಮೋದಿ ತನಮ್ಮ ಟ್ವಟರ್ ಖಾತೆಯಲ್ಲಿ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದು, ವಿಶೇಷವಾಗಿ ಗಮನ ಸೆಳೆದಿದೆ

ಹೌದು ಪುಟ್ಟ ಕಂದ ಜನರೆಲ್ಲರನ್ನು ಮನೆಯಲ್ಲೇ ಇರುವಂತೆ ಕೋರಿ ಸಂದೇಶ ಸಾರುತ್ತಿರುವ ಫೋಟೋ ಇದಾಗಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಪಿಎಂ ಮೋದಿ ಆಸಕ್ತ ಹಾಗೂ ಭಾವ ಅತ್ಯಂತ ಆಳವಾಗಿದೆ ಎಂದು ಬರೆದಿದ್ದಾರೆ. ಇನ್ನು ಈ ಪುಟ್ಟ ಕಂದನ ಕೈಯ್ಯಲ್ಲಿರುವ ಪ್ಲಕಾರ್ಡ್‌ನಲ್ಲಿ ಒಂದು ವೇಳೆ ನಾವು ತಾಯಿ ಗರ್ಭದಲ್ಲಿ ಒಂಭತ್ತು ತಿಂಗಳು ಇರಬಹುದಾದರೆ, ಭಾರತ ಮಾತೆಗಾಗಿ ಇಪ್ಪತ್ತೊಂದು ದಿನ ಮನೆಯಲ್ಲಿ ಇರಲು ಯಾಕೆ ಸಾಧ್ಯವಿಲ್ಲ ಎಂದು ಬರೆಯಲಾಗಿದೆ.

ಈ ಫೋಟೋ ಸದ್ಯ ಭಾರೀ ವೈರಲ್ ಆಗಿದ್ದು, ನೆಟ್ಟಿಗರೆಲ್ಲರೂ ಶೇರ್ ಮಾಡಲಾರಂಭಿಸಿದ್ದಾರೆ. ಒಂದೆಡೆ ಕೊರೋನಾ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿವೆ. ಹೀಗಿದ್ದರೂ ಅನೇಕ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸದೆ ಮನೆ ಹೊರಗೆ ಬಬಂದು ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದಾಋಎ. ಈ ಮೂಲಕ ತಮ್ಮ ಮಾತ್ರವಲ್ಲದೇ ಇತರರ ಜೀವಕ್ಕೂ ಅಪಾಯವುಂಟು ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios