ನೋಡಲಾಗಲಿಲ್ಲ ರೋಗಿಗಳ ನೋವು, ನಟನೆ ಬಿಟ್ಟು ನರ್ಸ್ ಆದ ನಟಿ!
ಮಾರಕ ಕೊರೋನಾದಿಂದಾಗಿ ಸದ್ಯ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಭಾರತದಲ್ಲೂ ಪ್ರಧಾನಿ ಮೋದಿ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಿದ್ದು, 14 ಏಪ್ರಿಲ್‌ವರೆಗೆ ಮುಂದುವರೆಯಲಿದೆ. ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದ್ದು, ಇವರಲ್ಲಿ 85ಕ್ಕೂ ಅಧಿಕ ಮಂದಿ ಗುಣಮುಖರಾಗಿ, ಆಸ್ಪಯತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಹೀಗಿದ್ದರೂ ಹತ್ತೊಂಬತ್ತು ಮಂದಿ ಭಾರತದಲ್ಲಿ ಮೃತಪಟ್ಟಿದ್ದಾರೆ. ಅತ್ತ ಕೊರೋನಾ ಪೀಡಿತರ ಸೇವೆಗಾಗಿ ವೈದ್ಯ ಸಿಬ್ಬಂದಿ ಹಗಲು ರಾಥ್ರಿ ಎಂಬಂತೆ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಚೆಲಲುವೆಯೊಬ್ಬರು ರೋಗಿಗಳ ನೋವು ನೋಡಲಾಗದೇ ನರ್ಸ್ ಆಗಿ ಸೇವೆ ಸಲ್ಲಿಸಲಾರಂಭಿಸಿದ್ದಾರೆ.
ಈ ನಟಿ ಬೇರಾರೂ ಅಲ್ಲ, ಕಾಂಚಲೀ ಸಿನಿಮಾದ ನಾಯಕಿ ನಟಿ ಶಿಖಾ ಮಲ್ಹೋತ್ರಾ ಆಗಿದ್ದಾರೆ. ಶೀಖಾಗೆ ಕೊರೋನಾ ಪೀಡಿತರ ನೋವು ನೋಡಲಾಗಲಿಲ್ಲ, ಹೀಗಾಗಿ ಅವರ ಸೇವೆ ಮಾಡಲು ತಮ್ಮ ನಟನೆಯ ವೃತ್ತಿ ಬಿಟ್ಟು ಬಂದಿದ್ದಾರೆ.
ಇನ್ನು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡುವುದಕ್ಕೂ ಮುನ್ನ ಶಿಖಾ ವರ್ದಮಾನ್ ಮಹಾವೀರ ಮೆಡಿಕಲ್ ಕಾಲೇಜು ಹಾಗೂ ದೆಹಲಿಯ ಸಫ್ದರ್‌ಗಂಜ್ ಆಸ್ಪತ್ರೆಯಿಂದ 2014 ರಲ್ಲಿ ನರ್ಸಿಂಗ್ ಕೋರ್ಸ್ ಮಾಡಿದ್ದಾರೆ. ಆದರೆ ನಟನೆಯಿಂದಾಗಿ ನರ್ಸಿಂಗ್ ಪ್ರ್ಯಾಕ್ಟೀಸ್ ಮಾಡಲು ಆಗಿರಲಿ
ಆದರೀಗ ಕೊರೋನಾ ವೈರಸ್ ಪ್ರಕೋಪಾ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಶಿಖಾ ಸ್ವಯಂಸೇವಕ ನರ್ಸ್ ಆಗಿ ರೋಗಿಇಗಳ ಸೇವೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಶಿಖಾ ಬಿಎಂಸಿಯಿಂದ ಅನುಮತಿ ಕೂಡಾ ದೊರಕಿದೆ.
ಸದ್ಯ ಶಿಖಾ ಮುಂಬೈನ ಜೋಗೇಶ್ವರೀ ಈಸ್ಟ್‌ನಲಲ್ಲಿರುವ ಹಿಂದೂ ಹೃದಯ್ ಸಾಮ್ರಾಟ್ ಬಾಳಾ ಸಾಹೇಬ್ ಟ್ರೋಮಾ ಹಾಸ್ಪಿಟಲ್‌ನಲ್ಲಿ ವಾಲೆಂಟಿಯರ್ ನರ್ಸ್ ಆಗಿ ನೇಮಕಗೊಂಡಿದ್ದಾರೆ. ಸದ್ಯಕ್ಕೀಗ ಅವರು ಐಸೋಲೇಷನ್ ವಾರ್ಡ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಶಿಖಾ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ನರ್ಸ್ ಡ್ರೆಸ್‌ನಲ್ಲಿರುವ ಕೆಲ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಜೊತೆ ಕಾಲೇಜಿನಲ್ಲಿ ಕೋರ್ಸ್ ಮುಗಿಸಿದ ಬಳಿಕ ಸಮಾಜ ಸೇವೆ ಮಾಡುವ ಸಂಕಲ್ಪಪ ಮಾಡಿದ್ದೆ. ನನಗನಿಸುತ್ತೆ ಈಗ ಆ ಸಮಯ ಬಂದಿದೆ ಎಂದು ಬರೆದಿದ್ದಾರೆ.
ಶಿಖಾರವರ ಈ ನಿರ್ಧಾರದ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿ ಬಂದಿದೆ. ಅವರ ಪೋಸ್ಟ್‌ಗಳಲ್ಲಿ ಅವರ ಅಭಿಮಾನಿಗಳು ನಿರಂತರವಾಗಿ ಹೊಗಳುತ್ತಿದ್ದಾರೆ.
ಇನ್ನು ಶಿಖಾ ತಾಯಿ ಕೂಡಾ ಓರ್ವ ನರ್ಸ್ ಅಗಿದ್ದು, ಅವರು ಕೂಡಾ ರೋಗಿಗಳ ಸೇವೆ ಮಾಡುತ್ತಿದ್ದಾರೆ.