ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ!...

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಹತ್ರಾಸ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪಗ್ರಕಟಿಸಿದೆ. ಸಿಬಿಐ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರಕರಣದ ತನಿಖೆಯನ್ನು ಅಲಹಾಬಾದ್​ ಹೈಕೋರ್ಟ್​ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ.

ಅಮೆರಿಕ ವಿದೇಶಾಂಗ, ರಕ್ಷಣಾ ಸಚಿವರೊಂದಿಗೆ ಧೋವಲ್ ಮಾತುಕತೆ: ಮಹತ್ವದ ಮಾತುಕತೆ!...

ಚೀನಾ ಜೊತೆಗಿನ ಗಡಿ ವಿವಾದದ ಬೆನ್ನಲ್ಲೇ ಮಂಗಳವಾರದಂದು ಮಹತ್ವದ  2+2 ಸಚಿವ ಮಟ್ಟದ ಮಾತುಕತೆ ನಡೆದಿದೆ. ಈ ಸಭೆಗೂ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೋಂಪಿಯೋ ಹಾಗೂ ರಕ್ಷಣಾ ಸಚಿವ ಮಾರ್ಕ್ ಎಸ್ಪರ್‌ರನ್ನು ಭೇಟಿ ಮಾಡಿದ್ದಾರೆ. ಸಚಿವರ ಜೊತೆಗಿನ ಈ ಮಾತುಕತೆ ಸಕಾರಾತ್ಮಕವಾಗಿತ್ತೆನ್ನಲಾಗಿದೆ.

ಸ್ಯಾಂಡಲ್‌ವುಡ್ ನಟನ ವಿರುದ್ಧ ದಾಖಲಾಯ್ತು ಎಫ್‌ಐಆರ್...

ನಟ ಧನ್ವೀರ್‌ ಬಂಡೀಪುರದ ಜಿ.ಎಸ್‌. ಬೆಟ್ಟಬೋಳುಗುಡ್ಡ ಗಸ್ತಿನ ಡಿಲೈನ್‌ ಹತ್ತಿರ ನಿಷೇಧಿತ ಪ್ರದೇಶದೊಳಗೆ ಅತಿಕ್ರಮ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಎಫ್‌ ಐಆರ್‌ ಸೋಮವಾರ ದಾಖಲಿಸಿದೆ.

ತಮಿಳುನಾಡು ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಬಂಧನ!...

ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ರನ್ನು ಮಮಲಪುರಂ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸಂಸದ ಥೋಲ್ ತಿರುಮಾವಲನ್ ಮಹಿಳೆಯರ ಕುರಿತು ನೀಡಿದ್ದ ಕೀಳು ಹೇಳಿಕೆ ವಿರೋಧಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಿರುವಾಗ ಪೊಲೀಸರು ಖುಷ್ಬೂ ಸುಂದರ್‌ ಹಾಗೂ 16 ಬಿಜೆಪಿ ಕಾರ್ಯಕರ್ತರನ್ನು ಮುತ್ತಕಾಡು ಎಂಬಲ್ಲಿ ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಮುಂಬೈ ವಿರುದ್ಧದ ಪಂದ್ಯಕ್ಕೂ RCBಗೆ ಶಾಕ್; ಪ್ರಮುಖ ವೇಗಿ ಆಡೋದು ಡೌಟ್..!...

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹೊಸ್ತಿಲಲ್ಲಿದ್ದು, ಬುಧವಾರ(ಅ.27) ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ.

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?...

ದೇವರನ್ನು ಹಾಗೂ ಮೂಢ ನಂಬಿಕಯನ್ನು ಸಮವಾಗಿ ನಂಬುವ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ತಮ್ಮ ಸಂಪಾದನೆ ಹಿಂದೆ ಇರುವ ಮತ್ತೊಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ....

ಕುಸುಮಾ ಸ್ಪರ್ಧಿಸಿರೋ RR ನಗರದಲ್ಲಿ ಡಿಕೆಶಿ ಮಾತು ಕಾಂಗ್ರೆಸ್‌ನವರು ಕೇಳುತ್ತಿಲ್ಲ'...

ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಯಾರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನ್ನು ಯಾರೂ ಕೇಳುತ್ತಿಲ್ಲವಂತೆ... ಹೀಗೊಂದು ಆರೋಪ ಕೇಳಿ ಬಂದಿದೆ.

ಭಾರತದಲ್ಲಿ ಪ್ಲೇ ಸ್ಟೋರ್‌ನಿಂದ ತಾತ್ಕಾಲಿಕವಾಗಿ ಗೂಗಲ್ ಪೇ ತೆಗೆದು ಹಾಕಿದ ಆ್ಯಪಲ್!...

ಭಾರತದಲ್ಲಿ ಹಣ ವರ್ಗಾವಣೆ, ಬಿಲ್ ಪಾವತಿ ಸೇರಿದಂತೆ ಬಹುತೇಕ ಟ್ರಾಕ್ಷಾನ್‌ಗೆ ಆ್ಯಪ್ ಗಳನ್ನೇ ಬಳಸಲಾಗುತ್ತದೆ. ಅದರಲ್ಲೂ ಗೂಗಲ್ ಪೇ ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ಗೂಗಲ್ ಪೇ ಆ್ಯಪ್‌ನ್ನು ಆ್ಯಪಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. 

ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರದ 4ನೇ ಪ್ಯಾಕೇಜ್‌?...

ಕೊರೋನಾದಿಂದ ಹದಗೆಟ್ಟಿರುವ ದೇಶದ ಆರ್ಥಿಕತೆಗೆ ಮರುಜೀವ ನೀಡಲು 20 ಲಕ್ಷ ಕೋಟಿ ರು. ಮೊತ್ತದ ಆತ್ಮನಿರ್ಭರ ಪ್ಯಾಕೇಜ್‌ ಸೇರಿದಂತೆ ಮೂರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ದೀಪಾವಳಿ ಕೊಡುಗೆಯಾಗಿ 4ನೇ ಆರ್ಥಿಕ ಪ್ಯಾಕೇಜ್‌ ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ.

ಕೊರೋನಾ ಸೋಂಕಿನಿಂದ ಮತ್ತೋರ್ವ ಬಿಜೆಪಿ ನಾಯಕ ನಿಧನ: ಮೋದಿ ಸಂತಾಪ...

ಕೊರೋನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ಬಿಜೆಪಿ ನಾಯಕ ನಿಧನರಾಗಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.