Asianet Suvarna News Asianet Suvarna News

ಅಮೆರಿಕ ವಿದೇಶಾಂಗ, ರಕ್ಷಣಾ ಸಚಿವರೊಂದಿಗೆ ಧೋವಲ್ ಮಾತುಕತೆ: ಮಹತ್ವದ ಮಾತುಕತೆ!

ಚೀನಾ ಜೊತೆಗಿನ ಗಡಿ ವಿವಾದದ ಬೆನ್ನಲ್ಲೇ ಮಂಗಳvAr  2+2 ಮಾತುಕತೆ|   ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಅಮೆರಿಕ ಸಚಿವರ ಚರ್ಚೆ| ಕ್ಷೇತ್ರೀಯ ಹಾಗೂ ಜಾಗತಿಕ ಭದ್ರತೆ ಸಂಬಂಧ ಮಾತುಕತೆ

At NSA Doval meeting with Pompeo and Esper focus on shared objectives pod
Author
Bangalore, First Published Oct 27, 2020, 12:27 PM IST

ನವದೆಹಲಿ(ಅ.27): ಚೀನಾ ಜೊತೆಗಿನ ಗಡಿ ವಿವಾದದ ಬೆನ್ನಲ್ಲೇ ಮಂಗಳವಾರದಂದು ಮಹತ್ವದ  2+2 ಸಚಿವ ಮಟ್ಟದ ಮಾತುಕತೆ ನಡೆದಿದೆ. ಈ ಸಭೆಗೂ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೋಂಪಿಯೋ ಹಾಗೂ ರಕ್ಷಣಾ ಸಚಿವ ಮಾರ್ಕ್ ಎಸ್ಪರ್‌ರನ್ನು ಭೇಟಿ ಮಾಡಿದ್ದಾರೆ. ಸಚಿವರ ಜೊತೆಗಿನ ಈ ಮಾತುಕತೆ ಸಕಾರಾತ್ಮಕವಾಗಿತ್ತೆನ್ನಲಾಗಿದೆ.

ಕ್ಷೇತ್ರೀಯ ಹಾಗೂ ಜಾಗತಿಕ ಭದ್ರತೆ ಸಂಬಂಧ ಮಾತುಕತೆ

ಈ ಮಾತುಕತೆ ವೇಳೆ ಅಜಿತ್ ಧೋವಲ್ ಹಾಗೂ ಅಮೆರಿಕದ ವಿದೇಶಾಂಗ ಸಚಿವ ಮತ್ತು ರಕ್ಷಣಾ ಸಚಿವರ ನಡುವೆ ನಡೆದ ಈ ಮಾತುಕತೆಯಲ್ಲಿ ಅನೇಕ ಮಹತ್ವದ ಹಾಗೂ ಪ್ರಮುಖ ಸವಾಲುಗಳ ಬಗ್ಗೆ ಮಾತುಗಳು ನಡೆದಿವೆ. ಅಲ್ಲದೇ ರಕ್ಷಣಾ ಇಲಾಖೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆದಿದೆ.

At NSA Doval meeting with Pompeo and Esper focus on shared objectives pod

2+2 ಸಭೆಯಲ್ಲಿ ರಕ್ಷಣಾ ಇಲಾಖೆಯ ಒಪ್ಪಂದ ಹಾಗೂ BECA ಸಂಬಂಧ ಹಸ್ತಾಕ್ಷರ

ಇನ್ನು ಅತ್ತ 2+2 ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜಯಶಂಕರ್, ಅಮೆರಿಕದ ವಿದೇಶಾಂಗ ಸಚಿವ ಮೈಕ್, ರಕ್ಷಣಾ ಸಚಿವ ಮಾರ್ಕ್ ಉಪಸ್ಥಿತಿಯಲ್ಲಿ ಉಭಯ ರಾಷ್ಟ್ರಗಳ ನಡುವೆ BECA ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಭಾರತದ ಸ್ಯಾಟಲೈಟ್ ಕ್ಷಮಗತೆ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. 

Follow Us:
Download App:
  • android
  • ios