ಕೊರೋನಾ ಸೋಂಕಿನಿಂದ ಮತ್ತೋರ್ವ ಬಿಜೆಪಿ ನಾಯಕ ನಿಧನ: ಮೋದಿ ಸಂತಾಪ
ಕೊರೋನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ಬಿಜೆಪಿ ನಾಯಕ ನಿಧನರಾಗಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಅಹಮದಾಬಾದ್, (ಅ.27): ಗುಜರಾತಿ ಖ್ಯಾತ ನಟ, ರಾಜಕಾರಣಿ ನರೇಶ್ ಕನೋಡಿಯಾ(77) ಅವರು ಕೊರೋನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ.
ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದದ್ದ ನರೇಶ್ ಅವರು, ಚಿಕಿತ್ಸೆಗೆ ಸ್ಪಂದಿಸದೆ ಇಂದು (ಮಂಗಳವಾರ) ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ನಿಧನ: ಕಳಚಿದ ಮಧ್ಯೆ ಕರ್ನಾಟಕದ ಕೈ ಕೊಂಡಿ..!
ಅ.20 ರಂದು ನರೇಶ್ ಅವರಿಗೆ ಕೊರೋನಾ ಸೋಂಕು ಧೃಡಪಟ್ಟಿತ್ತು. ಇದಕ್ಕೂ ಮುನ್ನ ಅವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೋವಿಡ್‌ನಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು.
ಎರಡು ದಿನಗಳ ಹಿಂದಷ್ಟೇ ನರೇಶ್ ಅವರ ಹಿರಿಯ ಸಹೋದರ, ಗುಜರಾತಿ ಗಾಯಕ ಮಹೇಶ್ ಕನೋಡಿಯಾ ತಮ್ಮ ಗಾಂಧಿನಗರ ನಿವಾಸದಲ್ಲಿ ಮೃತಪಟ್ಟಿದ್ದರು.
ನರೇಶ್ ಕನೋಡಿಯ ಅವರು 100 ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ 2002 ರಿಂದ 2007ರಲ್ಲಿ ಕರ್ಜಾನ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು.
ನರೇಶ್ ಕನೋಡಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಹಿರಿಯ ನಟ ಮತ್ತು ಮಾಜಿ ಶಾಸಕ ನರೇಶ್ ಕನೋಡಿಯಾ ಅವರ ನಿಧನದಿಂದ ಬೇಸರವಾಗಿದೆ. ಮನರಂಜನೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಣೀಯ ಟ್ವೀಟ್ ಮಾಡಿದ್ದಾರೆ.