ಸ್ಯಾಂಡಲ್‌ವುಡ್‌ ಡಿಂಪಲ್ ಹುಡುಗಿ ರಚಿತಾ ರಾಮ್ ಕಳೆದು ಎರಡೂವರೆ ವರ್ಷದಿಂದ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹಿಟ್ ಸ್ಟಾರ್‌ಗಳ ಜೊತ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೊತೆಗೆ ಕಿರುತೆರೆ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿಯಾಗಿರೋಕೆ ಕಾರಣ ಏನು? ಅವರ ಸಂಭಾವನೆ ಹೇಗೆದೆ ಎಂದು ಇಲ್ಲಿದೆ ನೋಡಿ...

ವಿಜಯದಶಮಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಿಂಪಲ್ ಬೊಂಬೆ ಹಬ್ಬ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಜಾ ಭಾರತದ ಎಲ್ಲಾ ಕಾಮಿಡಿ ಕಿಲಾಡಿಗಳನ್ನು ಸೇರಿಸಿಕೊಂಡು, ರಚ್ಚು ಜೊತೆ ಆಟವಾಡುತ್ತಾ ಟೈಂ ಪಾಸ್ ಮಾಡಿದರು. ಕಿನ್ನರಿ ಖ್ಯಾತಿಯ ಮಣಿ ಅಲಿಯಾಸ್ ಭೂಮಿ ಶೆಟ್ಟಿಯನ್ನು ಮೊದಲ ಬಾರಿಗೆ ಈ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿರುವುದನ್ನು ವೀಕ್ಷಕರು ನೋಡಿದರು.

ರಚ್ಚು ಬ್ಯಾಗ್ ಯಾವುದು?
ಈ ಕಾರ್ಯಕ್ರಮದಲ್ಲಿ ನಿಜ/ಸುಳ್ಳು ಎಂಬ ಒಂದು ಗೇಮ್ ಆಡಲಾಗಿತ್ತು. ಒಂದು ಕಡೆ ರಚ್ಚು ನಿಂತರೆ, ಮತ್ತೊಂದು ಕಡೆ ಇತರೆ ಇಬ್ಬರು ಸ್ಪರ್ಧಿಗಳು ನಿಂತಿದ್ದರು. ಇವರ ನಡುವೆ ಬಿಳಿ ಪರದೆ ಹಾಕಲಾಗಿರುತ್ತದೆ.  'ರಚಿತಾ ರಾಮ್ ಮೂಢ ನಂಬಿಗಳನ್ನು ನಂಬುತ್ತಾರೆ,' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸುವ ಮೂಲಕ ರಚ್ಚು ತಮ್ಮ ಬಳಿ ಇರುವ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

 

'ಎಡರೂವರೆ ವರ್ಷದಿಂದ ನನ್ನ ಬಳಿ ಒಂದು ಹ್ಯಾಂಡ್ ಬ್ಯಾಗ್ ಇದೆ. ಅದನ್ನೇ ಈಗಲೂ ಬಳಸುತ್ತಿರುವೆ. ಆ ಬ್ಯಾಗ್ ಬಂದಾಗಿನಿಂದಲೂ ನನಗೆ ವಿಟಮಿನ್ M ತುಂಬಾ ಚೆನ್ನಾಗಿ ಬರುತ್ತಿದೆ. ಸೋ ನಾನು ಈ ರೀತಿಯ ನಂಬಿಕೆಗಳನ್ನು ನಂಬುತ್ತೇನೆ,' ಎಂದು ಹೇಳಿದ್ದಾರೆ.

ದಯವಿಟ್ಟು ಆ ಬ್ಯಾಗ್ ತೋರಿಸಿ, ಯಾವುದು ಆ ಬ್ಯಾಗ್, ಒಂದು ಫೋಟೋ ಆದರೂ ನಮಗೆ ಕೊಡಿ ಎಂದು ಸ್ಪರ್ಧಿಗಳು ಕೇಳಿದರೆ 'ಬೇಡ ನಾನು ಬ್ಯಾಗ್ ತೋರಿಸುವುದಿಲ್ಲ. ಅದಕ್ಕೆ ದೃಷ್ಠಿ ಆಗ್ಬಿಟ್ರೆ ನನಗೆ ಕಷ್ಟ ಆಗುತ್ತೆ,'  ಎಂದೂ ಹೇಳಿದ್ದಾರೆ. 

ಸಿಕ್ಕಾಪಟ್ಟೆ ಹ್ಯಾಪಿಯಾಗಿರುವ ರಚಿತಾ ರಾಮ್; ಕಾರಣವೇನು? 

ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದರೂ, ಚಿತ್ರೀಕರಣಕ್ಕೆಂದು ಹೆಚ್ಚಾಗಿ ಪ್ರಯಣ ಮಾಡಿದರೂ ಎಲ್ಲಿಯೂ ತಮ್ಮ ಬ್ಯಾಗ್ ಅಥವಾ ಪರ್ಸ್ ಫೋಟೋಗಳನ್ನು ಶೇರ್ ಮಾಡಿಕೊಂಡಿಲ್ಲ. ಇನ್ನು ಮೇಲೆ ಅಭಿಮಾನಿಗಳು ತಪ್ಪದೇ ಅವರ ಬ್ಯಾಗ್ ಗಮನಿಸುವುದನ್ನು ತಪ್ಪಿಸೋಲ್ಲ ಎಂದೆನಿಸುತ್ತದೆ.