ಪ್ರಜ್ವಲ್ ರೇವಣ್ಣಗೆ ಮಾನಸಿಕ ರೋಗ ಇತ್ತಾ?: ಸಚಿವ ಪ್ರಿಯಾಂಕ್ ಖರ್ಗೆ
ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಮಾನಸಿಕವಾಗಿ ಏನಾದರೂ ರೋಗ ಇತ್ತಾ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರಗಿ (ಮೇ.06): ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಮಾನಸಿಕವಾಗಿ ಏನಾದರೂ ರೋಗ ಇತ್ತಾ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ರಾಜಕೀಯ ಮಾಡುವಂಥದ್ದು ಏನೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ರಚನೆ ಮಾಡೋದು ರಾಜಕೀಯನಾ ಎಂದು ಖರ್ಗೆ ಪ್ರಶ್ನಿಸಿದರು. ಬಿಜೆಪಿಯವರು ಪ್ರಜ್ವಲ್ ಬಗ್ಗೆ ಎಲ್ಲಾ ಗೊತ್ತಿದ್ದರೂ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿಶ್ವ ಗುರುವಿಗೆ ಎಲ್ಲಾ ವಿಚಾರ ಗೊತ್ತಿದೆ.
ಬಿಜೆಪಿಯವರು ಯಾಕೆ ಈ ವಿಚಾರದಲ್ಲಿ ಮೈ ಮೇಲೆ ಎಣ್ಣೆ ಹಚ್ಚಿಕೊಂಡು ಕೂತಿದ್ದಾರೆ ಎಂದು ಪ್ರಶ್ನಿಸಿದರು. ಬೇರೆಯವರೇನಾದರೂ ಈ ರೀತಿ ಮಾಡಿದ್ದರೆ ಬಿಜೆಪಿಯವರು ದಿಲ್ಲಿಯಿಂದ ಹಳ್ಳಿಯವರೆಗೆ ಪ್ರಚಾರ ಮಾಡುತ್ತಿದ್ದರು. ಎಲ್ಲದರ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ? ಅಮಿತ್ ಶಾ, ನಡ್ಡಾ, ಅಶೋಕ್, ವಿಜಯೇಂದ್ರ, ಯಾಕೆ ಸಂತ್ರಸ್ತರ ಮನೆಗೆ ಹೋಗಿಲ್ಲ? ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ನಾಳೆಯಿಂದ 5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಐಪಿಎಸ್ ಆಫೀಸರ್ ರಾಜೀನಾಮೆ ಕೊಟ್ಟಿದ್ದೇ ಸರಿಯಾಯ್ತು: ಲೈಂಗಿಕ ಹಗರಣದ ಆರೋಪಿ ಸಂಸದ ಪ್ರಜ್ವಲ್ ಪರಾರಿಯಾಗಲು ಬಿಟ್ಟಿದ್ದು ಕಾಂಗ್ರೆಸ್ ಎನ್ನುವ ಅಣ್ಣಾಮಲೈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಒಬ್ಬ ಐಪಿಎಸ್ ಆಫಿಸರ್ ಅವರಿಗೆ ಪ್ರೋಸಿಜರ್ ಗೋತ್ತಿಲ್ವಾ? ನಾಚಿಕೆ ಆಗಬೇಕು ಅಣ್ಣಾಮಲೈಗೆ ಯಾವ ರಾಜ್ಯ ಜೀವನ ಕೊಟ್ಟಿದೆ ಬದುಕು ಕೊಟ್ಟಿದೆ ತಿಳಿದು ಮಾತಾಡಲಿ, ಪ್ರೋಸಿಜರ್ ಬಗ್ಗೆ ಗೋತ್ತಿಲ್ಲದೆ ಇರುವ ಐಪಿಎಸ್ ಆಫಿಸರ್ ರಾಜಿನಾಮೆ ಕೊಟ್ಟಿರೋದು ಒಳ್ಳೆಯದಾಯ್ತು ಎಂದರು.
ಇಂತಹ ಅಸಮರ್ಥ ಐಪಿಎಸ್ ಅಧಿಕಾರಿಯಿಂದ ನಮ್ಮ ರಾಜ್ಯದ ಜನರಿಗೆ ನ್ಯಾಯ ಸಿಗ್ತಿರಲಿಲ್ಲ ಅಂತಾ ಗೋತ್ತಾಯ್ತು. ಹಾಸನದ ಪ್ರಕರಣದಿಂದ ಜನರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಕಡಿಮೆ ಆಗ್ತಿದೆ, ಎಲ್ಲರೂ ತಲೆ ತಗ್ಗಿಸುವ ವಿಚಾರ ನಾಚಿಕೆಗೇಡಿತನದ ಸಂಗತಿ, ಕೆಲವೊಂದು ಸಾರಿ ಮಾತಾಡುವ ವಿಚಾರ ಕೂಡ ಸರಿ ಇರಲ್ಲ. ನನ್ನ ಹಿಡಿದುಕೊಂಡು ಎಲ್ಲರು ಕೂಡ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ ಎಂದರು. ಬಿಜೆಪಿಯವರು ಪ್ರಜ್ವಲ್ ಬಗ್ಗೆ ಎಲ್ಲಾ ಗೊತ್ತಿದ್ದರು ವಿದೇಶಕ್ಕೆ ಕಳುಹಿಸಿದ್ದಾರೆ. ವಿಶ್ವ ಗುರುವಿಗೆ ಎಲ್ಲಾ ವಿಚಾರ ಗೊತ್ತಿದೆ.
Lok Sabha Elections 2024: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಶೇ.50 ಮೀಸಲು ಸವಾಲ್
ನೀರವ್ ಮೋದಿ , ಪ್ರಜ್ವಲ್ ಸೇರಿ ಹಲವರನ್ನ ವಾಪಸ್ ಕರೆತರುವ ಕೆಲಸ ಮಾಡ್ತಿಲ್ಲ. ಬಿಜೆಪಿಯವರು ಯಾಕೆ ಈ ವಿಚಾರದಲ್ಲಿ ಮೈ ಮೇಲೆ ಎಣ್ಣೆ ಹಾಕಿ ಕೂತಿದ್ದಾರೆ ಎಂದು ಪ್ರಶ್ನಿಸಿದರು. ಬೇರೆ ಪಕ್ಷದವರು ಏನಾದ್ರು ಈ ರೀತಿ ಮಾಡಿದ್ರೆ ದಿಲ್ಲಿಯಿಂದ ಹಳ್ಳಿಯವರೆಗೆ ಪ್ರಚಾರ ಮಾಡ್ತಿದ್ದರು, ಎಲ್ಲದರ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಮಾತಾಡ್ತಿಲ್ಲ? ಅಮಿತ್ ಶಾ, ನಡ್ಡಾ, ಅಶೋಕ್, ವಿಜಯೇಂದ್ರ, ಯಾಕೆ ಸಂತ್ರಸ್ತರ ಮನೆಗೆ ಹೋಗಿಲ್ಲ? ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.