ಭಗವಾನ್ ಮುಖಕ್ಕೆ ಮಸಿ, ಪೆಟ್ರೋಲ್ ಬೆಲೆ ಏರಿಕೆ ಬಿಸಿ; ಫೆ.4ರ ಟಾಪ್ 10 ಸುದ್ದಿ!
ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿಯಲಾಗಿದೆ. ಪ್ರಿಯಾಂಕ ಗಾಂಧಿ ಬೆಂಗಾವಲು ಪಡೆ ವಾಹನ ಅಪಘಾಕ್ಕೀಡಾಗಿದೆ. ರೈತರ ಮುಷ್ಕರ ಕುರಿತು ಕುಟುಕಿದ ವಿದೇಶಿ ತಾರೆಯರಿಗೆ ತೆಂಡುಲ್ಕರ್ ತಿರುಗೇಟು ನೀಡಿದ್ದಾರೆ. ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರೀತಿ ಝಿಂಟಾ ಬ್ರೇಕ್ ಅಪ್, ತೇಜಸ್ ಯುದ್ಧ ವಿಮಾನದಲ್ಲಿ ಹಾರಾಡಿಜ ತೇಜಸ್ವಿ ಸೂರ್ಯ ಸೇರಿದಂತೆ ಫೆಬ್ರವರಿ 4ರ ಟಾಪ್ 10 ಸುದ್ದಿ ವಿವರ,
ಹಿಂದೂ ಧರ್ಮದ ಬಗ್ಗೆ ಅವಹೇಳನ: ಸಾಹಿತಿ ಭಗವಾನ್‌ಗೆ ಮಸಿ ಬಳಿದ ಮಹಿಳಾ ಅಡ್ವಕೇಟ್...
ಕೋರ್ಟ್‌ನಿಂದ ಹೊರಗೆ ಬರುತ್ತಿದ್ದ ವೇಳೆ ಭಗವಾನ್ ಮುಖಕ್ಕೆ ಮಹಿಳಾ ಅಡ್ವಾಕೇಟ್ ಮಸಿ ಬಳಿದಿದ್ದಾರೆ.
ಪ್ರಿಯಾಂಕಾ ಗಾಂಧಿ ಬೆಂಗಾವಲು ಪಡೆ ವಾಹನಗಳ ಅಪಘಾತ!...
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಬೆಂಗಾವಲು ಪಡೆಯ ನಾಲ್ಕು ವಾಹನಗಳ ಅಪಘಾತ| ಕಾರುಗಳು ಜಖಂ ಆಗಿವೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಭಾರತದ ಮೊದಲ ಯಂಗೆಸ್ಟ್ ಲೇಡಿ ಪೈಲಟ್: ಕಾಶ್ಮೀರಿ ಯುವತಿ ಸಾಧನೆಗೆ ಶ್ಲಾಘನೆ...
ಕಣಿವೆ ರಾಜ್ಯದಲ್ಲಿ ಬದುಕು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಎಲ್ಲ ಅಡೆತಡೆಗಳ ಮಧ್ಯೆಯೂ ಕಷ್ಟಪಟ್ಟ ಮೇಲೆ ಬಂದ ಈಕೆ ದೇಶದ ಯಂಗೆಸ್ಟ್ ಲೇಡಿ ಪೈಲಟ್ ಆಗಿ ಗುರುತಿಸಲ್ಪಟ್ಟಿದ್ದಾರೆ. ಸಾಧನೆಯ ಹಾದಿಯಲ್ಲಿರೋ ಬಹಳಷ್ಟು ಜನಕ್ಕೆ ಸ್ಫೂರ್ಥಿಯಾಗಿದ್ದಾರೆ.
ಇದು ನಮ್ಮ ಆಂತರಿಕ ವಿಚಾರ; ವಿದೇಶಿ ತಾರೆಯರಿಗೆ ತಿರುಗೇಟು ನೀಡಿದ ತೆಂಡುಲ್ಕರ್...
ಈ ಪೈಕಿ ಖ್ಯಾತ ಪಾಪ್ ಸ್ಟಾರ್ ರಿಹಾನ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಕಟವಾದ ರೈತರ ಮುಷ್ಕರದ ಬಗ್ಗೆಗಿನ ಕಾರ್ಯಕ್ರಮವನ್ನು ಉಲ್ಲೇಖಿಸಿ 'ನಾವೇಕೆ ಈ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಬಾಲಿವುಡ್ ಸೆಲಿಬ್ರಿಟಿಗಳು ಸೇರಿದಂತೆ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ರಿಕೆಟಿಗರ ಈ ನಡೆಗೆ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ.
ಈ ಕಾರಣಕ್ಕೆ ಬ್ರೇಕ್ ಆಯಿತು ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಸಂಬಂಧ!...
ಬಾಲಿವುಡ್‌ನಲ್ಲಿ ಡಿಂಪಲ್ ಗರ್ಲ್ ನಟಿ ಪ್ರೀತಿ ಜಿಂಟಾ, ಉದ್ಯಮಿ ನೆಸ್ ವಾಡಿಯಾ ಸ್ನೇಹದಿಂದ ಪ್ರಾರಂಭವಾದ ಸಂಬಂಧ ಪ್ರೀತಿಗೆ ತಿರುಗಿತ್ತು. ನೆಸ್ ಅವರ ಆಜ್ಞೆಯ ಮೇರೆಗೆ ಪ್ರೀತಿ ಬಾಲಿವುಡ್‌ನಿಂದ ಸಹ ದೂರವಾಗಿದ್ದರಂತೆ. ಆದರೆ, ನೆಸ್ ವಾಡಿಯಾರ ತಾಯಿ ಈ ಪ್ರೀತಿಯನ್ನು ಒಪ್ಪಲಿಲ್ಲ. ಅದಕ್ಕೇ ಮುರಿಯಿತಾ ಈ ಸಂಬಂಧ?
BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ...
ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಹಾಗೂ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಎನ್ಎಲ್) ಇತ್ತೀಚೆಗೆಷ್ಟೇ ಹೊಸದಾದ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಎಂಬ ಓಟಿಟಿ ಪ್ಯಾಕ್ ಆರಂಭಿಸಿದೆ. ಈ ಪ್ಯಾಕ್‌ನಲ್ಲಿ ಗ್ರಾಹಕರು ಹಲವು ಟಿವಿ ಮತ್ತು ಸಾವಿರಾರು ಸಿನಿಮಾಗಳನ್ನು ನೋಡಲು ಸಾಧ್ಯವಾಗಲಿದೆ.
ವಾಹನ ಸವಾರರಿಗೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಬರೆ!...
ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರ ಏರಿಕೆ ಕಂಡು ದಾಖಲೆಯ ಮಟ್ಟ ತಲುಪಿದೆ.
2021ರಲ್ಲಿ ಗರಿಷ್ಠ ಮಾರಾಟವಾದ ಟಾಪ್ 5 ಕಾರು; ಇಲ್ಲಿದೆ ಲಿಸ್ಟ್!...
1980ರ ದಶಕದಿಂದ ಭಾರತದಲ್ಲಿ ಮಾರುತಿ ಸುಜುಕಿ ಆಟೋಮೊಬೈಲ್ ಸಾಮ್ರಾಟಾನಾಗಿ ಮೆರೆಯುತ್ತಿದೆ. ಮಾರುತಿ 800 ಕಾರಿನಿಂದ ಆರಂಭಗೊಂಡ ಜರ್ನಿ ಈಗಲೂ ಭಾರತದ ಆಟೋ ಮಾರುಕಟ್ಟೆಯ ನಂ.1 ಸ್ಥಾನ ಆಕ್ರಮಿಸಿಕೊಂಡಿದೆ. 2021ರಲ್ಲಿ ಮಾರಾಟವಾದ ಟಾಪ್ 5 ಬೆಸ್ಟ್ ಕಾರುಗಳ ಪೈಕಿ ಮಾರುತಿ ಸುಜುಕಿ ಕಾರುಗಳೇ ಅಧಿಪತ್ಯ ಸಾಧಿಸಿದೆ. ಈ ವರ್ಷ ಮಾರಾಟಗೊಂಡ ಟಾಪ್ 5 ಕಾರುಗಳ ವಿವರ ಇಲ್ಲಿದೆ.
ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ...
ಥಿಯೇಟರ್‌ಗಳಲ್ಲಿ ಶೇ 100 ಅವಕಾಶ ನೀಡುವ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೇಗಿವೆ ಹೊಸ ಗೈಡ್‌ಲೈನ್ಸ್..? ಇಲ್ಲಿ ನೋಡಿ
Aero India 2021 : ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ತೇಜಸ್ವಿ ಸೂರ್ಯ...
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೊನಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದರು. ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ 1 ಸಾವಿರ ಕಿ.ಮೀ ವೇಗದಲ್ಲಿ ತೇಜಸ್ವಿ ಸೂರ್ಯ ಹಾರಾಟ ನಡೆಸಿದರು.