ಈ ಕಾರಣಕ್ಕೆ ಬ್ರೇಕ್‌‌ ಆಯಿತು ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಸಂಬಂಧ‌!

First Published Feb 3, 2021, 5:53 PM IST

ಬಾಲಿವುಡ್‌ನಲ್ಲಿ ಡಿಂಪಲ್ ಗರ್ಲ್ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ತಮ್ಮ 46ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನವರಿ 31, 1975ರಂದು ಜನಿಸಿದ ಪ್ರೀತಿಯ ಹೆಸರು ಮದುವೆಗಿಂತ ಮೊದಲು, ಉದ್ಯಮಿ ನೆಸ್ ವಾಡಿಯಾ ಜೊತೆ ಕೇಳಿಬರುತ್ತಿತ್ತು. ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಐದು ವರ್ಷಗಳ ಕಾಲ ನಿಕಟ ಸಂಬಂಧ ಹೊಂದಿದ್ದರು. ಫಿಲ್ಮ್ ಪಾರ್ಟಿಗಳು, ಪ್ರಶಸ್ತಿ ಸಮಾರಂಭಗಳಲ್ಲಿ ಮತ್ತು ಕ್ರಿಕೆಟ್ ಮೈದಾನದಲ್ಲಿ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿತ್ತು. ಸ್ನೇಹದಿಂದ ಪ್ರಾರಂಭವಾದ ಸಂಬಂಧ ಪ್ರೀತಿಗೆ ತಿರುಗಿತ್ತು. ನೆಸ್ ಅವರ ಆಜ್ಞೆಯ ಮೇರೆಗೆ ಪ್ರೀತಿ ಬಾಲಿವುಡ್‌ನಿಂದ ಸಹ  ದೂರವಾಗಿದ್ದರಂತೆ. ಆದರೆ, ನೆಸ್ ವಾಡಿಯಾರ ತಾಯಿ ಈ ಪ್ರೀತಿಯನ್ನು ಒಪ್ಪಲಿಲ್ಲ. ಅದಕ್ಕೇ ಮುರಿಯಿತಾ ಈ ಸಂಬಂಧ?