2021ರಲ್ಲಿ ಗರಿಷ್ಠ ಮಾರಾಟವಾದ ಟಾಪ್ 5 ಕಾರು; ಇಲ್ಲಿದೆ ಲಿಸ್ಟ್!
1980ರ ದಶಕದಿಂದ ಭಾರತದಲ್ಲಿ ಮಾರುತಿ ಸುಜುಕಿ ಆಟೋಮೊಬೈಲ್ ಸಾಮ್ರಾಟಾನಾಗಿ ಮೆರೆಯುತ್ತಿದೆ. ಮಾರುತಿ 800 ಕಾರಿನಿಂದ ಆರಂಭಗೊಂಡ ಜರ್ನಿ ಈಗಲೂ ಭಾರತದ ಆಟೋ ಮಾರುಕಟ್ಟೆಯ ನಂ.1 ಸ್ಥಾನ ಆಕ್ರಮಿಸಿಕೊಂಡಿದೆ. 2021ರಲ್ಲಿ ಮಾರಾಟವಾದ ಟಾಪ್ 5 ಬೆಸ್ಟ್ ಕಾರುಗಳ ಪೈಕಿ ಮಾರುತಿ ಸುಜುಕಿ ಕಾರುಗಳೇ ಅಧಿಪತ್ಯ ಸಾಧಿಸಿದೆ. ಈ ವರ್ಷ ಮಾರಾಟಗೊಂಡ ಟಾಪ್ 5 ಕಾರುಗಳ ವಿವರ ಇಲ್ಲಿದೆ.
2021ರ ಆರಂಭವನ್ನು ಮಾರುತಿ ಸುಜುಕಿ ಭರ್ಜರಿಯಾಗಿ ಮಾಡಿದೆ. ಈ ವರ್ಷದ ಮೊದಲ ತಿಂಗಳು ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಮಾರುತಿ ಯಶಸ್ವಿಯಾಗಿದೆ.
ವಿಶೇಷ ಅಂದರೆ, 2021ರ ಜನವರಿಯಲ್ಲಿ ಮಾರಾಟವಾದ ಅತ್ಯುತ್ತಮ ಟಾಪ್ 5 ಕಾರುಗಳ ಪೈಕಿ ಆರಂಭಿಕ ಐದು ಸ್ಥಾವನ್ನು ಮಾರುತಿ ಸುಜಿಕಿ ಆಕ್ರಮಿಸಿಕೊಂಡಿದೆ.
2021ರ ಜನವರಿಯಲ್ಲಿ ಗರಿಷ್ಠ ಮಾರಾಟವಾದ ಕಾರು ಮಾರುತಿ ಅಲ್ಟೋ. ಜನವರಿ ತಿಂಗಳಲ್ಲಿ 18,260 ಆಲ್ಟೋ ಕಾರುಗಳು ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 3 ರಷ್ಟು ಕಡಿಮೆಯಾಗಿದ್ದರು. ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ.
ಮಾರಾಟದಲ್ಲಿ ಎರಡನೇ ಸ್ಥಾನವನ್ನು ಮಾರುತಿ ಸ್ವಿಫ್ಟ್ ಆಕ್ರಮಿಸಿಕೊಂಡಿದೆ. ಜನವರಿ ತಿಂಗಳಲ್ಲಿ ಸ್ವಿಫ್ಟ್ 17,180 ಕಾರುಗಳು ಮಾರಾಟಗೊಂಡಿದೆ. ಮಾರುತಿ ಸ್ವಿಫ್ಟ್ ಬೆಲೆ 5.49 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಮಾರುತಿ ವ್ಯಾಗನ್ಆರ್ ಕಾರು ಮೂರನೇ ಸ್ಥಾನದಲ್ಲಿದೆ. ಕಳೆದ ತಿಂಗಳು ವ್ಯಾಗನ್ಆರ್ ಕಾರು 17,165 ಕಾರುಗಳು ಮಾರಟಗೊಂಡಿದೆ. ವ್ಯಾಗನ್ಆರ್ ಕಾರಿನ ಬೆಲೆ 4.65 ಲಕ್ಷ ರೂಪಾಯಿಂದ((ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಗಳಲ್ಲಿ ಜನಪ್ರಿಯ ಕಾರಾಗಿರುವ ಮಾರುತಿ ಬಲೆನೋ ನಾಲ್ಕನೇ ಸ್ಥಾನದಲ್ಲಿದೆ. ಬಲೆನೋ 16,648 ಕಾರುಗಳು ಮಾರಾಟಗೊಂಡಿದೆ. ಬಲೆನೋ ಆರಂಭಿಕ ಬೆಲೆ5.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮಾರುತಿ ಡಿಸೈರ್ ಕಾರು ಜನವರಿ ತಿಂಗಳಲ್ಲಿ 15,125 ಕಾರುಗಳು ಮಾರಟಗೊಂಡಿದೆ. ಕಳೆದ ವರ್ಷಕ್ಕ ಹೋಲಿಸಿದರೆ ಶೇಕಡಾ 32 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಡಿಸೈರ್ ಆರಂಭಿಕ ಬೆಲೆ 5.94 ಲಕ್ಷ ರೂಪಾಯಿ((ಎಕ್ಸ್ ಶೋ ರೂಂ).
ಕೊರೋನಾ ವೈರಸ್, ಸಾಮಾಜಿಕ ಅಂತರ ಸೇರಿದಂತೆ ಹಲವು ಕಾರಣಗಳಿಂದ ಜನ ಸಾರಿಗೆ ವಾಹನದಲ್ಲಿ ಪ್ರಯಾಣಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತಮ್ಮ ಕಡಿಮೆ ಬೆಲೆಯ ಹಾಗೂ ಸಣ್ಣ ಕಾರಿನತ್ತ ಜನ ಮೊರೆ ಹೋಗುತ್ತಿದ್ದಾರೆ.