1) ‘ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’!

ರೇಪ್ ಇನ್ ಇಂಡಿಯಾ’ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು ಸತ್ಯವನ್ನೇ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ‘ರೇಪ್ ಇನ್ ಇಂಡಿಯಾ’ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.


2) ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ

 ಹೀಗೂ ಆಗುತ್ತೆ ಅಂತಾ ಆ ಜೋಡಿ ಭಾವಿಸಿರಲಿಲ್ಲ. ದೇವಸ್ಥಾನದ ಮೂಲೆಯಲ್ಲಿ ರೊಮ್ಯಾನ್ಸ್ ಮಾಡಿದ್ರೆ ಯಾರಿಗೂ ಕಾಣಲ್ಲ ಎಂದು ಭಾವಿಸ್ಕೊಂಡಿದ್ರು. ಆದರೆ ಅವರಿಗರಿವಿಲ್ಲದೇ, ಏನೂ ಅರಿಯದ ಮುಗ್ಧ ಬಾಲಕಿಯೊಬ್ಬಳು  ಅದನ್ನು ರೆಕಾರ್ಡ್ ಮಾಡಿಬಿಟ್ಳು.  ವಿಡಿಯೋ ರೆಕಾರ್ಡ್ ಮಾಡಿದ ಬಾಲಕಿ ಭಾರೀ ದೊಡ್ಡ ಬೆಲೆ ತೆರಬೇಕಾಯ್ತು.

3) ಬೆಂಗಳೂರು: ಕೆಲಸಕ್ಕೆ ಕರೆತಂದು ಪತ್ನಿ ಎದುರೇ ಯುವತಿಯ ರೇಪ್!

ಹೈದರಾಬಾದ್ ದಿಶಾ ಹತ್ಯಾಚಾರ ಪ್ರಕರಣ ಇನ್ನೂ ತಣ್ಣಗಾಗಿಲ್ಲ, ಅದರ ಬೆನ್ನಲ್ಲೇ ಸಿಲಿಕಾನ್ ನಗರಿಯಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಕಿಗೆ ಬಂದಿದೆ. ಕೆಲಸಕ್ಕೆಂದು ಕರೆತಂದು ಯುವತಿಯನ್ನು ನಾಲ್ಕು ವರ್ಷದಿಂದ ಆಕೆಯ ಮೇಲೆ ನಿರಂತರವಾಗಿ ದುರುಳನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ.

4) ಮೊದಲ ಏಕದಿನ: ಇಲ್ಲಿದೆ ಟೀಂ ಇಂಡಿಯಾ ಸಂಭವನೀಯ ತಂಡ: ಯಾರಿಗಿದೆ ಚಾನ್ಸ್?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಡಿ.15 ರಿಂದ ಆರಂಭಗೊಳ್ಳುತ್ತಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿರುವ ಕೊಹ್ಲಿ ಸೈನ್ಯ ಇದೀಗ ಏಕದಿನದಲ್ಲೂ ಶುಭಾರಂಭದ ವಿಶ್ವಾಸದಲ್ಲಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ಸಂಭವನೀಯ ತಂಡ ಪ್ರಕಟಿಸಲಾಗಿದೆ.

5) ಸಾಲಿಗ್ರಾಮ ಕೋಮು ಗಲಾಟೆಗೆ ಟ್ವಿಸ್ಟ್; ಅಸಲೀ ಕಾರಣವೇ ಬೇರೆ!

ಮೈಸೂರಿನ ಸಾಲಿಗ್ರಾಮ ಕೋಮುಗಲಾಟೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬೈಕ್ ಅಪಘಾತದಿಂದ ಶುರುವಾದ ಜಗಳ, ಗಲಾಟೆ- ಕಲ್ಲೂ ತೂರಾಟಕ್ಕೆ ಕಾರಣವಾಗಿದೆ. ಈಗ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಅಸಲೀ ಕಾರಣ ಬೇರೆಯೇ ಎಂದು ತಿಳಿದು ಬಂದಿದೆ. 

6) ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್‌ 2 ಟೀಂನಿಂದ ಹೊಸ ಸುದ್ದಿ!

ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್.  ಸ್ಯಾಂಡಲ್‌ವುಡ್‌ನಲ್ಲಿ ಐತಿಹಾಸಿಕ ದಾಖಲೆಯನ್ನೇ ಬರೆದಿದೆ.  ಯಶ್ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತಾದರು. ಇದೀಗ ಈ ಚಿತ್ರದ ಚಾಪ್ಟರ್ - 2 ತೆರೆಗೆ ಬರುತ್ತಿದೆ. ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. 

7) ಸೋತವರಿಗೂ ಸಚಿವ ಸ್ಥಾನ: ಬಿಎಸ್‌ವೈಗೆ ಬ್ಲಾಕ್‌ಮೇಲ್..!

ಸಚಿವ ಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸೋತವರಿಗೂ ಸಚಿವ ಸ್ಥಾನ‌ ನೀಡುವಂತೆ ಬಿಎಸ್‌ವೈಗೆ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಹೇಳಿದ್ದಾರೆ.

8) ಮತ್ತೆ 200 ರೂಪಾಯಿಗೆ ಸಿಗ್ತಿದೆ ಮೊಬೈಲ್! ಶೋರೂಂ ಮುಂದೆ ಜನಸಾಗರ

ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ 200 ರೂ.ಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಜನ ಕ್ಯೂ ನಿಂತಿದ್ದಾರೆ.  

9) ಇದು ವಿತ್ತ ಸಚಿವೆಯ ತಾಕತ್ತು! ನಿರ್ಮಲಾ ವಿಶ್ವದ 34ನೇ ಪ್ರಭಾವಿ ಮಹಿಳೆ

ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶ್ವದ ಟಾಪ್‌ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋಬ್ಸ್‌ರ್‍ ಮ್ಯಾಗಜಿನ್‌ ಪ್ರಕಟಿಸಿರುವ ವಿಶ್ವದ ನೂರು ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾಗೆ 34 ನೇ ಸ್ಥಾನ ಸಿಕ್ಕಿದೆ.

10) ಹೊಸ ವಿನ್ಯಾಸದಲ್ಲಿ 2020ರ ಸುಜುಕಿ ಹಯಬುಸಾ ಬಿಡುಗಡೆ

ಭಾರತದಲ್ಲಿ ಸುಜುಕಿ ಹಯಬುಸಾ ಬೈಕ್ ಬಿಡುಗಡೆಯಾಗಿದೆ. ಎಂಜಿನ್ ಅಪ್‌ಗ್ರೇಡ್, ಡಿಸೈನ್ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.