ಇದು ವಿತ್ತ ಸಚಿವೆಯ ತಾಕತ್ತು! ನಿರ್ಮಲಾ ವಿಶ್ವದ 34ನೇ ಪ್ರಭಾವಿ ಮಹಿಳೆ
ನಿರ್ಮಲಾ ವಿಶ್ವದ 34ನೇ ಪ್ರಭಾವಿ ಮಹಿಳೆ | ಫೋರ್ಬ್ಸ್ ಬಿಡುಗಡೆ ಮಾಡಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ | ಏಂಜೆಲಾ ಮರ್ಕೆಲ್, ನಂ.1, ಕ್ರಿಸ್ಟೀನ್ ಲಗಾರ್ಡೆ ನಂ.2, ಪೆಲೋಸಿ ನಂ.3 ಬೆಂಗಳೂರಿನ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾಗೂ ಸ್ಥಾನ
ನ್ಯೂಯಾರ್ಕ್ (ಡಿ. 14): ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವದ ಟಾಪ್ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಪ್ರಕಟಿಸಿರುವ ವಿಶ್ವದ ನೂರು ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾಗೆ 34 ನೇ ಸ್ಥಾನ ಸಿಕ್ಕಿದೆ.
"
ಸಂಕಷ್ಟದಲ್ಲಿ ಇನ್ಫೋಸಿಸ್: ಕಾನೂನು ಹೋರಾಟದ ಅನಿವಾರ್ಯತೆ!
ಉಳಿದಂತೆ ಪಟ್ಟಿಯಲ್ಲಿ ಎಚ್‌ಸಿಎಲ್ ಕಾರ್ಪೋರೇಷನ್‌ನ ಸಿಇಒ ರೋಶನಿ ನಾಡಾರ್ 54 ಮತ್ತು ಬೆಂಗಳೂರಿನ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ 64ನೇ ಸ್ಥಾನ ಪಡೆದುಕೊಂಡ ಭಾರತೀಯ ಮಹಿಳೆಯರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆ ಮತ್ತು ಹಣಕಾಸು ನಿರ್ವಹಿಸಿದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆ ಹೊಂದಿದ್ದಾರೆ.
ಸ್ಟಾರ್ ಇಂಡಿಯಾಕ್ಕೆ ಮಾಧವನ್ ಉಸ್ತುವಾರಿ, ದಕ್ಷಿಣ ಭಾರತದ ಟಿವಿ ಕ್ಷೇತ್ರದಲ್ಲಿ ಸಂಚಲನ
ಉದ್ಯಮ, ದಾನಶೀಲತೆ, ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಾಯಕತ್ವ ವಹಿಕೊಂಡ ಮಹಿಳೆಯರಿಗೆ ಗೌರವ ಸಲ್ಲಿಸಲು ಪ್ರತೀ ವರ್ಷ ಫೋರ್ಬ್ಸ್ ಮ್ಯಾಗಜಿನ್ ಈ ಪಟ್ಟಿಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟೀನ್ ಲಗಾರ್ಡೆ ಮತ್ತು ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಮರ್ಕೆಲ್, ಸತತ 9 ವರ್ಷಗಳಿಂದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತಾ ಬಂದಿದ್ದಾರೆ.
ವಿಶೇಷವೆಂದರೆ, ಜಾಗತಿಕ ತಾಪಮಾನದ ವಿರುದ್ಧ ವಿಶ್ವ ನಾಯಕರ ವಿರುದ್ಧವೇ ಗುಡುಗಿದ್ದ 16ರ ಹರೆಯದ ಪರಿಸರ ಹೋರಾಟಗಾರ್ತಿ ಸ್ವೀಡನ್‌ನ ಗ್ರೆಟಾ ಥನ್‌ಬರ್ಗ್ ಸಹ ವಿಶ್ವದ ಪ್ರಭಾವೀ ಮಹಿಳೆಯರಲ್ಲಿ ಒಬ್ಬರೆನಿಸಿದ್ದಾರೆ.
ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: