ಕೆಜಿಎಫ್ 2 ಚಿತ್ರತಂಡ ಯಶ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದೆ. ಇದೇ ಡಿಸಂಬರ್ 21 ರಂದು ಫಸ್ಟ್ ಲುಕ್ ರಿಲೀಸ್ ಆಗಲಿದೆ. 

ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಸ್ಯಾಂಡಲ್‌ವುಡ್‌ನಲ್ಲಿ ಐತಿಹಾಸಿಕ ದಾಖಲೆಯನ್ನೇ ಬರೆದಿದೆ. ಯಶ್ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತಾದರು. ಇದೀಗ ಈ ಚಿತ್ರದ ಚಾಪ್ಟರ್ - 2 ತೆರೆಗೆ ಬರುತ್ತಿದೆ. ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. 

Add Asianetnews Kannada as a Preferred SourcegooglePreferred

'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

ಈಗ ಕೆಜಿಎಫ್ ಚಾಪ್ಟರ್- 2 ಶೂಟಿಂಗ್ ಶುರುವಾಗಿದೆ. ಈಗಾಗಲೇ ಸಂಜಯ್ ದತ್, ರವೀನಾ ಟಂಡನ್ ಕೂಡಾ ಭಾಗಿಯಾಗುತ್ತಿದ್ದಾರೆ. ಯಶ್ ಪಾತ್ರದ ಬಗ್ಗೆ ಸಹಜ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ -2 ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಕೆಜಿಎಫ್- 2 ಚಿತ್ರದ ಫಸ್ಟ್ ಲುಕ್ ಡಿಸಂಬರ್ 21 ರ ಸಂಜೆ 5.45 ಕ್ಕೆ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಭಾಷೆಯಲ್ಲಿ ರಿಲೀಸ್ ಆಗಲಿದೆ. 

Scroll to load tweet…

ಕೆಜಿಎಫ್ ತಂಡ ಡಿಸಂಬರ್ 21 ರಂದೇ ಫಸ್ಟ್ ಲುಕ್ ರಿಲೀಸ್ ಮಾಡಲು ಕಾರಣವಿದೆ. ಕೆಜಿಎಫ್ ಚಾಪ್ಟರ್ 1 ಇದೇ ದಿನ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಅದೇ ರೀತಿ ಇದೂ ಕೂಡಾ ಸಕ್ಸಸ್ ಆಗಲಿ ಎಂದು ಡಿಸಂಬರ್ 21 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.