Asianet Suvarna News Asianet Suvarna News

ಕಾಸರಗೋಡಿನ ಕನ್ನಡಿಗರ ಸಮಸ್ಯೆಗೆ 'ಶಾಲೆ'ಯಿಂದ ಪರಿಹಾರ?

ಕನ್ನಡದ ಬಗ್ಗೆ ಅಥವಾ ಕರ್ನಾಟಕದ ಬಗ್ಗೆ ಹೋರಾಟಗಳು ನಡೆಯುವುದು ಒಂದೆಲ್ಲಾ ಒಂದು ಮಹತ್ವದ ಘಟನೆಗಳು ನಡೆದಾಗಲೇ. ಅದು ಗೋಕಾಕ್ ಚಳವಳಿ ಇರಬಹುದು, ಕಾವೇರಿ ನೀರಿಗಾಗಿ ನಡೆದ ಹೋರಾಟ ಇರಬಹುದು ಅಥವಾ ಮಹಾದಾಯಿ ಕಳಸಾ ಬಂಡೂರಿ ಹೋರಾಟವೇ ಇರಬಹುದು.  ಆದರೆ ಕನ್ನಡ ಸಿನಿಮಾ ಒಂದು ಕನ್ನಡದ ಹೋರಾಟಕ್ಕೆ ವೇದಿಕೆ ನಿರ್ಮಾಣ ಮಾಡುತ್ತಿದೆ.

Kasaragodu Kannadigas will get Solution from Kannada Movie Sarkari Hi Pra Shale Kasaragodu
Author
Bengaluru, First Published Aug 29, 2018, 8:47 PM IST

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದು ಕಡೆ ಚಿತ್ರ ಜನರಿಗೆ ಮನರಂಜನೆ ನೀಡುತ್ತಿದ್ದರೆ ಇನ್ನೊಂದು ಕಡೆ ಕನ್ನಡ ಜಾಗೃತಿ ಮೂಡಿಸುತ್ತಿದೆ. ಹೌದು ಚಿತ್ರ ನೋಡಿ ಹೊರಬಂದ ಕನ್ನಡಿಗ ಒಮ್ಮೆ ಮಾತೃಭಾಷೆಯ ಇಂದಿನ ಸ್ಥಿತಿಯನ್ನು ನೆನೆಯುತ್ತಾನೆ. ಗಡಿನಾಡಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮನಸ್ಸಿನಲ್ಲಿಯೇ ಪ್ರಶ್ನೆ ಮಾಡಿಕೊಳ್ಳುತ್ತಾನೆ.

ಕನ್ನಡಿಗರ ಪ್ರತಿಭಟನೆಗೆ ಮಣಿದು ರಜೆ ಮೇಲೆ ತೆರಳಿದ ಮಲಯಾಳಿ ಶಿಕ್ಷಕ

ಕೇರಳ ಗಡಿನಾಡು ಕಾಸರಗೋಡಿನ ಮಲಯಾಳಿ ನೆಲದಲ್ಲಿ ಕನ್ನಡ ಭಾಷೆಯನ್ನು ಮೇಲಿನ ದಬ್ಬಾಳಿಕೆಯನ್ನು ತೆರೆಯ ಮೇಲೆ ತಂದಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಕನ್ನಡ ಚಿತ್ರಕ್ಕೆ ಕಾಸರಗೋಡಿನಲ್ಲಿ ಭರ್ಜರಿ ಬೆಂಬಲವೂ ಸಿಗ್ತಿದೆ. ಅಲ್ಲಿನ ಥಿಯೇಟರ್ ಗಳಲ್ಲಿ ಸಿನಿಮಾ ಮುನ್ನುಗ್ಗುತ್ತಿದೆ.

ಇನ್ನೊಂದು ಕಡೆ ಕಾಸರಗೋಡಿನ ಮಂಗಲ್ಪಾಡಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಬುಧವಾರ ಪಾಠಕ್ಕೆ ಆಗಮಿಸಿದ ಮಲಯಾಳಿ ಶಿಕ್ಷಕ ಕನ್ನಡಿಗರ ಪ್ರತಿಭಟನೆಯ ಫಲವಾಗಿ ದೀರ್ಘಕಾಲ ರಜೆ ಮೇಲೆ ತೆರಳುವಂತಾಗಿದೆ. ಇದಕ್ಕೂ ಸಹ ಸಿನಿಮಾ ಒಂದು ರೀತಿಯ ಪ್ರೇರಣೆ ನೀಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ರಿಷಬ್ ಶೆಟ್ಟಿ ನಿರ್ದೇಶನ, ಅನಂತ್ ನಾಗ್ ಅಭಿನಯಕ್ಕೆ ಮಾತ್ರ ಚಿತ್ರ ಸೀಮಿತವಾಗಿಲ್ಲ. ಚಿತ್ರದ ಬಗ್ಗೆ, ಚಿತ್ರ ನೋಡಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಯೊಬ್ಬರೂ ಬರೆದುಕೊಳ್ಳುತ್ತಿದ್ದಾರೆ.  ವಿವಿಧ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕುವ ಕಾಸರಗೋಡಿನ ನಮ್ಮದೆ ಕನ್ನಡಿಗರ ಬಗ್ಗೆ, ಅವರ ಸಮಸ್ಯೆ ನಿವಾರಣೆ ಬಗ್ಗೆ ಈ ಸಿನಿಮಾ ಪರಿಹಾರ ಸೂತ್ರವೊಂದನ್ನು ತರಲು ಕಾರಣವಾಗಬಹುದೆ। ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬಹುದೆ?

ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

"

 

Follow Us:
Download App:
  • android
  • ios