ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

ಎಚ್.ಡಿ.ಕುಮಾರಸ್ವಾಮಿ ಬಜೆಟ್ ನಂತರ ಹುಟ್ಟಿಕೊಂಡ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ರಾಮನಗರದಲ್ಲಿ ಕುಮಾರಸ್ವಾಮಿ ಕೊಟ್ಟ ಹೇಳಿಕೆಯಿಂದ ಭೂಗಿಲೆದ್ದು ಬಿಟ್ಟಿದೆ. ಮಂಗಳವಾರ ಪ್ರತ್ಯೇಕ ರಾಜ್ಯ ಬಾವುಟವನ್ನು ಹಾರಿಸಿ ಪ್ರತ್ಯೇಕತೆ ಕೂಗಿಗೆ ಮತ್ತಷ್ಟು ಬಲ ತುಂಬುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ. ಒಂದು ಕಡೆ ರಾಜಕೀಯ ಕೆಸರೆರೆಚಾಟ ಇನ್ನೊಂದು ಕಡೆ ಒಂದೆ ಪಕ್ಷದವರ ಇಬ್ಬಗೆಯ ಹೇಳಿಕೆಗಳು... ಒಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಎನ್ನುವ ಬದಲು ಇದೊಂದು ಪ್ರಹಸನದಂತೆ ತೋರುತ್ತಿದೆ. ಹಾಗಾದರೆ ಇದರ ಸಾಧ್ಯಾಸಾಧ್ಯತೆ ಏನು?

 

separate statehood for North Karnataka Why and Why not

ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದ್ದರೆ ರಾಜಕೀಯ ನಾಯಕರು, ವಿವಿಧ ಪಕ್ಷದ ಮುಖಂಡರು ತಮಗೆ ತೋಚಿದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಬಿಜೆಪಿ ನಾಯಕರಕಲ್ಲೂ ಗೊಂದಲವಿದೆ. ಜೆಡಿಎಸ್ ಮುಖಂಡರು ಮಾತನಾಡುವ ಪ್ರಶ್ನೆಯೇ ಇಲ್ಲ.

ಇನ್ನುಉತ್ತರ ಕರ್ನಾಟಕದ ನಾಯಕರು ಪಕ್ಷತೀತವಾಗಿ ಮಾತನಾಡಲು ಒಮ್ಮೆ ಮುಂದಾದರೂ ನಂತರ ಹಿರಿಯ ನಾಯಕರ ಅಥವಾ ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು ಸುಮ್ಮನಾಗುತ್ತಿದ್ದಾರೆ. ಹೇಳಿಕೆಗಳಮನ್ನೇ ತಿರುಚಿ ಶ್ರೀರಾಮಲು ತರಹ ಯು ಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಅಂದೆ ಮೊದಲಿಗೆ ಜನರ ಕಣ್ಣಲ್ಲಿ ಹೀರೋ ಆಮೇಲೆ ಪಕ್ಷದ ನಿಷ್ಠಾವಂತ! ಹಾಗಾದರೆ ಅಷ್ಟಕ್ಕೂ ಪ್ರತ್ಯೇಕ ರಾಜ್ಯದ ಅಗತ್ಯ ಇದೆಯೇ? ಈ ಬಗ್ಗೆ ಫೇಸ್ ಬುಕ್ ಮತ್ತು ಟ್ವಿಟರ್ ಸೇರಿದಂತೆ ಸಾಮಾಜಿಕ ತಾಣದಲ್ಲಿಯೂ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ
ಬಂದ್, ಹೋರಾಟ, ಅಖಂಡ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ ಎಂಬ ಮಾತುಗಳು ಎಲ್ಲವನ್ನು ಬದಿಗಿಟ್ಟು ಒಂದು ವಿಶ್ಲೇಷಣೆ ಮಾಡಲೇಬೇಕು. ಉತ್ತರ ಕರ್ನಾಟಕ್ಕೆ ಬಜೆಟ್ ನಲ್ಲಿ ಅನ್ಯಾಯವಾಗಿದೆ ಎನ್ನುವುದು ಬಹುದೊಡ್ಡ ಆರೋಪ. ಹೌದು ಈ ಬಾರಿಯ ಬಜೆಟ್ ನಲ್ಲಿ ಅಂಥಹ ವಿಶೇಷ ಕೊಡುಗೆ ನೀಡಿಲ್ಲದೆ ಇರಬಹುದು. ಆದರೆ ಇಷ್ಟು ವರ್ಷದಿಂದ ನೀಡಿಕೊಂಡು ಬಂದ ವಿಶೇಷ ಸೌಲಭ್ಯಗಳಿಗೆ ಅರ್ಥ ಇಲ್ಲವೆ?

ಅಖಂಡ ಕರ್ನಾಟಕ ಹೋರಾಟದಲ್ಲಿ ಉತ್ತರ ಕರ್ನಾಟಕದವರೆ ಮೊದಲಿಗರು
ಅಖಂಡ ಕರ್ನಾಟಕ ಇತಿಹಾಸವನ್ನು ನೋಡಿದರೆ ಕರ್ನಾಟಕ ಏಕೀಕರಣದಲ್ಲಿ ಉತ್ತರ ಕರ್ನಾಟಕದ ನಾಯಕರೇ ಬಹಳಷ್ಟು ಜನರಿದ್ದಾರೆ. ಹೈದ್ರಾಬಾದ್ ಮತ್ತು ಮುಂಬೈ ಪ್ರಾಂತ್ಯಗಳಿಂದ ಅನೇಕ ಪ್ರದೇಶ ಬಿಡಿಸಿಕೊಳ್ಳಲು ಜೀವನವನ್ನೇ ಪಣವಾಗಿಟ್ಟವರಿದ್ದಾರೆ. ಪ್ರತ್ಯೇಕ ರಾಜ್ಯ ಎಂಬ ಈ ಒಂದು ಕಲ್ಪನೆಯೇ ಅವರೆಲ್ಲರ ತ್ಯಾಗಕ್ಕೆ ಯಾವ ಅರ್ಥ ನೀಡಬಹುದು?

ಆದಾಯದಲ್ಲಿ ದಕ್ಷಿಣ ಕರ್ನಾಟಕ ಮುಂದೆ
ಕರ್ನಾಟಕದ ಒಟ್ಟು ಆದಾಯದಲ್ಲಿ ದಕ್ಷಿಣ ಕರ್ನಾಟಕದ ಪಾಲು ದೊಡ್ಡದು. ಇನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಎಂದು ಆಡಳಿತ ವಿಭಾಗ ಲೆಕ್ಕ ಹಾಕಿದರೂ ರಾಜಧಾನಿ ಬೆಂಗಳೂರು ವಿಭಾಗದ ಕೊಡುಗೆಯೇ ದೊಡ್ಡದು. ಇದಕ್ಕೆ ಐತಿಹಾಸಿಕ, ರಾಜಕೀಯ ಮತ್ತು ಪ್ರಾದೇಶಿಕ ಕಾರಣಗಳು ಇವೆ. ಪಕ್ಕದ ಆಂಧ್ರ ಪ್ರದೇಶ ವಿಭಜನೆಯಾದೆ ಎಂಬ ಉದಾಹರಣೆ ನೀಡಬಹುದಾದರೆ ಅಲ್ಲಿ ಹೊಸ ರಾಜಧಾನಿ ನಿರ್ಮಾಣಕ್ಕೆ ಅಲ್ಲಿನ ಸರಕಾರ ಇನ್ನು ಹೋರಾಟ ಮಾಡುತ್ತಿದೆ.
ಮತ್ತೆ U-ಟರ್ನ್ ಹೊಡೆದ ಶ್ರೀರಾಮುಲು!

ಪ್ರತ್ಯೇಕತೆ ಬಿಟ್ಟು ಅಭಿವೃದ್ಧಿ ಮಾಡಿ
ಎಲ್ಲ ರಾಜಕೀಯ ನಾಯಕರು, ಉತ್ತರ ಕರ್ನಾಟಕ ನಾಯಕರು ಪ್ರತ್ಯೇಕ ರಾಜ್ಯದ ಕುರಿತು ಮಾತನಾಡುವ ಬದಲು ನಿಜಕ್ಕೂ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿದರೆ ಅರ್ಧ ಸಮಸ್ಯೆಯೇ ಮುಗಿದು ಹೋಗುತ್ತದೆ. ಮಹಾದಾಯಿ ಮತ್ತು ಕಳಸಾ ಬಂಡೂರಿ ವಿಚಾರದಲ್ಲಿ ಸ್ಪಷ್ಟತೆ, ರಾಯಚೂರು ಥರ್ಮಲ್ ಘಟಕಕ್ಕೆ ಭೂಮಿ ನೀಡಿದವರಿಗೆ ಪರಿಹಾರ, ಕೆರೆಗಳಿಗೆ ನೀರು ತುಂಬಿಸಲು ಹೊಸ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯಪಡೆದುಕೊಂಡರೆ ಯಾವ ಲಾಭವೂ ಇಲ್ಲ!

ಪ್ರತ್ಯೇಕ ರಾಜ್ಯಕ್ಕಾಗಿ ಆಗಸ್ಟ್ 2 ರಂದು ಬಂದ್

ಎರಡನೇ ದರ್ಜೆಯ ನಗರಗಳನ್ನು ಅಭಿವೃದ್ಧಿ ಮಾಡಿ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದುದಷ್ಟೆ ಬಂತು. ಬೆಳಗಾವಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡದ ಕಡೆಗೆ ಹೊಸ ಕಂಪನಿಗಳನ್ನು ಕೊಂಡೊಯ್ಯುವ ಕೆಲಸ ಯಾರೂ ಮಾಡಿಲ್ಲ. ಆ ಬಗ್ಗೆ ಮಾತನಾಡುವ ಚಿಂತನೆಯೂ ಇವರಿಗೆ ಇಲ್ಲ

ಪುಕ್ಕಟೆ ಮನರಂಜನೆಯೋ? ನಿಜ ಕಾಳಜಿಯೋ
ಬೇಕಾಗಿರುವುದು ಪ್ರತ್ಯೇಕ ರಾಜ್ಯವಲ್ಲ. ಪ್ರತ್ಯೇಕ ರಾಜ್ಯದಿಂದ ಜನರ ಜೀವನದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಸಮಗ್ರ ಅಭಿವೃದ್ಧಿಯ ಚಿಂತನೆ ಎಲ್ಲ ಪಕ್ಷದ ನಾಯಕರಿಗೆ, ಗುಂಪಾಗಿ ಒಡೆದು ಹೋಗಿರುವ ರೈತ ಮುಖಂಡರಿಗೆ ಬಂದ ದಿನವೇ ಉತ್ತರ ಕರ್ನಾಟಕದ ಬದಲಾವಣೆಯ ನಾಂದಿಯ ದಿನವಾಗುತ್ತದೆ. ಇಲ್ಲವಾದಲ್ಲಿ ಅದೇ ಮಾಧ್ಯಮದ ಮುಂದೆ ಹೇಳಿಕೆಗಳು, ಪುಕ್ಕಟೆ ಪ್ರಚಾರ... ಜನ ಇದನ್ನು ಮನರಂಜನೇ ಅಂದುಕೊಳ್ಳಬೇಕೋ ಅಥವಾ ನಿಜಕ್ಕೂ ನಮ್ಮ ಒಳಿತಿಗೆ ಇವರು ಹೋರಾಟ ಮಾಡುತ್ತಿದ್ದಾರೆ ಅಂದುಕೊಳ್ಳಬೇಕೋ? ನಿಮ್ಮ ವಿವೇಚನೆಗೆ ಬಿಟ್ಟಿದ್ದು.

ಆಗಸ್ಟ್ 2 ರಂದು ಬಂದ್ ಆಗಲಿರುವ 13 ಜಿಲ್ಲೆಗಳು ಯಾವುವು?
ಆಗಸ್ಟ್ 2ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ಗದಗ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಕೊಪ್ಪಳ. ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆ ಬಂದ್ ಗೆ ಹೋರಾಟಗಾರರು ಕರೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios