ಕಾಂಗ್ರೆಸ್‌ಗೆ ಬಿಗ್ ಶಾಕ್, ಪುದುಚೇರಿಯಲ್ಲಿ ಸರ್ಕಾರ ಪತನ!...

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಶಾಕ್ ಲಭಿಸಿದೆ. ಇಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸೋಮವಾರ ಪತನಗೊಂಡಿದೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲಗೊಂಡಿದ್ದಾರೆ.

ನೆಟ್ವರ್ಕ್‌ಗಾಗಿ 50 ಅಡಿ ಎತ್ತರದ ತೊಟ್ಟಿಲು ಏರಿದ ಸಚಿವ!...

ಫೋನ್‌ ನೆಟ್‌ವರ್ಕ್ಗಾಗಿ ಜಾತ್ರೆಯಲ್ಲಿ ಇಡಲಾಗಿದ್ದ 50 ಅಡಿ ಎತ್ತರದ ತೂಗುಯ್ಯಾಲೆ (ತೊಟ್ಟಿಲು) ಮೊರೆ ಹೋದ ಮಧ್ಯಪ್ರದೇಶದ ಸಚಿವ ಬ್ರಜೇಂದ್ರ ಸಿಂಗ್‌ ಯಾದವ್‌ ಸದ್ಯ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ.

ಅಹಮ್ಮದಾಬಾದ್ ಟೆಸ್ಟ್: ದಾಖಲೆ ಬರೆಯಲು ಸಜ್ಜಾದ ಅಶ್ವಿನ್, ಇಶಾಂತ್!...

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಇದೀಗ ಈ ಮಹತ್ವದ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಕೆಜಿಎಫ್‌2: ತೆಲುಗು ಹಕ್ಕು 65 ಕೋಟಿ ರು.ಗೆ ಮಾರಾಟ...

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ‘ಕೆಜಿಎಫ್‌ 2’ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಯ ಪೂರ್ವ ಬ್ಯುಸಿನೆಸ್‌ಗೆ ಮುಂದಾಗಿದ್ದು, ಅದರ ಮೊದಲ ಭಾಗವೆಂಬಂತೆ ತೆಲುಗಿನಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕುಗಳನ್ನು 65 ಕೋಟಿ ರು.ಗೆ ಮಾರಾಟ ಮಾಡಲಾಗಿದೆ.

ಕನ್ನಡತಿ ವರೂಧಿನಿ ವಿಲನ್ ಆಗ್ತಿದ್ದಾಳಾ? ತನ್ನ ಹೀರೋನೇ ಸಾಯಿಸ್ತಾಳಾ?...

ಕನ್ನಡತಿ ಸೀರಿಯಲ್ ನಲ್ಲಿ ಇದೀಗ ಹೊಸ ಟ್ವಿಸ್ಟ್. ವರೂಧಿನಿ ತನ್ನ ಹೀರೋನೇ ಮುಗಿಸೋ ಪ್ಲಾನ್‌ನಲ್ಲಿದ್ದಾಳೆ.

ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!...

ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಡಿಜಿಲಾಕರ್ ಆ್ಯಪ್ ಹಲವು ರೀತಿಯಲ್ಲಿ ನೆರವು ಒದಗಿಸುತ್ತದೆ. ನಿಮ್ಮೆಲ್ಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸೇವ್ ಮಾಡಿಟ್ಟುಕೊಳ್ಳಲು ಅಧಿಕೃತೆಯನ್ನು ಒದಗಿಸುತ್ತದೆ. ಇದೀಗ ನೀವು ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡಿದ್ದರೆ ಡಿಜಿಲಾಕರ್‌ನಲ್ಲಿರುವ ನಿಮ್ಮ ಅಧಿಕೃತ ದಾಖಲೆಗಳ ಲಿಂಕ್ ಒದಗಿಸಬಹುದಾಗಿದೆ. ಅಂದರೆ, ಪಾಸ್‌ಪೋರ್ಟ್ ಸೇವೆಗಳಿಗೆ ಈ ಡಿಜಿಲಾಕರ್ ಸಪೋರ್ಟ್ ಮಾಡುತ್ತದೆ.

ಹಿಂಭಾಗದ ಸ್ಪೇರ್ ವೀಲ್ ವಿನ್ಯಾಸ ಬದಲು, ಹೊಸ ಅವತಾರದಲ್ಲಿ ಫೋರ್ಡ್ ಇಕೋಸ್ಪೋರ್ಟ್!...

ಫೋರ್ಡ್ ಇಕೋಸ್ಪೋರ್ಟ್ SUV ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಅಂದ ಹೆಚ್ಚಿಸಿದ್ದೆ ಹಿಂಭಾಗದ ಸ್ಪೇರ್ ವೀಲ್, ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಇರುವುದಿಲ್ಲ. ಇನ್ನು ಬೆಲೆ ಕೂಡ ಅಗ್ಗವಾಗಿದೆ. 

ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!...

ಇತ್ತೀಚೆಗೆ ನಡೆದ ಗೋ ಎಲೆಕ್ಟ್ರಿಕ್ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ತೈಲೋತ್ಪನಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ವಿದ್ಯುತ್ ಚಾಲಿತ ವಾಹನಗಳು ಪರ್ಯಾಯವಾಗಿವೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯ ಗಳಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ದೃಶ್ಯಂ ಸಿನಿಮಾ ತರಹದ್ದೇ ರಿಯಲ್ ಸ್ಟೋರಿ.. ಹತ್ಯೆ ಮಾಡಿದ್ದವ ಸಿಕ್ಕಿಬಿದ್ದಿದ್ದೆ ರೋಚಕ...

ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿನೋಡಿದರೂ ಈಗ ದೃಶ್ಯಂ ಸಿನಿಮಾದ್ದೇ ಸುದ್ದಿ.   ಸಿನಿಮಾದ ರೀತಿಯದ್ದೇ ಕೊಲೆ ರಹಸ್ಯವೊಂದನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ. ದಂತ ವೈದ್ಯರೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಾವುದಾದರೂ ಪ್ರದೇಶದಲ್ಲಿ 5 ಮಂದಿಗೆ ಪಾಸಿಟಿವ್ ಬಂದರೆ ಕಂಟೈನ್ಮೆಂಟ್ ಝೋನ್: ಸುಧಾಕರ್...

'ಯಾವುದಾದರೂ ಪ್ರದೇಶದಲ್ಲಿ 5 ಮಂದಿಗೆ ಪಾಸಿಟಿವ್ ಬಂದರೆ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಮಾಡುತ್ತೇವೆ. ಈಗಿರುವ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಕೊರೊನಾ ತಡೆಗೆ ಸಹಕರಿಸಿ' ಎಂದು ಸುಧಾಕರ್ ಹೇಳಿದ್ದಾರೆ.