ಭೋಪಾಲ್ (ಫೆ.  22)  ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿನೋಡಿದರೂ ಈಗ ದೃಶ್ಯಂ ಸಿನಿಮಾದ್ದೇ ಸುದ್ದಿ.   ಸಿನಿಮಾದ ರೀತಿಯದ್ದೇ ಕೊಲೆ ರಹಸ್ಯವೊಂದನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ. ದಂತ ವೈದ್ಯರೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಿಳೆಯೊಬ್ಬಳನ್ನು ಹತ್ಯೆ ಮಾಡಿ ಖಾಲಿ ಜಾಗವೊಂದರಲ್ಲಿ ಸುಟ್ಟು ಹಾಕಲಾಗಿತ್ತು.  ಆರೋಪಿ ಅಶುತೋಷ್ ತ್ರಿಪಾಠಿಯನ್ನು ಪೊಲೀಸರು ಸೆರೆ ಹಿಡಿದ ಕತೆಯೇ  ರೋಚಕ .  ವಿಭಾ ಕೇವಾತ್ ಎಂಬ  24  ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ್ದ.

ಹತ್ಯೆಯಾದ ಮಹಿಳೆ ಕೊಲೆ ಆರೋಪಿ ವೈದ್ಯನ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದಳು.  ಡಿಸೆಂಬರ್ 14 ರಂದು ಮಹಿಳೆ ಮನೆಗೆ ಮರಳಲಿಲ್ಲ. ಆಕೆಯ ಪೋಷಕರು  ವೈದ್ಯನ ಬಳಿ ಈ ಬಗ್ಗೆ ಕೇಳಿದಾಗ ವಿಭಾ ಯಾವುದೋ  ಕಾರಣಕ್ಕೆ ನೊಂದುಕೊಂಡಿದ್ದು ಒಬ್ಬಳೆ ವಾಸಿಸುತ್ತಿದ್ದಾಳೆ ನಂಬಿಸಿದ್ದ.

ಪತ್ನಿ ಗಂಟಲು ಸೀಳಿ ಎಸ್ಕೇಪ್ ಆಗುವಾಗ ವೈದ್ಯನ ಕಾರು ಅಪಘಾತ

ಆದರೆ ತಿಂಗಳು ಕಳೆದರೂ ಯಾವುದೇ  ಮಗಳ ಬಗ್ಗೆ ಫೆಬ್ರವರಿ 1 ರಂದು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.  ತನಿಖೆ ಆರಂಭಿಸಿದ ಪೊಲೀಸರು ತ್ರಿಪಾಠಿಯನ್ನು ಪ್ರಶ್ನೆ ಮಾಡಿದರೆ ತನಗೆ ಏನೂ ಗೊತ್ತಿಲ್ಲ ಎಂದಿದ್ದಾನೆ.

ಪೋನ್ ಇದ್ದ ಲೋಕೇಶನ್ ಪತ್ತೆ ಮಾಡಿದ ಪೊಲೀಸರಿಗೆ ಒಂದೊಂದೆ ಮಾಹಿತಿ ಗೊತ್ತಾಗಿದೆ.  ಡಿಸೆಂಬರ್ 14 ರಂದು  ವಿಭಾ ಮತ್ತು ವೈದ್ಯನ ಪೋನ್ ಒಂದೇ  ಲೊಕೇಶನ್ ನಲ್ಲಿ ಇದ್ದಿದ್ದು ಗೊತ್ತಾಗಿದೆ.

ಪೊಲೀಸರು ಬಿಸಿ  ಮುಟ್ಟಿಸಿದಾಗ ವೈದ್ಯ ಎಲ್ಲ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ತಾನು ವಿಭಾಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೆ.  ಮದುವೆಯಾಗುವಂತೆ ಬೆನ್ನು ಬಿದ್ದಾಗ ಹತ್ಯೆ ಮಾಡಿದೆ. ತನಿಖೆಯ ದಿಕ್ಕು ತಪ್ಪಿಸಲು ವಿಭಾಳ ಶವದೊಂದಿಗೆ ಒಂದು ನಾಯಿಯನ್ನು ಸುಟ್ಟುಹಾಕಿದ್ದೆ ಎಂದು ಹೇಳಿದ್ದಾನೆ.