ಕನ್ನಡತಿ ಸೀರಿಯಲ್‌ ಡೇ ಒನ್‌ನಿಂದಲೂ ಸಖತ್ ಇಂಟೆರೆಸ್ಟಿಂಗ್‌ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಹೀರೋ ಹರ್ಷನಿಗಾಗಿ ಭುವಿ ಶುದ್ಧ ಸ್ನೇಹ, ಪ್ರೀತಿ, ಹರ್ಷನಿಗೂ ಭುವಿಯೆಡೆಗೆ ಅದೇ ಪ್ರೇಮ. ವರೂಧಿನಿಯ ಪ್ರೀತಿ ಮಾತ್ರ ಹಾಗಲ್ಲ. ಅದು ಬಹಳ ಬಹಳ ತೀವ್ರ, ಎಷ್ಟರಮಟ್ಟಿಗೆ ಅಂದರೆ ತನ್ನ ಹೀರೋನನ್ನೇ ಸಾಯಿಸೋ ಮಟ್ಟಿಗೆ. ನಮ್ಮ ಸಮಾಜದಲ್ಲೇ ಇಂಥಾ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿರುತ್ತವಲ್ಲಾ. ತನಗೆ ಸಿಗದ ಪ್ರೀತಿ ಯಾರಿಗೂ ಸಿಗಲೇ ಬಾರದು ಅಂತ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ನಡು ರಸ್ತೆಯಲ್ಲೇ ಇರಿಯುತ್ತಾನೆ. ಮತ್ತೊಬ್ಬ ತನ್ನ ಹುಡುಗಿಯ ಮೇಲೆ ಆಸಿಡ್ ದಾಳಿ ನಡೆಸುತ್ತಾನೆ. ಇನ್ನೊಬ್ಬ ಹೆಣ್ಣುಮಗಳು ತನ್ನ ಪ್ರಿಯತಮ ರಿಜೆಕ್ಟ್ ಮಾಡಿದ್ದಕ್ಕೆ ಆತನನ್ನು ಕೊಂದೇ ಬಿಡುತ್ತಾಳೆ. ಇಲ್ಲಿ ಬರುವ ವರೂಧಿನಿಯೂ ಕೊಂಚ ಅಂಥ ಮನಸ್ಥಿತಿ ಇರುವವಳ ಹಾಗೆ ಕಾಣುತ್ತಾಳೆ. ಅವಳಿಗೆ ಮಾನಸಿಕ ಸಮಸ್ಯೆ ಮೊದಲಿಂದಲೂ ಇದೆ. ಭುವಿ ಸದಾ ತನ್ನ ಗೆಳೆತಿಯ ಸಪೋರ್ಟ್ ಗಿರುತ್ತಾಳೆ. ಹಾಗಂತ ವರೂಧಿನಿ ಕೆಟ್ಟವಳಾ ಅಂದರೆ ಖಂಡಿತಾ ಅಲ್ಲ ಅನ್ನೋ ಉತ್ತರವೇ ಬರುತ್ತೆ. ಆದರೆ ಅವಳು ಪರಿಸ್ಥಿತಿಯ ಕೈಗೊಂಬೆ, ಮನಸ್ಥಿತಿಯ ಕೈಗೊಂಬೆಯಾಗಿ ಹೀಗಾಗಿದ್ದಾಳೆ ಅಷ್ಟೇ. ಸದ್ಯಕ್ಕೀಗ ವರೂಧಿನಿ ತನ್ನ ಹೀರೋ ಹರ್ಷ ಹಾಗೂ ಸಾನಿಯಾ ಮೇಲೆ ಏಕಕಾಲಕ್ಕೆ ಸೇಡು ತೀರಿಸಲು ಹೊರಟಿದ್ದಾಳೆ. ಕಾರಣ ಏನಿರಬಹುದು ಊಹಿಸಿ. 

ಮಾಲ್ಡೀವ್ಸ್‌ನಲ್ಲಿ ಮಧುಚಂದ್ರದ ಗುಂಗಿನಲ್ಲಿರುವ ಕೃಷ್ಣ ಮಿಲನಾ ಫೋಟೋ ನೋಡಿ! ...

ಹರ್ಷ ಅಂದರೆ ವರೂಧಿನಿಗೆ ಬಹಳ ಪ್ರೀತಿ. ಆದರೆ ತಾನು ಇಷ್ಟಪಟ್ಟದ್ದೆಲ್ಲ ತನಗೆ ಸಿಗಲೇ ಬೇಕು ಅನ್ನುವ ಮನಸ್ಥಿತಿ. ಇಂದೊಂಥರಾ ಮಾನಸಿಕ ತೀವ್ರತೆ, ಉದ್ವಿಗ್ನತೆ. ಆದರೆ ಹರ್ಷನ ಮನಸ್ಥಿತಿ ಏನು ಅನ್ನುವುದನ್ನು ಅವಳು ಅರಿಯುವ ಪ್ರಯತ್ನ ಮಾಡಿಲ್ಲ. ಅವನೂ ತನ್ನನ್ನು ಇಷ್ಟ ಪಡುತ್ತಾನಾ ಅನ್ನುವುದನ್ನು ತಿಳಿಯುವ ಗೋಜಿಗೋ ಹೋಗಿಲ್ಲ. ಒಟ್ಟಾರೆ, ತಾನು ಬಯಸಿದ್ದೆಲ್ಲ ಸಿಗಬೇಕು, ಅದರಂತೆ ತಾನು ಬಹಳ ಇಷ್ಟಪಡುವ ಹೀರೋ ಸಹ ತನ್ನನ್ನು ಇಷ್ಟಪಡಬೇಕು ಅಂದುಕೊಂಡಿದ್ದಾಳೆ. ಆದರೆ ಪರಿಸ್ಥಿತಿ ಬೇರೆ ಇದೆ.
 ಹರ್ಷ ವ್ಯಾಲೆಂಟೇನ್ ಡೇ ದಿನ ಭುವಿಯ ಜೊತೆ ಸುತ್ತಾಟಕ್ಕೆ ಹೊರಟಿದ್ದಾನೆ. ಇಬ್ಬರೂ ಪ್ರೇಮಿಗಳ ದಿನದಂದು ರೆಸ್ಟೊರೆಂಟ್ ಹೊಕ್ಕಿದ್ದಾರೆ. ಆದರೆ ಪ್ರೀತಿ ಹಂಚಿಕೊಳ್ಳೋದು ಸಾಧ್ಯವಾಗಿಲ್ಲ. ಅದು ಪರಸ್ಪರ ಹೃದಯಕ್ಕೆ ಗೊತ್ತಾದರೂ ಮಾತಾಗಿ ಆಚೆ ಬಂದಿಲ್ಲ. ಅಲ್ಲಿ ಅವರಿಬ್ಬರ ಹೆಸರಿನೊಂದಿಗೆ ಬರುವ ಕೇಕ್ ಕಂಡು ಭುವಿಗೆ ಮುಜುಗರ. ಆದರೆ ಹರ್ಷ ಖುಷಿಯಲ್ಲಿದ್ದಾನೆ. 

ಪ್ಲಾಸ್ಟಿಕ್ ಸರ್ಜರಿಯಿಂದ ಇವರ ಕೆರಿಯರ್ ಢಮಾರ್! ...

ಈ ನಡುವೆ ವರೂಧಿನಿ ಹರ್ಷನನ್ನೇ ಕೊಲೆ ಮಾಡೋದಾಗಿ ಭುವಿಯ ಬಳಿ ಬಾಯಿಬಿಟ್ಟಿದ್ದಾಳೆ. ಕಾರಣ ಏನು ಅಂತ ತಿಳಿದು ಭುವಿಗೂ ದಂಗಾಗಿದ್ದಾಳೆ. ಅದು ಮತ್ತೇನೂ ಅಲ್ಲ, ಹರ್ಷನನ್ನು ಆಕೆ ಕೊಲೆ ಮಾಡಲು ಕಾರಣ ಆತ ಪ್ರೇಮಿಗಳ ದಿನದಂದು ವರೂಧಿನಿಯನ್ನು ಭೇಟಿ ಮಾಡಿಲ್ಲ ಅನ್ನೋದು. ಎಲ್ಲ ಪ್ರೇಮಿಗಳೂ ಪ್ರೇಮದ ದಿನ ಜೊತೆಗಿದ್ದರೆ ತನ್ನ ಪ್ರೇಮಿ ಮಾತ್ರ ತನಗೊಂದು ಪುಟ್ಟ ಗಿಫ್ಟ್ ಸಹ ನೀಡಿಲ್ಲ ಅನ್ನೋದು ಅವಳನ್ನು ಕೆರಳುವಂತೆ ಮಾಡಿದೆ. ಅಲ್ಲಿಗೆ ಹರ್ಷನಿಗೆ ತನ್ನ ಮೇಲೆ ಅಂಥಾ ಪ್ರೀತಿ ಇಲ್ಲ ಅನ್ನೋದು ಸೂಕ್ಷ್ಮವಾಗಿ ತಿಳಿದ ಹಾಗಿದೆ. ತನ್ನನ್ನು ಇಷ್ಟ ಪಡದ ಹೀರೋ ಮತ್ಯಾರನ್ನೂ ಇಷ್ಟ ಪಡಬಾರದು. ಮತ್ಯಾರೂ ತನ್ನ ಹೀರೋನನ್ನು ಇಷ್ಟಪಡಬಾರದು. ಈ ಸ್ವಾರ್ಥವೇ ವರೂಧಿನಿ ಹರ್ಷನನ್ನು ಸಾಯಿಸಲು ಪ್ಲಾನ್ ಮಾಡೋಕೆ ಕಾರಣ. 


ಇನ್ನೊಬ್ಬಳು ಸಾನಿಯಾ. ಆಕೆ ತನಗೆ ಮಾಡಿದ ಅನ್ಯಾಯ, ತನ್ನನ್ನು ಜೈಲಿಗೆ ಕಳಿಸಿರೋದರ ಬಗ್ಗೆ ವರೂಧಿನಿಗೆ ಯಾವ ಪರಿ ಸಿಟ್ಟಿದೆ ಅಂದರೆ ಸಾನಿಯಾಳನ್ನು ಕೊಂದೇ ಹಾಕುವಷ್ಟು. ಅವಳನ್ನು ಕೊಂದ ಮೇಲೆ ತನ್ನನ್ನೂ ತಾನು ಸಾಯಿಸಿಕೊಳ್ಳುವ ಯೋಚನೆಯೂ ಇದೆ. ಇದು ಮಾನಸಿಕವಾಗಿ ವರೂಧಿನಿಗೆ ಸ್ಥಿರತೆ ಇಲ್ಲದಿರೋದನ್ನು ತೋರಿಸುತ್ತೆ. 
ಹೀಗೆಲ್ಲ ಘಟನೆ ನಡೆದು ನೆಕ್ಸ್ಟ್ ಎಪಿಸೋಡ್‌ಗೆ ಕಾತರದಿಂದ ಕಾಯೋ ಹಾಗಾಗಿದೆ. 

'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ' ...