ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್‌ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಈ ಚಿತ್ರದ ಬಿಡುಗಡೆ ಹಕ್ಕುಗಳಿಗಾಗಿ ಸಾಕಷ್ಟುನಿರ್ಮಾಪಕರು ಸಾಲಿನಲ್ಲಿ ನಿಂತಿದ್ದರು. ಅದಕ್ಕೆ ಕಾರಣ ಚಾಪ್ಟರ್‌ 1 ಯಶಸ್ಸು. ಅಮೆಜಾನ್‌ ಪ್ರೈಮ್‌ ಸೇರಿದಂತೆ ಡಿಜಿಟಲ್‌ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಗಳಿಕೆ. ಈ ಹಿಂದೆ ವರಾಹಿ ಚಲನಚಿತ್ರಂ ಬ್ಯಾನರ್‌ ‘ಕೆಜಿಎಫ್‌ 1’ರ ಬಿಡುಗಡೆಯ ಹಕ್ಕುಗಳನ್ನು ಕೇವಲ 5 ಕೋಟಿಗೆ ಕೊಂಡು, 12 ಕೋಟಿ ಲಾಭ ಮಾಡಿತ್ತು. ಟೀವಿ ಹಕ್ಕುಗಳಲ್ಲೂ ಎರಡು ಪಟ್ಟು ಲಾಭ ಮಾಡಿಕೊಂಡಿದ್ದರು. ಚಾಪ್ಟರ್‌ 1ರ ಬ್ಯುಸಿನೆಸ್‌ ನೋಡಿಯೇ ಚಾಪ್ಟರ್‌ 2 ಬಿಡುಗಡೆಯ ಹಕ್ಕುಗಳಿಗಾಗಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಆದರೆ, ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಹೇಳಿದ ರೇಟು ಕೇಳಿ ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೌದು, ಮೊದಲಿಗೆ 70 ಕೋಟಿಗೆ ಬೇಡಿಕೆ ಇಟ್ಟಿದ್ದರು ನಿರ್ಮಾಪಕರು. ‘ಎರಡೂ ತೆಲುಗು ರಾಜ್ಯಗಳ ಬಿಡುಗಡೆ ಹಕ್ಕುಗಳಿಗಾಗಿ ಇಷ್ಟೊಂದು ಮೊತ್ತವೇ’ ಎಂದು ಹಲವು ನಿರ್ಮಾಪಕರು ಮಾತನಾಡಿಕೊಂಡಿದುಂಟು.

ಯಶ್‌ನನ್ನು ಹೊಗಳಿದ ಅಮೆರಿಕನ್ ಕುಸ್ತಿಪಟು: KGF2 ನೋಡಲು ವೈಟಿಂಗ್ 

ನಿರೀಕ್ಷೆಗೂ ಮೀರಿ ವಿತರಣೆಯ ರೈಟ್ಸ್‌ನಲ್ಲಿ ಸದ್ದು ಮಾಡುತ್ತಿದ್ದ ‘ಕೆಜಿಎಫ್‌ 2’ ಚಿತ್ರದ ವ್ಯವಹಾರಕ್ಕೆ ಕೈ ಹಾಕದೆ ಹಲವರು ಸುಮ್ಮನಿದ್ದಾಗ ದಿಲ್‌ ರಾಜು ಮಾತ್ರ ಧೈರ್ಯ ಮಾಡಿ 70 ಕೋಟಿಯನ್ನು 65 ಕೋಟಿ ರು.ಗೆ ಇಳಿಸಿಕೊಂಡು ರೈಟ್ಸ್‌ ತೆಗೆದುಕೊಂಡಿದ್ದಾರೆ. ಆ ಮೂಲಕ ತೆಲುಗಿನ ಬಹು ದೊಡ್ಡ ನಿರ್ಮಾಪಕ ಹಾಗೂ ವಿತರಕನ ಕೈಗೆ ಯಶ್‌ ಚಿತ್ರ ಸೇರಿಕೊಂಡಿದೆ. ಅಂದಹಾಗೆ 65 ಕೋಟಿ ರು.ಗೆ ವ್ಯವಹಾರ ಪಕ್ಕಾ ಮಾಡಿಕೊಂಡಿರುವ ದಿಲ್‌ ರಾಜು, ಈಗಾಗಲೇ ನಿರ್ಮಾಪಕರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಸ್ಟಾರ್‌ ನಟನೊಬ್ಬನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೂ ಮೊದಲೇ ಈ ರೀತಿ ಬ್ಯುಸಿನೆಸ್‌ ಮಾಡುತ್ತಿರುವುದು ನೋಡಿ ಟಾಲಿವುಡ್‌ ಕೂಡ ನಿಬ್ಬೆರಗಾಗಿದೆ. ಸದ್ಯ ತಾವು ಅಂದುಕೊಂಡಂತೆ ಟಾಲಿವುಡ್‌ನಲ್ಲಿ ಬ್ಯುಸಿನೆಸ್‌ ಮಾಡಿರುವ ಖುಷಿಯಲ್ಲಿದೆ ‘ಕೆಜಿಎಫ್‌ 2’ ಚಿತ್ರತಂಡ.

"

ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ಇದೇ ದಿಲ್‌ ರಾಜು ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಿಲ್‌ ರಾಜು ಅವರು ಕನ್ನಡದಿಂದ ಯಶ್‌, ವಿಜಯ್‌ ಕಿರಗಂದೂರು ಅವರನ್ನೂ ಸಹ ಅಹ್ವಾನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿದ್ಯಾ ಬಾಲನ್‌ಗೆ ಕನ್ನಡ ಸಿನಿಮಾದಲ್ಲಿ ನಟಿಸಿ ಎಂದ ಯಶ್: ನಟಿಯ ರಿಯಾಕ್ಷನ್ ಹೀಗಿತ್ತು