1) ಅನರ್ಹರಿಗೆ ಬಿಗ್ ರಿಲೀಫ್, ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ!

ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅನರ್ಹ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಸಂಪೂರ್ಣ ಮುಗಿದ ಮೇಲೆ ಚುನಾವಣೆಗೆ ಹೋಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅನರ್ಹ ಶಾಸಕರಿಗೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ಉಪ ಚುನಾವಣೆಗೆ ತಡೆ ನೀಡಿ 17 ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ನಾವು ಪ್ರಕರಣವನ್ನು ಸಂಪೂರ್ಣವಾಗಿ ವಿಚಾರಣೆ ಮಾಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

2) ನನ್ನ ಮಗಳಿಗೆ ಎಚ್‌ಡಿಕೆ ಪೋನ್ ಮಾಡಿದ್ರು: ಅನರ್ಹ ಶಾಸಕನ ಹೊಸ ಬಾಂಬ್!

ಒಂದೆಡೆ ಅನರ್ಹ ಶಾಸಕರು ಅಬ್ಬರಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರೂ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಅನರ್ಹ ಶಾಸಕರಲ್ಲೊಬ್ಬರಾದ ಹಿರೇಕೆರೂರು ಮಾಜಿ ಶಾಸಕ ಬಿ. ಸಿ. ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಎಚ್ಡಿ ಕೆ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿ. ಸಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. 

3) ರಾಜ್ಯದಲ್ಲಿ ಮತ್ತೆ ಆರ್ಭಟಿಸುತ್ತಾನಂತೆ ವರುಣ, ಕಾಡುತ್ತಿದೆ ಭೀತಿ!

ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಎಂದು ಎಚ್ಚರಿಕೆ ನೀಡಲಾಗಿದೆ. 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮಲೆನಾಡು ಹಾಗೂ ಕರವಾಳಿ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. 

4) ಕಳ್ಳಗಿವಿ ಪ್ರಕರಣದಲ್ಲಿ ರೋಚಕ ಟ್ವಿಸ್ಟ್: IPS ಅಲೋಕ್‌ ಕುಮಾರ್‌ಗೆ ಸಿಬಿಐ ಶಾಕ್!


ಕಳ್ಳಗಿವಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಫೋನ್ ಟ್ಯಾಪ್ ಕೇಸಲ್ಲಿ ಸಿಬಿಐ ಅತಿ ದೊಡ್ಡ ಬೇಟೆ ನಡೆಸಿದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಅಗಿದ್ದ IPS ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. 

5) ಅತಿದೊಡ್ಡ ಸೆಕ್ಸ್ ಹಗರಣ ಸ್ಫೋಟ.. ವಿಐಪಿಗಳ ಬೆತ್ತಲೆ ಫೈಲ್ ಸಂಖ್ಯೆಯೇ 5000!

ಹನಿಟ್ರ್ಯಾಪ್ ತಂಡವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಸಿಕ್ಕಿರುವ ಡೇಟಾ ಕಂಡು ಎಲ್ಲರೂ ಹೌಹಾರಿದ್ದಾರೆ. ಇದು ದೇಶದ ಅತಿದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಆಗಬಹುದು ಎಂದು ತನಿಖೆಯಲ್ಲಿ ಭಾಗವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೋರೆನ್ಸಿಕ್ ಲ್ಯಾಬ್ ನಲ್ಲಿ ಎಲ್ಲ ಡೇಡಾಗಳ ತನಿಖೆ ನಡೆಯುತ್ತಿದೆ. ಡಿಜಿಟಲ್ ಫೈಲ್ ಗಳ ಸಂಖ್ಯೆ 5000 ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

6) ICC ಟಿ20 ಶ್ರೇಯಾಂಕ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ..!

ರೋಹಿತ್‌ ಶರ್ಮಾ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕ ಪ್ರಕಟಗೊಂಡಿದ್ದು, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ರೋಹಿತ್ ಶರ್ಮಾ ಟಿ20 ರ‍್ಯಾಂಕಿಂಗ್‌ ಪಟ್ಟಿ​ಯಲ್ಲಿ 8ನೇ ಸ್ಥಾನ​ಕ್ಕೇ​ರಿದ್ದು, ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅಗ್ರ 10ರೊಳಗೆ ಪ್ರವೇ​ಶಿ​ಸುವ ಸನಿ​ಹ​ದ​ಲ್ಲಿ​ದ್ದಾರೆ.

7) ಕನ್ನಡಿಗರು ಸ್ವಾಗತಿಸಿದ ರೀತಿಗೆ ಪೈಲ್ವಾನ್ ಬೆಡಗಿ ಫುಲ್ ಫಿದಾ!

ಪೈಲ್ವಾನ್‌ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ರಾಜಸ್ಥಾನದ ಚೆಲುವೆ ಆಕಾಂಕ್ಷ ಸಿಂಗ್‌ ಮೇಲೆ ಕನ್ನಡ ಸಿನಿ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ. ಚಂದನವನದ ಕೆಲವು ನಿರ್ದೇಶಕರ ಕಣ್ಣು ಆಕಾಂಕ್ಷ ಸಿಂಗ್‌ ಮೇಲಿದೆ ಎನ್ನುವ ಸುದ್ದಿಗಳು ಇವೆ. ಇದರ ಬೆನ್ನಲ್ಲೇ ಕನ್ನಡಿಗರು ತನ್ನನ್ನು ಸ್ವಾಗತಿಸಿದ ರೀತಿಗೆ ಪದಗಳೇ ಇಲ್ಲ ಎಂದಿದ್ದಾರೆ.

8) ಸರಕಾರಿ ಶಾಲೆಯಲ್ಲಿ ಮಾತ್ರ ಈ ಗುರು-ಶಿಷ್ಯ ಬಾಂಧವ್ಯ ಸಾಧ್ಯ!

ತಣಿಗೆಬೈಲ್ ಸರಕಾರಿ ಪ್ರಾಥಮಿಕ ಶಾಲೆಯಿಂದ ಲಿಂಗದಹಳ್ಳಿ ಶಾಲೆಗೆ ವರ್ಗವಾದ ಶಿಕ್ಷಕ ನಾಗರಾಜಪ್ಪ ಅವರನ್ನು ಅಪ್ಪಿ, ಕಣ್ಣೀರಿನೊಂದಿಗೆ ಮಕ್ಕಳು ಬೀಳ್ಕೊಟ್ಟಿರುವ ಈ ದೃಶ್ಯ ಎಂಥವರ ಮನವನ್ನೂ ಕಲಕುತ್ತದೆ. ಈ ಆಧುನಿಕ ಯುಗದಲ್ಲಿಯೂ ಮಕ್ಕಳೊಂದಿಗೆ ಇಂಥದ್ದೊಂದು ವಿಶೇಷ ಬಾಂಧವ್ಯ ವೃದ್ಧಿಸಿಕೊಂಡ ಈ ಶಿಕ್ಷಕನಿಗೆ ನಮೋ ನಮಃ.


9) ಪಾರಿವಾಳಕ್ಕೂ ಟಿಕೆಟ್ ಕೊಟ್ಟ ನಿರ್ವಾಹಕ: ವಿದ್ಯಾರ್ಥಿ ಫುಲ್ ಶಾಕ್!

ಬಸ್‌ನಲ್ಲಿ ಪ್ರಯಾಣಿಸುವಾಗ ಪ್ರಾಣಿಗಳನ್ನು ಒಯ್ಯುವಂತಿಲ್ಲ ಇದು ನಿಯಮ. ಹೀಗಿದ್ದರೂ ಅನೇಕರು ಈ ನಿಯಮವನ್ನು ಗಾಳಿಗೆ ತೂರಿ ಸಾಕು ಪ್ರಾಣಿಗಳನ್ನು ಸಾರಿಗೆ ವಾಹನದಲ್ಲಿ ಕರೆದೊಯ್ಯುತ್ತಾರೆ. ಆದರೀಗ ಇದೇ ರೀತಿ ಪಾರಿವಾಳವನ್ನು ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದ ವಿದ್ಯಾರ್ಥಿ ಗೆ ಬಸ್ ಕಂಡಕ್ಟರ್ ಶಾಕ್ ನೀಡಿದ್ದಾರೆ.

10) ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಡಿಸ್ಕೌಂಟ್ ಸಿಗಲ್ಲ!

ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ಗೆ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಿದ ಗ್ರಾಹಕರು ಪಡೆಯುತ್ತಿದ್ದ ಶೇ.0.75 ಕ್ಯಾಶ್‌ಬ್ಯಾಕ್‌ ಸೌಲಭ್ಯವು ಅ.1ರಿಂದ ರದ್ದಾಗಲಿದೆ. 2016ರಲ್ಲಿ ನೋಟು ಅಪನಗದೀಕರಣದ ಬಳಿಕ ಡಿಜಿಟಲ್‌ ಪಾವತಿ ವ್ಯವಸ್ಥೆ ಪ್ರೋತ್ಸಾಹಕ್ಕಾಗಿ ಕ್ರೆಡಿಟ್‌ ಕಾರ್ಡ್‌ ಬಳಸುವ ಗ್ರಾಹಕರಿಗೆ ರಿಯಾಯತಿ ನೀಡುವಂತೆ ಕೇಂದ್ರ ಸರ್ಕಾರದ ನಿರ್ದೇಶನವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ರದ್ದುಗೊಳಿಸಲು ಮುಂದಾಗಿವೆ.