ಅನರ್ಹರಿಗೆ ಬಿಗ್ ರಿಲೀಫ್, ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ

ಅನರ್ಹ ಶಾಸಕರಿಗೆ ಬಿಗ್ ರಿಲೀಫ್/ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್/ ಪ್ರಕರಣದ ಸಂಪೂರ್ಣ ವಿಚಾರಣೆ ಬಳಿಕವೇ ಚುನಾವಣೆ

BIg Relief to 17 disqualified MLAs Supreme court stayed Karnataka By Election 2019

ನವದೆಹಲಿ(ಸೆ. 26) ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅನರ್ಹ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಸಂಪೂರ್ಣ ಮುಗಿದ ಮೇಲೆ ಚುನಾವಣೆಗೆ ಹೋಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅನರ್ಹ ಶಾಸಕರಿಗೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ಉಪ ಚುನಾವಣೆಗೆ ತಡೆ ನೀಡಿ 17 ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ನಾವು ಪ್ರಕರಣವನ್ನು ಸಂಪೂರ್ಣವಾಗಿ ವಿಚಾರಣೆ ಮಾಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಾದ-ಪ್ರತಿವಾದಗಳು ನಡೆದವು. ಚುನಾವಣಾ ಆಯೋಗದ ಪರವಾಗಿಯೂ ವಕೀಲರು ಹಾಜರಾಗಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಚುನಾವಣೆಗೆ ತಡೆ ನೀಡಿದ್ದು ಸದ್ಯ ರಾಜ್ಯದಲ್ಲಿ ಆರಂಭವಾಗಿದ್ದ ರಾಜಕೀಯ ಬಿಸಿ ತಣ್ಣಗಾಗಿದೆ.

ಅಂದು ರಾಜೀನಾಮೆ ನೀಡಿದ್ಯಾಕೆ: ಮುಕ್ತ ಕಂಠದಿಂದ ಕಾರಣ ಕೊಟ್ಟ ಅರ್ನಹ ಶಾಸಕ

ಮತ್ತೆ ಯಾವಾಗ ವಿಚಾರಣೆ? ಅಕ್ಟೋಬರ್ 22 ಕ್ಕೆ ಸುಪ್ರೀಂ ಅನರ್ಹರ ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಅಂದ ಮಾತ್ರಕ್ಕೆ ಅಂದೇ ವಿಚಾರಣೆ ಆಗಬೇಕು ಎಂದೇನಿಲ್ಲ.. ಕೆಲ ದಿನಗಳ ಮೊದಲು ಅಥವಾ ನಂತರವೂ ಕೈಗೆತ್ತಿಕೊಳ್ಳಬಹುದು.

ಉಪಚುನಾವಣೆ ಘೋಷಣೆ ನಂತರ ಯಾವ ಪಕ್ಷದಲ್ಲಿ ಏನೇನಾಯ್ತು?

ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ರಾಜೀನಾಮೆ ಕೊಟ್ಟಿದ್ದ ಉಳಿದ ಕ್ಷೇತ್ರ ಅಂದರೆ 
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರಕ್ಕೆ ಉಪಚುನಾವಣೆ ಘೋಷಣೆ ಮಾಡಲಾಗಿತ್ತು. ಚುನಾವಣಾ ಆಯೋಗ ಅಧಿಸೂಚನೆ ಸಹ ಪ್ರಕಟ ಮಾಡಿತ್ತು.

ಮುಂದೇನಾಗಬಹುದು?  ಚುನಾವಣೆಗೆ ತಡೆ ನೀಡಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬಹುದು. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಬಂಡಾಯದ ಬಿಸಿ ಎದುರಿಸಿದ್ದ ಬಿಜೆಪಿ ಹೊಸ ತಂತ್ರಗಳ ಮೂಲಕ ಸ್ಪಷ್ಟ ಅಭ್ಯರ್ಥಿಯನ್ನು ರೂಪಣೆ ಮಾಡಿಕೊಳ್ಳಬಹುದು.

ನೀತಿ ಸಂಹಿಯತೆ ಹಿಂದಕ್ಕೆ: ಸುಪ್ರೀಂ ಕೋರ್ಟ್ ಚುನಾವಣೆಗೆ ತಡೆ ನೀಡಿರುವುದುದರಿಂದ ಚುನಾವಣೆ ಘೋಷಣೆಯಾದ ಕ್ಷೇತ್ರದಲ್ಲಿನ ನೀತಿ ಸಂಹಿತೆ ಈ ಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗುತ್ತದೆ. ಚುನಾವಣಾ ಆಯೋಗ  ಮತ್ತೊಮ್ಮೆ ಅಧಿಸೂಚನೆ ಹೊರಡಿಸುವವರೆಗೂ ಕ್ಷೇತ್ರ ಮೊದಲಿನಂತೆಯೇ ಇರಲಿದೆ.

Latest Videos
Follow Us:
Download App:
  • android
  • ios