ದುಬೈ(ಸೆ.26): ರೋಹಿತ್‌ ಶರ್ಮಾ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕ ಪ್ರಕಟಗೊಂಡಿದ್ದು, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  

ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!

ರೋಹಿತ್ ಶರ್ಮಾ ಟಿ20 ರ‍್ಯಾಂಕಿಂಗ್‌ ಪಟ್ಟಿ​ಯಲ್ಲಿ 8ನೇ ಸ್ಥಾನ​ಕ್ಕೇ​ರಿದ್ದು, ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅಗ್ರ 10ರೊಳಗೆ ಪ್ರವೇ​ಶಿ​ಸುವ ಸನಿ​ಹ​ದ​ಲ್ಲಿ​ದ್ದಾರೆ. ದ.ಆ​ಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯ​ದಲ್ಲಿ 72 ರನ್‌ ಗಳಿಸಿದ ಕೊಹ್ಲಿ 1 ಸ್ಥಾನ ಏರಿಕೆ ಕಂಡಿದ್ದು 11ನೇ ಸ್ಥಾನ​ದ​ಲ್ಲಿ​ದ್ದಾರೆ. ಧವನ್‌ 3 ಸ್ಥಾನ​ಗಳ ಏರಿಕೆ ಕಂಡಿದ್ದು, 13ನೇ ಸ್ಥಾನ ಪಡೆ​ದಿ​ದ್ದಾರೆ. ರೋಹಿತ್‌ ಒಂದು ಸ್ಥಾನ ಏರಿಕೆ ಕಂಡು ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ ಜತೆಗೆ 8ನೇ ಸ್ಥಾನ ಹಂಚಿ​ಕೊಂಡಿ​ದ್ದಾರೆ. ಇಬ್ಬರೂ 664 ರೇಟಿಂಗ್‌ ಅಂಕ​ಗ​ಳನ್ನು ಹೊಂದಿ​ದ್ದಾರೆ. 

ಬ್ಯಾಟಿಂಗ್ ವಿಭಾಗದದಲ್ಲಿ ಬಾಬರ್ ಅಜಂ ನಂ.1 ಸ್ಥಾನದಲ್ಲೇ ಮುಂದುವರಿದಿದ್ದರೆ, ಗ್ಲೇನ್ ಮ್ಯಾಕ್ಸ್ ವೆಲ್, ಕಾಲಿನ್ ಮನ್ರೋ, ಆ್ಯರೋನ್ ಫಿಂಚ್ ಹಾಗೂ ಆಫ್ಘಾನಿಸ್ತಾನದ ಹಜರುತ್ತುಲ್ಲಾ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ!

ಇನ್ನು ಟಿ20 ಬೌಲಿಂಗ್ ವಿಭಾಗದಲ್ಲಿ ಟಾಪ್ 9 ಸ್ಥಾನಗಳಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಆಫ್ಘಾನಿಸ್ತಾನದ ರಶೀದ್ ಖಾನ್ ನಂ.1 ಸ್ಥಾನದಲ್ಲಿದ್ದರೆ, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಬೌಲರ್’ಗಳು ಇಮಾದ್ ವಾಸೀಂ ಹಾಗೂ ಶಾದಾಬ್ ಖಾನ್ ಸ್ಥಾನ ಉಳಿಸಿಕೊಂಡಿದ್ದಾರೆ. ಆ ಬಳಿಕ ಆದಿಲ್ ರಶೀದ್ ಹಾಗೂ ಮಿಚೆಲ್ ಸ್ಯಾಂಟ್ನರ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಆದರೆ ಟಾಪ್ 10 ಪಟ್ಟಿಯೊಳಗೆ ಭಾರತದ ಯಾವೊಬ್ಬ ಬೌಲರ್’ಗಳು ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಕುಲ್ದೀಪ್ ಯಾದವ್ 7 ಸ್ಥಾನ ಕುಸಿತ ಕಂಡು 14ನೇ ಸ್ಥಾನಕ್ಕೆ ಜಾರಿದ್ದಾರೆ. ಅಲ್ಲದೇ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬೌಲರ್ ಎನಿಸಿದ್ದಾರೆ.

ತಂಡಗಳ ವಿಭಾಗದಲ್ಲಿ 283 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿವೆ.