ನೀಲಿ ಜರ್ಸಿಯಲ್ಲಿ ಆರ್‌ಸಿಬಿ ಆಟ, ದೇಗುಲ ತೆರವು ಕಾರ್ಯ ಸ್ಥಗಿತ; ಸೆ.14ರ ಟಾಪ್ 10 ಸುದ್ದಿ!
ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಿರುವ ಅಸಲಿ ಕಾರಣ ಬಹಿರಂಗವಾಗಿದೆ. ಕೊರೋನಾ ಪರಿಹಾರ ಕೇಳಿದ ವಕೀಲನ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ರಶ್ಮಿಕಾ ಮಂದಣ್ಣ ಪ್ರೀತಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಬೆದರಿದ ಜಿಲ್ಲಾಡಳಿತದಿಂದ 93 ದೇಗುಲ ತೆರವು ಸ್ಥಗಿತ, ಪಾಕಿಸ್ತಾನದಲ್ಲಿ ಕೊರೋನಾ 4ನೇ ಅಲೆ ಸೇರಿದಂತೆ ಸೆಪ್ಟೆಂಬರ್ 14ರ ಟಾಪ್ 10 ಸುದ್ದಿ ವಿವರ.
ಪಾಕ್‌ನಲ್ಲಿ ಕೋವಿಡ್ 4ನೇ ಅಲೆ: ಆಮ್ಲಜನಕಕ್ಕಾಗಿ ದೇಶಾದ್ಯಂತ ಹಾಹಾಕಾರ!
ನೆರೆಯ ಪಾಕಿಸ್ತಾನದಲ್ಲಿ ಇದೀಗ ಕೊರೋನಾ 4ನೇ ಅಲೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ ತೀವ್ರ ಆಮ್ಲಜನಕ ಕೊರತೆ ಎದುರಾಗಿದೆ. ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಜನರು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ಚುನಾವಣಾ ಹೊಸ್ತಿಲಲ್ಲಿ ಮುಖ್ಯಮಂತ್ರಿಗಳ ಬದಲಾವಣೆ: ಇಲ್ಲಿದೆ ಇದರ ಹಿಂದಿನ ರಹಸ್ಯ!
6 ತಿಂಗಳಲ್ಲಿ ಬದಲಾಗಿದ್ದು ಐದು ಮಂದಿ ಸಿಎಂ. ನರೇಂದ್ರ ಮೋದಿ, ಅಮಿತ್ ಶಾ ಕಂಡು ಹಿಡಿದಿರುವ ಈ ಹೊಸ ಸೂತ್ರದ ರಹಸ್ಯವೇನು? ಚುನಾವಣೆ ಹೊಸ್ತಿಲಲ್ಲಿ ರಚನೆಯಾಗುತ್ತಿದೆ ರಣತಂತ್ರ. ಇದರಿಂದ ಬಿಜೆಪಿಗೆ ಹಿರಿ ತಲೆಗಳ ರಾಜೀನಾಮೆಯ ಶಾಪ ತಟ್ಟುತ್ತಾ? ಮೋದಿ ಬದಲು ಸಿಎಂಗಳೇ ಸ್ಟಾರ್ ಆಗುತ್ತಾರಾ? ಇದ್ದಕ್ಕಿದ್ದಂತೆಯೇ ಸೈಲೆಂಟ್ ಆಗಿದ್ದೇಕೆ ಪಿಎಂ ಮೋದಿ?
ಕಪ್ಪು ಕೋಟಿನ ಕಾರಣ ನಿಮ್ ಜೀವಕ್ಕೆ ಹೆಚ್ಚಿನ ಬೆಲೆ ಅಂದ್ಕೊಬೇಡಿ; ವಕೀಲನ ವಿರುದ್ಧ ಸುಪ್ರೀಂ ಕೋರ್ಟ್ ಗರಂ!
ಕೊರೋನಾ ವೈರಸ್ ಕಾರಣ ಮೃತಪಟ್ಟ ಬಿಪಿಎಲ್ ಕಾರ್ಡ್ ದಾರರು, ನಿರ್ಗತಿಕರು, ಬಡವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪರಿಹಾರ ಯೋಜನೆಗಳನ್ನು ಜಾರಿ ಮಾಡಿದೆ. ಕೋವಿಡ್‌ನಿಂದ ಮೃತಪಟ್ಟ ವಕೀಲರಿಗೂ ಪರಿಹಾರ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಸಲ್ಲಿಸಿದ್ದ ವಕೀಲನಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
IPL 2021: KKR ಎದುರು ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ..!
ಆರ್‌ಸಿಬಿ ತಂಡವು ಯುಎಇ ಚರಣದ ಮೊದಲ ಪಂದ್ಯದಲ್ಲೇ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಕೋವಿಡ್ ವಾರಿಯರ್‌ಗಳಿಗೆ ವಿನೂತನವಾಗಿ ಗೌರವ ಸೂಚಿಸಲು ಮುಂದಾಗಿದೆ.
ನಾನು ಬಯಸಿದ ಪ್ರೀತಿ ಸಿಕ್ತು ಎಂದು ಬರೆದುಕೊಂಡಿದ್ದೇಕೆ ರಶ್ಮಿಕಾ?
ಸ್ಯಾಂಡಲ್‌ವುಡ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ನಾನು ಬಯಸಿದ ಪ್ರೀತಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ ಶಾಕ್ ಆದ ನೆಟ್ಟಿಗರು ಫೋಟೋ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ನೀವೂ ಈ ವಿಡಿಯೋ ನೋಡಿ....
ವಾಟ್ಸಾಪ್‌ನಲ್ಲಿ ಟೈಪಿಸಬೇಕಿಲ್ಲ, ಮಾತಾಡಿದ್ರೆ ಸಾಕು!
ಬಳಕೆದಾರರ ಅನುಕೂಲಕ್ಕಾಗಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಅನೇಕ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗ ವಾಟ್ಸಾಪ್, ವಾಯ್ಸ್ ಸಂದೇಶಗಳನ್ನು ಪಠ್ಯವಾಗಿ ಲಿಪ್ಯಂತರಗೊಳಿಸುವ ಫೀಚರ್ ಮೇಲೆ ಪರೀಕ್ಷೆ ನಡೆಸುತ್ತಿದೆ. ಇದು ಸಾಧ್ಯವಾದರೆ ನೀವು ಮಾತನಾಡಿದ್ರೆ ಸಾಕು ಅದು ಸಂದೇಶವಾಗಿ ಕನ್ವರ್ಟ್ ಆಗಿ ರವಾನೆಯಾಗಲಿದೆ.
ಐಟಿ ಉದ್ಯೋಗಿಗಳು ಪುನಃ ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ!
ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವುದು ಹಾಗೂ ಬಹುತೇಕ ಉದ್ಯೋಗಿಗಳು ಲಸಿಕೆಯನ್ನು ಪಡೆದುಕೊಂಡಿರುವ ಹಿನ್ನೆಯಲ್ಲಿ ಐಟಿ ಕಂಪನಿಗಳು ತಮ್ಮ ನೌಕರರನ್ನು ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ವಾರದಲ್ಲಿ 2-3 ದಿನ ವರ್ಕ್ ಫ್ರಂ ಆಫೀಸ್ ಮತ್ತು 2-3 ದಿನ ವರ್ಕ್ ಫ್ರಂ ಹೋಮ್ ಎಂಬ ಹೈಬ್ರಿಡ್ ಮಾದರಿಯನ್ನು ಅನುಸರಿಸಲು ಟಿಸಿಎಸ್, ವಿಪ್ರೋ, ಆ್ಯಪಲ್ ನಂತಹ ಪ್ರಮುಖ ಐಟಿ ಕಂಪನಿಗಳು ಮುಂದಾಗಿವೆ.
ರಾಜಧಾನಿಯ ರಾಜಕುಮಾರ ಟಾಟಾ ಟಿಗೋರ್ ಇವಿ; ಎಲೆಕ್ಟ್ರಿಕ್ ಕಾರಿನ Review!
ನಾವು ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ಷೋ ರೂಮಿಗೆ ಹೋಗುವ ಹೊತ್ತಿಗೆ ತಿಳಿ ನೀಲಿ ಬಣ್ಣದ ಚೆಂದದ ಕಾರೊಂದು ನಮಗೋಸ್ಕರ ಕಾಯುತ್ತಿತ್ತು. ನೋಡುವುದಕ್ಕೆ ತುಂಬ ಹಗುರ ಎನ್ನಿಸುವ, ಒಳಗೆ ನಾಲ್ಕು ಮಂದಿ ಕೈಕಾಲು ಚಾಚಿಕೊಂಡು ಕೂರಬಹುದಾದ ಸೆಡಾನ್ ಕಾರು. ಬೂಟ್ ತೆಗೆದು ನೋಡಿದರೆ ಒಳಗಡೆಯೇ ಕಳ್ಳನಂತೆ ಅಡಗಿ ಕೂತ ಸ್ಟೆಪ್ನಿ. ಅದರ ಪಕ್ಕದಲ್ಲೇ ಒಂದಷ್ಟುಜಜಾಗ ಕಬಳಿಸಲೆಂದೇ ಇರುವ ರೀಚಾರ್ಜ್ ಯೂನಿಟ್ಟುಗಳು.
ಮೈಸೂರು : ಬೆದರಿದ ಜಿಲ್ಲಾಡಳಿತದಿಂದ 93 ದೇಗುಲ ತೆರವು ಸ್ಥಗಿತ
ದೇವಾಲಯಗಳ ತೆರವಿಗೆ ಮೈಸೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಗೆ ಬೆದರಿದ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಸ್ಥಗಿತ ಮಾಡಿದೆ.