ಬೆಂಗಳೂರು(ಅ.20): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಗಡಿಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: PoKಯಲ್ಲಿದ್ದ ಉಗ್ರರ 4 ಕ್ಯಾಂಪ್ ಉಡೀಸ್‌!


ಭಾರತೀಯ ಸೇನೆಯು ನೀಲಮ್ ಸೆಕ್ಟರ್ನಲ್ಲಿದ್ದ 4 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಭಾರತೀಯ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದೆ. ಈ ಕಾರ್ಯಾಚರಣೆಯಲ್ಲಿ 4 ರಿಂದ ಪಾಕ್ ಸೈನಿಕರು ಮತ್ತು ಉಗ್ರರು ಹತರಾಗಿದ್ದು, ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.


2. ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಬೆಂಬಲ: ಈ ದೇಶದ ಪ್ರವಾಸ ರದ್ದುಗೊಳಿಸಿದ ಮೋದಿ!


ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್, ಈ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಇದೀಗ ಭಾರತದ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಾಶ್ಮೀರ ವಿಚಾರವಾಗಿ ಟರ್ಕಿ ತನ್ನ ಬೆಂಬಲವನ್ನು ಪಾಕಿಸ್ತಾನಕ್ಕೆ ನೀಡಿದ್ದರಿಂದ ಕೋಪಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ತಿಂಗಳಾಂತ್ಯಕ್ಕೆ ನಿಗದಿಯಾಗಿದ್ದ ತಮ್ಮ ಎರಡು ದಿನಗಳ ಟರ್ಕಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

3. ಸೆಹ್ವಾಗ್’ಗಿಂದು 41ನೇ ಹುಟ್ಟುಹಬ್ಬದ ಸಂಭ್ರಮ


ಭಾರತ ಕ್ರಿಕೆಟ್ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ಇಂದು 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ 2 ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್’ಮನ್ ಎನಿಸಿರುವ ಸೆಹ್ವಾಗ್’ಗೆ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಸುರಿಮಳೆಯೇ ಹರಿದು ಬರುತ್ತಿದೆ.

4. ನಾನು ಒಳ್ಳೆಯ ವಕೀಲರಾದ ಕಾರಣಕ್ಕೆ ಆರೋಪಿ ಹೆಸರಿಸಿರಲಿಲ್ಲ: ಸಿಟಿ ರವಿಗೆ ಸಿದ್ದು ಛಾಟಿ!


ವೀರ್ ಸಾವರ್ಕರ್‌ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಿ. ಟಿ. ರವಿ ನಡುವೆ ಆರಂಭವಾದ ಟ್ವೀಟ್ ವಾರ್ ಭಾನುವಾರವೂ ಮುಂದುವರೆದಿದೆ. ಸಾವರ್ಕರ್‌ಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಸಿ. ಟಿ. ರವಿ ಕಿಡಿ ಕಾರಿದ್ದರು. ಈ ವಿಚಾರ ಅಪಘಾತ ಪ್ರಕರಣಕ್ಕೆ ತಳುಕು ಹಾಕಿದ್ದು, ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ.

5. ಶೋಕಾಸ್ ನೋಟಿಸ್‌ಗೆ ಉತ್ತರಿಸಿ ಎಂದು ಯತ್ನಾಳ್‌ಗೆ ಸಲಹೆ ಕೊಟ್ಟವರು ಯಾರು?


ನಾನು ಶೋಕಾಸ್ ನೋಟಿಸ್ ಗೆ ಯಾವ ಕಾರಣಕ್ಕೆ ಉತ್ತರ ನೀಡಿದ್ದೇನೆ ಎಂದು ವಿಜಯಪುರದಲ್ಲಿ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಮಠಾಧೀಶರು ಹಾಗೂ ಹಿತೈಷಿಗಳ ಸಲಹೆ ಮೇರೆಗೆ ನೋಟಿಸ್ ಗೆ ಉತ್ತರಿಸಿದ್ದೀನಿ. ಅಕ್ಟೋಬರ್ 15 ರಂದು ಶೋಕಾಸ್ ನೋಟಿಸ್ ಗೆ ಉತ್ತರಿಸಿದ್ದೇನೆ. ಸವಿಸ್ತಾರವಾಗಿ ನೊಟೀಸ್ ಗೆ ಉತ್ತರಿಸಿದ್ದೇನೆ ಎಂದಿದ್ದಾರೆ.

6. ಬಾಲಿವುಡ್ ಸ್ಟಾರ್ಸ್- ಮೋದಿ ಭೇಟಿ; ಪ್ರವಾಸೋದ್ಯಮ ಪ್ರೋತ್ಸಾಹಿಸಲು ಮನವಿ ಮಾಡಿದ ಪ್ರಧಾನಿ!


ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಮತ್ತಷ್ಟುಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್‌ ಖಾನ್‌, ಅಮೀರ್‌ ಖಾನ್‌ ಸೇರಿದಂತೆ ಬಾಲಿವುಡ್‌ ನಟ- ನಟಿಯರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ.

7. ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!


ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟು ಶಾರ್ಪ್ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

8. ನಾನು ಮತ್ತು ನಿರ್ಮಲಾ ಸಹಪಾಠಿಗಳು: ಅಭಿಜಿತ್ ಬ್ಯಾನರ್ಜಿ!


ಜೆಎನ್‌ಯುನ ತಮ್ಮ ವಿದ್ಯಾರ್ಥಿ ದಿನಗಳನ್ನು ಮೆಲಕು ಹಾಕಿರುವ ಅಭಿಜಿತ್ ಬ್ಯಾನರ್ಜಿ, ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಹಪಾಠಿ ಎಂದು ಹೇಳಿದ್ಧಾರೆ. ನಾನು ಮತ್ತು  ನಿರ್ಮಲಾ ಸಮಲಕಾಲೀನರಾಗಿದ್ಉ, ಹಲವು ವಿಷಯಗಳಲ್ಲಿ ನಾವು ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾಗಿ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

9. ಬಿಗ್ ಬಾಸ್ ಮನೆಯಿಂದ ಚೈತ್ರಾ ಕೊಟ್ಟೂರು ಔಟ್? ಶೈನ್ ಶೆಟ್ಟಿ ಒಂಟಿಯಾದ್ರಾ?


ನಟಿ, ಬರಹಗಾರ್ತಿ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೈತ್ರಾ ಕುಟ್ಟೂರ್‌ ಬಿಗ್‌ ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ. ಶೈನ್ ಶೆಟ್ಟಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚೈತ್ರಾ ಯಾರಿವರು? ಇವರ ಬಗ್ಗೆ ಕಿರು ಪರಿಚಯ.

10. 'ಅಯ್ಯಯ್ಯೋ' ತುಂಬಿದ ಸಭೆಯಲ್ಲಿ ಉದುರಿತು ವಿಶ್ವನಾಥ್ ಪ್ಯಾಂಟ್!


ವಿಶ್ವಾಸಿಗಳ ಚಿಂತನ ಸಭೆಯಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್  ಪ್ಯಾಂಟ್ ಕಳಚಿ ಭಾರೀ ಮುಜುಗರಕ್ಕೊಳಗಾದ ಘಟನೆ ನಡೆದಿದೆ. ಮೈಸೂರಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮಾತನಾಡುತ್ತಿರುವಾಗಲೇ ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ಯಾಂಟ್ ಜಾರಿ ಬಿದ್ದಿದೆ. ಅಯ್ಯಯ್ಯೋ.. ಎಂದು ಅವಸರದಿಂದ ಪ್ಯಾಂಟ್ ಹಾಕಿಕೊಳ್ಳುವಾಗ ಆಪ್ತ ಸಹಾಯಕ ಎಚ್.ವಿಶ್ವನಾಥ್ ಗೆ ಸಹಾಯ ಮಾಡಿದ್ದಾರೆ.