ಬೆಂಗಳೂರು[ಅ.20]: ಭಾರತ ಕ್ರಿಕೆಟ್ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ಇಂದು 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ 2 ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್’ಮನ್ ಎನಿಸಿರುವ ಸೆಹ್ವಾಗ್’ಗೆ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಸುರಿಮಳೆಯೇ ಹರಿದು ಬರುತ್ತಿದೆ.

ರಾಂಚಿ ಟೆಸ್ಟ್: ಟೀಂ ಇಂಡಿಯಾ ಡಿಕ್ಲೇರ್ @497/9

ತಮ್ಮ ನಿರ್ಭಯ ಬ್ಯಾಟಿಂಗ್ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿ ಬೆಳೆದು ನಿಂತ ಸೆಹ್ವಾಗ್, ಎದುರಾಳಿ ತಂಡದ ಬೌಲರ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. 14 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಸೆಹ್ವಾಗ್ ಹಲವಾರು ಸ್ಮರಣೀಯ ಇನಿಂಗ್ಸ್’ಗಳನ್ನು ಕಟ್ಟಿದ್ದಾರೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ಮುಲ್ತಾನ್ ಟೆಸ್ಟ್ ನಲ್ಲಿ ಬಾರಿಸಿದ ಚೊಚ್ಚಲ ತ್ರಿಶತಕ, ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಬಾರಿಸಿದ[319] ಎರಡನೇ ತ್ರಿಶತಕ, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ ಬಾರಿಸಿದ ದ್ವಿಶತಕ[219] ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೆಹ್ವಾಗ್ ಬಾರಿಸಿದ ಸಿಡಿಲಬ್ಬರ ಶತಕ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 

ರಾಂಚಿ ಟೆಸ್ಟ್: ಸಿಕ್ಸರ್ ಮೂಲಕವೇ ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ

ವಿರೇಂದ್ರ ಸೆಹ್ವಾಗ್ 104 ಟೆಸ್ಟ್ ಪಂದ್ಯಗಳಲ್ಲಿ 23 ಶತಕ ಹಾಗೂ 32 ಅರ್ಧಶತಕಗಳ ನೆರವಿನಿಂದ 8,586 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 251 ಪಂದ್ಯಗಳನ್ನಾಡಿ 15 ಶತಕ ಹಾಗೂ 38 ಅರ್ಧಶತಕಗಳ ನೆರವಿನಿಂದ 8,273 ರನ್ ಬಾರಿಸಿದ್ದಾರೆ. ಇನ್ನು 19 ಟಿ20 ಪಂದ್ಯಗಳಿಂದ 394 ರನ್ ಬಾರಿಸಿದ್ದಾರೆ. ವಿರೇಂದ್ರ ಸೆಹ್ವಾಗ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. 

ಸೆಹ್ವಾಗ್ ಹುಟ್ಟುಹಬ್ಬಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಶುಭ ಕೋರಿದ್ದಾರೆ.