ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟುಶಾಪ್‌ರ್‍ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

ಈ ನಾಲ್ಕು ವಿಧದ ಡೆಂಗ್ಯೂ ಬಗ್ಗೆ ನಿಮಗೆ ತಿಳಿದಿರಲಿ!

12,000 ರೋಗಿಗಳನ್ನು ಎಂಆರ್‌ಐ ಪರೀಕ್ಷೆಗೆ ಒಳಪಡಿಸಿದಾಗ ಮಕ್ಕಳನ್ನು ಹೊಂದಿರದವರಿಗಿಂತ, ಮಕ್ಕಳನ್ನು ಹಡೆದವರ ಮೆದುಳು ಹೆಚ್ಚು ಕ್ರಿಯಾಶೀಲವಾಗಿಯೂ, ಯಂಗ್‌ ಆಗಿಯೂ ಇತ್ತು. ಹಾಗೆಯೇ ಮಧ್ಯ ವಯಸ್ಸಿನ ಮಹಿಳೆಯರು ಗರ್ಭ ಧರಿಸಿದ ಮಕ್ಕಳಾದ ಬಳಿಕ ಅವರ ಮೆದುಳೂ ಕನಿಷ್ಠ 6 ತಿಂಗಳಷ್ಟು ಯಂಗ್‌ ಆಗುತ್ತದೆ, ಹಾಗೆಯೇ ಹೆಚ್ಚು ಮಕ್ಕಳನ್ನು ಪಡೆದವರ ಮೆದುಳು 5 ತಿಂಗಳಿನಷ್ಟು ಯಂಗ್‌ ಆಗುತ್ತದೆ.

ಗರ್ಭಾವಸ್ಥೆವಲ್ಲಿ ಈಸ್ಟೊ್ರೕಜನ್‌ ಮತ್ತು ಹಾರ್ಮೋನುಗಳು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಯಾಗುವುದರಿಂದ ಮೆದುಳಿನಲ್ಲಿ ಈ ಮಟ್ಟಿನ ಬದಲಾವಣೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅಥವಾ ಆ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಮಗು ಹುಟ್ಟಿದ ನಂತರದಲ್ಲಿ ತಾಯಂದಿರ ಮೆದುಳು ಹೆಚ್ಚು ಶಾಪ್‌ರ್‍ ಆಗುತ್ತದಂತೆ.