Asianet Suvarna News Asianet Suvarna News

ನಾನು ಮತ್ತು ನಿರ್ಮಲಾ ಸಹಪಾಠಿಗಳು: ಅಭಿಜಿತ್ ಬ್ಯಾನರ್ಜಿ!

2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಅಭಿಜಿತ್ ಬ್ಯಾನರ್ಜಿ| ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞಅಭಿಜಿತ್ ಬ್ಯಾನರ್ಜಿ| ಜೆಎನ್‌ಯುನ ತಮ್ಮ ವಿದ್ಯಾರ್ಥಿ ದಿನಗಳನ್ನು ಮೆಲಕು ಹಾಕಿದ ಅಭಿಜಿತ್ ಬ್ಯಾನರ್ಜಿ| ನಿರ್ಮಲಾ ಸೀತಾರಾಮನ್ ಹಾಗೂ ತಾವು ಸಹಪಾಠಿ ಎಂದ ಅಭಿಜಿತ್| ನಿರ್ಮಲಾ ಹಾಗೂ ತಮ್ಮ ನಡುವೆ ಒಮ್ಮತದ ಅಭಿಪ್ರಾಯವಿತ್ತು ಎಂದ ಅಭಿಜಿತ್| ಆರ್ಥಕ ಹಿಂಜರಿಕೆಗೆ ಮೋದಿ ಸರ್ಕಾರ ಟೀಕಿಸಿದ್ದ ನೊಬೆಲ್ ಪುರಸ್ಕೃತ|

Abhijit Banerjee Says Nirmala Sitharaman Was My Contemporary In JNU
Author
Bengaluru, First Published Oct 20, 2019, 4:16 PM IST

ನವದೆಹಲಿ(ಅ.20): 2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸಿ ಸುದ್ದಿಯಾಗಿದ್ದಾರೆ.

ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ 

ಇದೀಗ ಜೆಎನ್‌ಯುನ ತಮ್ಮ ವಿದ್ಯಾರ್ಥಿ ದಿನಗಳನ್ನು ಮೆಲಕು ಹಾಕಿರುವ ಅಭಿಜಿತ್ ಬ್ಯಾನರ್ಜಿ, ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಹಪಾಠಿ ಎಂದು ಹೇಳಿದ್ದಾರೆ.

ನಾನು ಮತ್ತು  ನಿರ್ಮಲಾ ಸಮಲಕಾಲೀನರಾಗಿದ್ದು, ಹಲವು ವಿಷಯಗಳಲ್ಲಿ ನಾವು ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾಗಿ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ದುರ್ಬಲ ಆರ್ಥಿಕತೆ ಸುಧಾರಿಸುವುದಿಲ್ಲ: ನೊಬೆಲ್ ಪುರಸ್ಕೃತನ ಮಾತು ಕೇಳೊರಿಲ್ವಾ?

ವಿವಿಯಲ್ಲಿ ಅಧ್ಯಯನ ನಡೆಸುತ್ತಿದ್ದಾಗ ನಿರ್ಮಲಾ ಸೀತಾರಾಮನ್ ಹಾಗೂ ತಮ್ಮ ನಡುವೆ ಸ್ನೇಹವಿತ್ತು ಎಂದಿರುವ ಅಭಿಜಿತ್, ಹಲವು ವಿಷಯಗಳಲ್ಲಿ ನಮ್ಮಿಬ್ಬರ ನಡುವೆ ಒಮ್ಮತದ ಅಭಿಪ್ರಾಯವಿತ್ತು ಎಂದು ಹೇಳಿದ್ದಾರೆ.

ಭಾರತದ ಆರ್ಥಿಕ ಪರಿಸ್ಥಿತಿ ತೀವ್ರ ಕಷ್ಟದಲ್ಲಿದೆ ಎಂದು ಹೇಳಿರುವ ಅಭಿಜಿತ್ ಬ್ಯಾನರ್ಜಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ. 

ಬಡ ಎಕನಾಮಿಕ್ಸ್‌ಗೆ ಶ್ರೀಮಂತ ಪ್ರಶಸ್ತಿ; ಭಾರತೀಯ ಸಂಜಾತನಿಗೆ ನೊಬೆಲ್ ಗರಿ!

ಭಾರತದ ಆರ್ಥಿಕತೆ ಬಗ್ಗೆ ಇತ್ತೀಚೆಗೆ ಬ್ಯಾನರ್ಜಿ ನೀಡಿದ ಹೇಳಿಕೆ, ಆಡಳಿತಾರೂಢ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದನ್ನಿ ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios