ಶೋಕಾಸ್ ನೋಟಿಸ್‌ಗೆ ಉತ್ತರಿಸಿ ಎಂದು ಯತ್ನಾಳ್‌ಗೆ ಸಲಹೆ ಕೊಟ್ಟವರು ಯಾರು?
ಶೋಕಾಸ್ ನೊಟೀಸ್ ಗೆ ಉತ್ತರ ನೀಡಿದ ಬಸಗೌಡ ಪಾಟೀಲ್ ಯತ್ನಾಳ್/ ಉತ್ತರ ನೀಡಿದ್ದಕ್ಕೆ ಕಾರಣ ಕೊಟ್ಟ ಬಿಜೆಪಿಯ ಹಿರಿಯ ನಾಯಕ/ ನಾನು ಜನರ ಪರವಾಗಿ ಮಾತನಾಡಿದ್ದೇನೆ/ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲಿದೆ.
ವಿಜಯಪುರ[ಅ. 20] ನಾನು ಶೋಕಾಸ್ ನೋಟಿಸ್ ಗೆ ಯಾವ ಕಾರಣಕ್ಕೆ ಉತ್ತರ ನೀಡಿದ್ದೇನೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ, ಮಠಾಧೀಶರು ಹಾಗೂ ಹಿತೈಷಿಗಳ ಸಲಹೆ ಮೇರೆಗೆ ನೋಟಿಸ್ ಗೆ ಉತ್ತರಿಸಿದ್ದೀನಿ. ಅಕ್ಟೋಬರ್ 15 ರಂದು ಶೋಕಾಸ್ ನೋಟಿಸ್ ಗೆ ಉತ್ತರಿಸಿದ್ದೇನೆ. ಸವಿಸ್ತಾರವಾಗಿ ನೊಟೀಸ್ ಗೆ ಉತ್ತರಿಸಿದ್ದೇನೆ ಎಂದಿದ್ದಾರೆ.
ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದಿದ್ದಕ್ಕೆ ಯತ್ನಾಳ್‌ಗೆ ಸಂಕಷ್ಟ
ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ತಿಳಿಸಿದ್ದೇನೆ. ಕರ್ನಾಟಕ ನಾಡಿನ ಧ್ವನಿಯಾಗಿ ಮಾತನಾಡಿದ್ದೇನೆ. ಪ್ರಧಾನಿ ಮೋದಿಯವರಲ್ಲಿ ಸುಭಾಷ್ ಚಂದ್ರಬೋಸ ಅವರನ್ನು, ಅಮೀತ್ ಶಾ ಅವರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರನ್ನು ಕಂಡಿರುವುದಾಗಿ ತಿಳಿಸಿದ್ದೇನೆ ಎಂದಿದ್ದಾರೆ.
ಪೇಜಾವರ ಶ್ರೀಗಳು, ಶ್ರೀಶೈಲ ಜಗದ್ಗುರುಗಳು ಆಶೀರ್ವಾದ ನನ್ನ ಮೇಲೆ ಇದೆ. ಕೂಡಲಸಂಗಮ ಶ್ರೀ, ಮೂರು ಸಾವಿರ ಮಠದ ಶ್ರೀಗಳು ಪರವಾಗಿ ನಿಂತಿದ್ದಾರೆ. ಕನ್ನಡ ನಾಡಿನ ಸಂತ್ರಸ್ತ ಪರ ನಿಂತು ಮಾತನಾಡಿದ ನನ್ನ ಬೆನ್ನಿಗೆ ನಿಂತಿರುವುದಾಗಿ ಸ್ತಿವಾಮೀಜಿಗಳು ನಿಂತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ನೋಟಿಸ್ ಗೆ ಯತ್ನಾಳ್ ಡೋಂಟ್ ಕೇರ್: ಕನ್ನಡಿಗರಿಗಾಗಿ ಧ್ವನಿ ಎತ್ತುತ್ತೇನೆ ಎಂದ ಬಹದ್ದೂರ್ ಗಂಡು
ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಉತ್ತರ ಕೇಳಿ ನೋಟಿಸ್ ನೀಡಿತ್ತು.
ಉತ್ತರ ಕರ್ನಾಟಕ ನೆರೆ ಪರಿಹಾರ ವಿಳಂಬಕ್ಕೆ ರಾಜ್ಯದ ಸ್ವಪಕ್ಷದ ಸಂಸದರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದ್ರಿಂದ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿ 10 ದಿನದೊಳಗೆ ಉತ್ತರಿಸುವಂತೆ ಹೇಳಿತ್ತು.