ಶ್ರೀನಗರ[ಅ.20]: ಭಾರತೀಯ ಸೇನೆಯು ನೀಲಮ್ ಸೆಕ್ಟರ್ನಲ್ಲಿದ್ದ 4 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಭಾರತೀಯ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದೆ. ಈ ಕಾರ್ಯಾಚರಣೆಯಲ್ಲಿ 4 ರಿಂದ ಪಾಕ್ ಸೈನಿಕರು ಮತ್ತು ಉಗ್ರರು ಹತರಾಗಿದ್ದು, ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಈ ಕಾರ್ಯಾಚರಣೆಗೆ ಭಾರತೀಯ ಸೇನೆಯು ಆರ್ಟಿಲರಿ ಗನ್ ಬಳಸಲಾಗಿದೆ. ದಾಳಿಯಲ್ಲಿ 4 ರಿಂದ 5 ಕ್ಯಾಂಪ್ ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇಈ ಕ್ಯಾಂಪ್ ಗಳಿಂದ ನಿರಂತರವಾಗಿ ಉಗ್ರರು ಭಾರತದ ಗಡಿ ನುಸುಳುತ್ತಿದ್ದರೆನ್ನಲಾಗಿದೆ. 

ಇನ್ನು ಈ ದಾಳಿಗೂ ಮುನ್ನ ಪಾಕಿಸ್ತಾನ ತಂಗಧಾರ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಈ ವೇಳೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಓರ್ವ ನಾಗರಿಕನೂ ಕೊನೆಯುಸಿರೆಳೆದಿದ್ದು, ಇಬ್ಬರು ಗಾಯಗೊಂಡಿದ್ದರು.