ಮನೆ ಬಾಗಿಲಿಗೆ ಬರುತ್ತೆ ಲಿಕ್ಕರ್, ಧೋನಿ-ಕೊಹ್ಲಿ ವಿರುದ್ಧ ಗರಂ ಆದ ಆಲ್ರೌಂಡರ್; ಏ.01ರ ಟಾಪ್ 10 ಸುದ್ದಿ!

ದೇಶದಲ್ಲಿ ಕೊರೋನಾಗೆ ಇಂದು ಮತ್ತೆ 3 ಬಲಿಯಾಗಿದೆ. ಇನ್ನು ಹೊಸದಾಗಿ 200ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ಜನರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅನ್ನೋದು ಬಹಿರಂಗವಾಗಿದೆ. ಲಾಕ್‌ಡೌನ್ ಆದೇಶವಿದ್ದರೂ ದೆಹಲಿ ಮಸೀದಿಯಲ್ಲಿ ಧಾರ್ಮಿಕ ಸಭೆಸೇರಿದ ಹಲವರಿಗೆ ಕೊರೋನಾ ದೃಢವಾಗಿದೆ. ಇದು ಆತಂಕ ಹೆಚ್ಚಿಸಿದೆ. ಕೊರೋನಾ ತಡೆಗಟ್ಟುಲು ಮಾಡಿರುವ ಲಾಕ್‌ಡೌನ್‌ನಿಂದ ಮದ್ಯ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಮನೆ ಬಾಗಿಲಿಗೆ ಮದ್ಯ ವಿತರಿಸಲು ಮುಂದಾಗಿದೆ. ಧೋನಿ, ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್ ಸಿಂಗ್, ರಾಮಾಯಣ ಸೀರಿಯಲ್ ನೋಡಿದ ಶ್ರೀ ರಾಮ ಸೇರಿದಂತೆ ಏಪ್ರಿಲ್ 1 ರ ಟಾಪ್ 10 ಸುದ್ದಿ ಇಲ್ಲಿವೆ. 

India Lock down to Yuvraj singh top 10 news of April 01

ದೇಶಾದ್ಯಂತ ಲಾಕ್‌ಡೌನ್ ಹೇರಿರುವಾಗ ದೆಹಲಿಯಲ್ಲಿ ಧಾರ್ಮಿಕ ಸಭೆ; ಬೇಕಿತ್ತಾ ಇವೆಲ್ಲಾ?

India Lock down to Yuvraj singh top 10 news of April 01

ಕೊರೋನಾ ನಿಗ್ರಹಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಿರುವಾಗಲೇ, ದೆಹಲಿಯ ಮಸೀದಿಯೊಂದು ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯೊಂದು ಇಡೀ ದೇಶಕ್ಕೆ ವ್ಯಾಪಕವಾಗಿ ಕೊರೋನಾ ಹಬ್ಬಿಸಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. 


ಕೊರೋನಾ ತಾಂಡವ: ಯಾವ ಮಾಸ್ಕ್‌ ಎಷ್ಟು ಸೇಫ್‌? ಇಲ್ಲಿದೆ ವಿವರ 

India Lock down to Yuvraj singh top 10 news of April 01

ಚೀನಾದ ವುಹಾನ್‌ನಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ವಿಶ್ವದ ಇನ್ನೂರು ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಇಟಲಿ, ಸ್ಪೇನ್, ಅಮೆರಿಕಾ ಹಾಗೂ ಇರಾನ್‌ನಲ್ಲಿ ಕೊರೋನಾ ತಾಂಡವಕ್ಕೆ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗಿರುವಾಗ ಕೊರೋನಾದಿಂದ ರಕ್ಷಿಸಿಕೊಳ್ಳಲು ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಹಾಗಾದ್ರೆ ಯಾವ ಮಾಸ್ಕ್ ಬೆಸ್ಟ್? ಯಾವುದನ್ನು ಮುಖಕ್ಕೆ ಹಾಕಿಕೊಂಡರೆ ಕಡಿಮೆ ಅಪಾಯ? ಇಲ್ಲಿದೆ ಸಂಪೂರ್ಣ ವಿವರ


ರೋಗಿಗಳ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸರ್ಕಾರ ನಿರ್ಧಾರ!...

India Lock down to Yuvraj singh top 10 news of April 01

ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ಮೇಘಾಲಯ ಸರ್ಕಾರ ಮನೆ ಬಾಗಿಲಿಗೇ ಮಧ್ಯ ಪೂರೈಕೆಗೆ ಮುಂದಾಗಿದೆ.

ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!...

India Lock down to Yuvraj singh top 10 news of April 01

ಜಗತ್ತಿನಾದ್ಯಂತ ಭಾರೀ ನಡುಕ ಹುಟ್ಟಿಸಿರುವ ಕೊರೋನಾ ದೇಶದ ವಿವಿಧ ಭಾಗಗಳಲ್ಲಿ ಮಂಗಳವಾರ ಮೂವರನ್ನು ಬಲಿಪಡೆದಿದೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಮಾರಿಗೆ ಬಲಿಯಾದವರ ಸಂಖ್ಯೆ 42 ಆಗಿದೆ. ಮಂಗಳವಾರ ಪಶ್ಚಿಮ ಬಂಗಾಳ, ಪಂಜಾಬ್‌ ಹಾಗೂ ಕೇರಳದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!...

India Lock down to Yuvraj singh top 10 news of April 01

ಯುವರಾಜ್ ಸಿಂಗ್ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ. ಆದರೆ ಯುವಿ ವಿದಾಯ ಯಾವ ಅಭಿಮಾನಿಯೂ ಸಹಿಸಲಾರ. ಟೀಂ ಇಂಡಿಯಾ, ಬಿಸಿಸಿಐ, ಆಯ್ಕೆ ಸಮಿತಿಯ ನಿರ್ಲಕ್ಷ್ಯದಿಂದ ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಇದೀಗ ಮೊದಲ ಬಾರಿಗೆ ನಾಯಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಯುವಿ ಮಾತುಗಳು, ಯುವಿ ತಂದೆ ಯೋಗರಾಜ್ ಮಾಡುತ್ತಿದ್ದ ಆರೋಪಕ್ಕೂ ಹೋಲಿಕೆ ಕಂಡುಬರುತ್ತಿದೆ.

ಸೆಲೆಬ್ರಿಟಿಗಳ ಜತೆ ಫ್ಲರ್ಟ್‌ ಮಾಡೋದು ಇಷ್ಟವಿಲ್ಲ: ಸುಷ್ಮಾ ರಾವ್‌...

India Lock down to Yuvraj singh top 10 news of April 01

ನನ್ನದೇನಿದ್ದರೂ ಡೀಸೆಂಟ್‌ ನಿರೂಪಣೆ. ಹಾಸ್ಯ ಇರುತ್ತೆ. ಆದರೆ ಅತಿಥಿಗಳನ್ನು ಫ್ಲರ್ಟ್‌ ಮಾಡುತ್ತಾ, ಕೆಟ್ಟಕೆಟ್ಟಜೋಕ್‌ ಮಾಡೋದು ನನ್ನ ಸ್ಟೈಲ್‌ ಅಲ್ಲ’ ಅನ್ನುವ ಸುಷ್ಮಾಗೆ, ಆ್ಯಂಕರಿಂಗ್‌ ನಲ್ಲಿ ಸಹಜವಾಗಿ ಇರೋದಿಷ್ಟ. ಸಹಜತೆ ಮೂಲಕವೇ ಜನರನ್ನು ರೀಚ್‌ ಆಗೋದಿಷ್ಟ. ಅದರಲ್ಲಿ ಇಲ್ಲದ ಗಿಮಿಕ್‌ ಮಾಡೋದು ಅಷ್ಟಾಗಿ ಹಿಡಿಸಲ್ಲ.

ಫ್ಯಾಮಿಲಿ ಜೊತೆ ಸೀರಿಯಲ್ ನೋಡಿದ 'ರಾಮಾಯಣ'ದ ರಾಮ..!

India Lock down to Yuvraj singh top 10 news of April 01

ದೂರದರ್ಶನ ವೀಕ್ಷಕರ ಮನ ಗೆದ್ದಿದ್ದ ರಾಮಾಯಣದ ಶ್ರೀರಾಮ ಇದೀಗ ಕುಟುಂಬ ಸಮೇತ ಸೀರಿಯಲ್ ನೋಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

India Lock down to Yuvraj singh top 10 news of April 01

ಕೊರೋನಾ ವೈರಸ್‌ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.

ಕೊರೋನಾ ಎಫೆಕ್ಟ್: ಸದ್ಯದಲ್ಲೇ ತಲೆ ಬೋಳಿಸಿಕೊಳ್ತಾರಾ ವಿರಾಟ್ ಕೊಹ್ಲಿ..?

India Lock down to Yuvraj singh top 10 news of April 01

ವಿರಾಟ್ ಕೊಹ್ಲಿ, ಕೊರೋನಾಗಾಗಿ ಇದೀಗ ತಲೆ ಬೋಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸ್ಟೈಲೀಷ್ ಕಿಂಗ್ ವಿರಾಟ್ ಕೊಹ್ಲಿ ತಲೆಗೂದಲು ಹಾಗೂ ಗಡ್ಡದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇಟ್ಟುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವ ವಿರಾಟ್ ಕೊಹ್ಲಿ ತಲೆ ಬೋಳಿಸಿಕೊಳ್ಳುತ್ತಾರಾ ಎಂದರೆ ನಿಜಕ್ಕೂ ಅಚ್ಚರಿ ಆಗಬಹುದು.

ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ...

India Lock down to Yuvraj singh top 10 news of April 01

ಕೊರೋನಾ ಮಾಹಾಮಾರಿ ಬಂದು ಬಡ, ನಿರ್ಗತಿಕರ ಅನ್ನ ಕಸಿದುರುವುದ ಮಾತ್ರವಲ್ಲದೇ ರೈತರ ಬದುಕಿನ ಮೇಲೆ ಬರೆ ಹಾಕಲಾರಂಬಿಸಿದೆ. ಅನ್ನದಾತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಲ್ಲದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸಭೆ ಕರೆದು ರೈತರಿಗೆ ಅನುಕೂಲವಾಗುವಂತ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.

Latest Videos
Follow Us:
Download App:
  • android
  • ios