ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!
ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ | ಬಹುತೇಕ ಬ್ಯಾಂಕ್‌ಗಳಿಂದ ಗ್ರಾಹಕರಿಗೆ ಮಾಹಿತಿ ರವಾನೆ | ಮುಂದೂಡಿಕೆ ಅವಧಿಗೂ ಬಡ್ಡಿ ಉಂಟು
ಮುಂಬೈ (ಏ. 01): ಕೊರೋನಾ ವೈರಸ್ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.
ಹೀಗಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಗ್ರಾಹಕರು ಮುಂದಿನ ಮೂರು ತಿಂಗಳ ಕಾಲ ಯಾವುದೇ ರೀತಿಯ ಇಎಂಐ ಕಂತುಗಳನ್ನು ಕಟ್ಟಬೇಕಿಲ್ಲ. ಆದರೆ, ಇಎಂಐ ಪಾವತಿಗೆ 3 ತಿಂಗಳು ಕಾಲಾವಕಾಶ ನೀಡಲಾಗಿದ್ದರೂ, ಆ 3 ತಿಂಗಳ ಅವಧಿಗೆ ಗ್ರಾಹಕರು ಬಡ್ಡಿ ಪಾವತಿಸಬೇಕಾಗುತ್ತದೆ.
EMI ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೂ ವ್ಯಾಲಿಡಿಟಿ ರಿಲೀಫ್?
ಇಎಂಐ ಪಾವತಿ ಸಮಯವನ್ನು 3 ತಿಂಗಳು ಮುಂದೂಡುವ ಕುರಿತು ಇತ್ತೀಚೆಗೆ ಆರ್‌ಬಿಐ ಕೈಗೊಂಡಿದ್ದ ನಿರ್ಣಯಕ್ಕೆ ಬಹುತೇಕ ಬ್ಯಾಂಕ್‌ಗಳು ಸೂಕ್ತವಾಗಿ ಸ್ಪಂದಿಸಿದ್ದು, ಅವಧಿ ಮುಂದೂಡಿದ ಕುರಿತು ಗ್ರಾಹಕರಿಗೆ ಮಂಗಳವಾರ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಿವೆ.
ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಇಂಡಿಯನ್ ಬ್ಯಾಂಕ್‌ಗಳು ಸಾಲಗಾರರ ಇಎಂಐಗಳನ್ನು 3 ತಿಂಗಳು ಮುಂದೂಡಿವೆ. ಮಾ.1 ರಿಂದ ಆರಂಭವಾಗಿ ಮೇ 31 ರ ಅವಧಿಯಲ್ಲಿ ಪಾವತಿಸಬೇಕಾಗುವ ಇಎಂಐಗಳಿಗೆ ಇದು ಅನ್ವಯವಾಗುತ್ತದೆ.
ಬ್ಯಾಂಕ್‌ಗಳ ಸಾಲ ಪಾವತಿ ನೆನಪಿನ ಸಂದೇಶಗಳಲ್ಲಿ ಗ್ರಾಹಕರಲ್ಲಿ ಗೊಂದಲ
ಎಲ್ಲ ರೀತಿಯ ಸಾಲಗಳ ಮರುಪಾವತಿಯ 3 ತಿಂಗಳ ಕಂತುಗಳನ್ನು ಮುಂದೂಡಬೇಕೆಂಬ ಆರ್‌ಬಿಐ ಸೂಚನೆ ಹೊರತಾಗಿಯೂ, ಮಂಗಳವಾರ ಬೆಳಗ್ಗೆ ಸಾಲಗಾರರಿಗೆ ಇಎಂಐಗೆ ಅಗತ್ಯವಿರುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವಂತೆ ನೋಡಿಕೊಳ್ಳಿ ಎಂಬ ನೆನಪಿನ ಸಂದೇಶಗಳು ರವಾನೆಯಾದವು.
ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?
ಇದರಿಂದಾಗಿ ಬ್ಯಾಂಕ್ ಸಾಲಗಾರರಲ್ಲಿ ಬ್ಯಾಂಕ್ ಕಂತು ಕಟ್ಟಲೇಬೇಕೇ ಅಥವಾ 3 ತಿಂಗಳು ಮುಂದೂಡಬಹುದೇ ಎಂಬ ಗೊಂದಲಗಳು ಹುಟ್ಟಿದ್ದವು. ಆದರೆ, ಸಂಜೆ ವೇಳೆಗೆ ಬ್ಯಾಂಕ್‌ಗಳೇ 3 ತಿಂಗಳ ಸಾಲದ ಕಂತುಗಳನ್ನು ಕಟ್ಟಬೇಕಿಲ್ಲ ಎಂದು ಹೇಳಿವೆ.