ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ
ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಇಂದು (ಬುಧವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರುಗಳು ಜೊತೆಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
15 ಕೆಜಿಗೆ 10 ರು, ಟೊಮೆಟೋ ರಸ್ತೆಗೆ ಸುರಿದ ರೈತರು
ಬಳಿಕ ಸಿಎಂ ಬಿಎಸ್‌ವೈ ಸುದ್ದಿಗಾರರೊಂದಿಗೆ ಮಾತನಾಡಿದ ಸಭೆಯ ತೆಗೆದುಕೊಂಡ ತೀರ್ಮಾನಗಳನ್ನು ತಿಳಿಸಿದರು.
* ಕಳೆದ ಒಂದು ವಾರದಿಂದ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತವಾಗಿತ್ತು. ಇದೀಗ ವಸ್ತುಗಳ ಸರಬರಾಜನ್ನು ಮುಂದುವರೆಸಲು ಸೂಚನೆ ನೀಡಲಾಗಿದೆ.
* ಹಣ್ಣು-ತರಕಾರಿ ಸರಬರಾಜಿಗೆ ಸಮಸ್ಯೆ ಆಗದಂತೆ ಪೊಲೀಸರಿಗೆ ತಿಳಿಸಲಾಗಿದೆ. ಇನ್ನೂ ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ.
* ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಆದರೆ, ಜನ ಒಮ್ಮೆಲೆ ಹೆಚ್ಚು ಸಂಗ್ರಹಿಸುವ ಅಗತ್ಯ ಇಲ್ಲ. ವಸ್ತುಗಳ ಖರೀದಿಯ ನೆಪದಲ್ಲಿ ಜನ ಗುಂಪುಗೂಡುವಂತಿಲ್ಲ. ಸಾಮಾಜಿಕ ಅಂತರದಿಂದ ವಸ್ತುಗಳನ್ನು ಖರೀದಿ ಮಾಡಬೇಕು
* ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ. ಸರಕು ಸಾಗಾಣೆ ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ತಿಳಿಸಲಾಗಿದೆ.
* ಕೆಎಂಎಫ್‌ನಿಂದ ಬರುವ ಹೆಚ್ಚುವರಿ ಹಾಲನ್ನು ಖರೀದಿಸಿ ಕೊಳಗೇರಿ ಪ್ರದೇಶಗಳಲ್ಲಿ ಉಚಿತವಾಗಿ ಹಾಲು ವಿತರಣೆ ಮಾಡಲೂ ತೀರ್ಮಾನ ತೆಗೆದುಕೊಳ್ಳಲಾಗಿದೆ.
* ಅಕ್ಕಿ ಮಿಲ್, ದಾಲ್ ಮಿಲ್ ತೆರೆಯಲು ಸೂಚಿಸಲಾಗಿದೆ. ರೇಷ್ಮೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಬೆಳೆ ನಷ್ಟವಾದ ಕಾರಣ ಆತ್ಮಹತ್ಯೆಗೆ ಶರಣಾದ (ಕಲಬುರಗಿ) ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದರು.