ಶಿಲ್ಲಾಂಗ್‌(ಏ.01): ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ಮೇಘಾಲಯ ಸರ್ಕಾರ ಮನೆ ಬಾಗಿಲಿಗೇ ಮಧ್ಯ ಪೂರೈಕೆಗೆ ಮುಂದಾಗಿದೆ.

21ವರ್ಷಕ್ಕಿಂತ ಮೇಲ್ಪಟ್ಟ, ವೈದ್ಯಕೀಯ ಕಾರಣಗಳಿದ್ದವರಿಗೆ ಮಾತ್ರ ಈ ಸೌಲಭ್ಯ ಇದ್ದು, ವೈದ್ಯರು ಬರೆದು ಕೊಟ್ಟಿರುವ ಚೀಟಿ ಹೋಂದಿರುವುದು ಕಡ್ಡಾಯ.

ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ!

ಇದಕ್ಕಾಗಿಯೇ ತೆರೆಯಲಾಗಿರುವ ಆನ್‌ಲೈನ್‌ ಸೈಟ್‌ನಲ್ಲಿ ವೈದ್ಯಕೀಯ ಚೀಟಿಯನ್ನು ಅಪ್ಲೋಡ್‌ ಮಾಡಬೇಕು. ಬಳಿಕ ಆಯಾ ಜಿಲ್ಲೆಯ ಉಗ್ರಾಣದಿಂದಲೇ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.