ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!
ಯುವರಾಜ್ ಸಿಂಗ್ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ. ಆದರೆ ಯುವಿ ವಿದಾಯ ಯಾವ ಅಭಿಮಾನಿಯೂ ಸಹಿಸಲಾರ. ಟೀಂ ಇಂಡಿಯಾ, ಬಿಸಿಸಿಐ, ಆಯ್ಕೆ ಸಮಿತಿಯ ನಿರ್ಲಕ್ಷ್ಯದಿಂದ ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಇದೀಗ ಮೊದಲ ಬಾರಿಗೆ ನಾಯಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಯುವಿ ಮಾತುಗಳು, ಯುವಿ ತಂದೆ ಯೋಗರಾಜ್ ಮಾಡುತ್ತಿದ್ದ ಆರೋಪಕ್ಕೂ ಹೋಲಿಕೆ ಕಂಡುಬರುತ್ತಿದೆ.
ವಿದಾಯದ ಬಳಿಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವ ವಿರುದ್ಧ ಗುಡುಗಿದ ಯುವರಾಜ್ ಸಿಂಗ್
ಧೋನಿ, ಕೊಹ್ಲಿಯಿಂದ ಬೆಂಬಲ ಸಿಗಲಿಲ್ಲ ಎಂದ 2011ರ ವಿಶ್ವಕಪ್ ಹೀರೋ ಯುವಿ
ಸೌರವ್ ಗಂಗೂಲಿ ನಾಯಕತ್ವದಲ್ಲಿ ನನಗೆ ಉತ್ತಮ ಬೆಂಬಲ ಹಾಗು ವೇದಿಕೆ ಸಿಕ್ಕಿತ್ತು ಎಂದ ಯುವರಾಜ್ ಸಿಂಗ್
ಗಂಗೂಲಿ ನೀಡಿಹ ಸಹಕಾರ ಧೋನಿ, ಕೊಹ್ಲಿಯಿಂದ ಸಿಗಲಿಲ್ಲ ಎಂದ ಯುವರಾಜ್ ಸಿಂಗ್
ಗಂಗೂಲಿ ಹಾಗೂ ಧೋನಿ ಉತ್ತಮ ನಾಯಕರು, ಆದರೆ ನನಗೆ ಗಂಗೂಲಿಯೇ ಅಚ್ಚು ಮೆಚ್ಚು ಎಂದು ಪಂಜಾಬ್ ಟೈಗರ್
ಯುವಿ ಟೀಂ ಇಂಡಿಯಾದಲ್ಲಿರುವಾಗಲೇ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು
ಧೋನಿಯಿಂದ ತನ್ನ ಮಗನ ಕರಿಯರ್ ಹಾಳಾಯ್ತು ಎಂದು ಆರೋಪಿಸಿದ್ದ ಯೋಗರಾಜ್ ಸಿಂಗ್
ಯೋಗರಾಜ್ ಹೇಳಿಕೆಗೂ ಇದೀಗ ಯುವರಾಜ್ ಸಿಂಗ್ ಮಾತಿಗೂ ಇದೆ ಸಾಮ್ಯತೆ
2019ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಯವಿ
2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್
ಕೋವಿಡ್19 ಲಾಕ್‌ಡೌನ್‌ನಿಂದ ಸದ್ಯ ಮನೆಯಲ್ಲಿ ಸ್ವಯಂ ದಿಗ್ಬಂಧಕ್ಕೆ ಒಳಗಾಗಿರುವ ಯುವರಾಜ್