ಸೆಲೆಬ್ರಿಟಿಗಳ ಜತೆ ಫ್ಲರ್ಟ್ ಮಾಡೋದು ಇಷ್ಟವಿಲ್ಲ: ಸುಷ್ಮಾ ರಾವ್
ನನ್ನದೇನಿದ್ದರೂ ಡೀಸೆಂಟ್ ನಿರೂಪಣೆ. ಹಾಸ್ಯ ಇರುತ್ತೆ. ಆದರೆ ಅತಿಥಿಗಳನ್ನು ಫ್ಲರ್ಟ್ ಮಾಡುತ್ತಾ, ಕೆಟ್ಟಕೆಟ್ಟಜೋಕ್ ಮಾಡೋದು ನನ್ನ ಸ್ಟೈಲ್ ಅಲ್ಲ’ ಅನ್ನುವ ಸುಷ್ಮಾಗೆ, ಆ್ಯಂಕರಿಂಗ್ ನಲ್ಲಿ ಸಹಜವಾಗಿ ಇರೋದಿಷ್ಟ. ಸಹಜತೆ ಮೂಲಕವೇ ಜನರನ್ನು ರೀಚ್ ಆಗೋದಿಷ್ಟ. ಅದರಲ್ಲಿ ಇಲ್ಲದ ಗಿಮಿಕ್ ಮಾಡೋದು ಅಷ್ಟಾಗಿ ಹಿಡಿಸಲ್ಲ.
ಜೀ ಕನ್ನಡದ ರಿಯಾಲಿಟಿ ಶೋ ‘ಜೀನ್ಸ್’ ನಿರೂಪಕಿ ಸುಷ್ಮಾ ಈಗ ಟಾಪ್ ಆ್ಯಂಕರ್‌ಗಳಲ್ಲಿ ಒಬ್ಬರು. ಆ್ಯಂಕರಿಂಗ್‌ಗೆ ಬರೋದಕ್ಕೂ ಮುಂಚೆ ‘ಗುಪ್ತಗಾಮಿನಿ’ ಭಾವನಾ ಆಗಿಯೋ, ‘ಸೊಸೆ ತಂದ ಸೌಭಾಗ್ಯ’ದ ಮಗಳಾಗಿಯೋ ಜನಕ್ಕೆ ಪರಿಚಿತೆ.
ಸದ್ಯಕ್ಕೀಗ ಫುಲ್ ಟೈಮ್ ಆ್ಯಂಕರಿಂಗೇ ಮಾಡಿದ್ರೆ ಹೇಗೆ ಅಂತ ಯೋಚಿಸುತ್ತಿದ್ದಾರೆ. ಕಾರಣ ಪರ್ಸನಲ್ ಲೈಫ್‌ಗೂ ಸಮಯ ಸಿಗುತ್ತೆ, ಇವರು ಭರತನಾಟ್ಯ ಡ್ಯಾನ್ಸರ್ ಆಗಿರುವ ಕಾರಣ ನೃತ್ಯ ಮುಂದುವರಿಸಲೂ ಅನುಕೂಲ ಅನ್ನುವ ಕಾರಣ.
ಈ ಕಾಲದ ಆ್ಯಂಕರಿಂಗ್ ಸವಾಲು
‘ಟಾಕ್ ಬ್ಯಾಕ್‌ನಲ್ಲಿ ಹಿಂದಿನಿಂದ ಕಮಾಂಡ್ ಕೊಡ್ತಾ ಇರುತ್ತಾರೆ. ಟಾಕ್‌ಬ್ಯಾಕ್ ಅಂದ್ರೆ ಮೈಕ್ರೋಫೋನಲ್ಲಿ ಸ್ಟೇಜ್ ಹಿಂದೆ ಕೂತವರು ಯಾರೋ ಸ್ಕಿ್ರಪ್ಟ್ ಡಿಕ್ಟೇಟ್ ಮಾಡುತ್ತಾ ಇರುತ್ತಾರೆ. ಇನ್ಯಾರೋ ನಿರ್ದೇಶನ ಮಾಡುತ್ತಿರುತ್ತಾರೆ. ಇಷ್ಟನ್ನೂ ಏಕಕಾಲದಲ್ಲಿ ಗ್ರಹಿಸಿ ಮಾತನಾಡಬೇಕು. ರೀ-ಟೇಕ್‌ಗೆ ಇಲ್ಲಿ ಆಸ್ಪದವಿಲ್ಲ. ಇದೇ ಹೊತ್ತಿಗೆ ಸ್ಟೇಜ್‌ನಲ್ಲಿರುವ ಸೆಲೆಬ್ರಿಟಿಗಳನ್ನು ಮಾತಾಡಿಸ್ತಾ, ಸಭಿಕರನ್ನೂ ಶೋದಲ್ಲಿ ಒಳಗೊಳಿಸ್ತಾ ಹೋಗಬೇಕು.
ಬಾಲಿವುಡ್ ನಟ ನಟಿಯರಿಗುಂಟು ಕರಾವಳಿ ಕರ್ನಾಟಕದ ನಂಟು
ಇದೊಂಥರಾ ಹಗ್ಗದ ಮೇಲಿನ ನಡಿಗೆ ಇದ್ದಹಾಗೆ. ಸ್ವಲ್ಪ ಎಡವಟ್ಟಾದ್ರೂ ಹೋಯ್ತು. ಈ ಕಾಲದ ಆ್ಯಂಕರಿಂಗ್‌ಗೆ ಟ್ಯಾಲೆಂಟ್ ಜೊತೆಗೆ ಈ ಥರ ಮ್ಯಾನೇಜ್ ಮಾಡಿಕೊಂಡು ಹೋಗುವ ಸ್ಕಿಲ್ ಸಹ ಬೇಕು’ ಅನ್ನೋದು ಸುಷ್ಮಾ ಅವರ ಅನುಭವದ ಮಾತು.
ಇದಕ್ಕಾಗಿ ಅವರು ಹೋಂವರ್ಕ್ ಮಾಡ್ತಾರೆ. ಮೊದಲೇ ಸ್ಕ್ರಿಪ್ಟ್ ನೋಡ್ಕೊಂಡು ಮನಸ್ಸಿನೊಳಗೇ ಒಂದು ರಿಹರ್ಸಲ್ ಮಾಡುತ್ತಾರೆ. ಇಂಥಾ ಸಿದ್ಧತೆ ಜೊತೆಗೆ ನಿರೂಪಕರಿಗೆ ಡ್ಯಾನ್ಸ್, ಹಾಡು ಗೊತ್ತಿರಬೇಕು. ಕಾಮಿಡಿ ಸೆನ್ಸ್ ಇರಬೇಕು. ಜೊತೆಗೆ ಸಭಿಕರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತಾಡುವ ಆತ್ಮವಿಶ್ವಾಸ ಇರಬೇಕು ಅನ್ನೋದನ್ನೂ ಹೇಳ್ತಾರೆ.
ಸುದೀಪ್ ಮುಂದೆ ನಿಂತಿದ್ದಾಗ ಆದ ಎಡವಟ್ಟು
‘ಯಾವುದೋ ಆಡಿಯೋ ರಿಲೀಸ್ ಕಾರ್ಯಕ್ರಮ. ಸ್ಟೇಜ್ ಮೇಲೆ ಸುದೀಪ್ ಇದ್ರು. ಟಾಕ್‌ಬ್ಯಾಕ್‌ನಲ್ಲಿ ನನಗೆ ಸ್ಕ್ರಿಪ್ಟ್ ಡಿಕ್ಟೇಟ್ ಮಾಡುತ್ತಿದ್ದರು ಇಂಗ್ಲಿಷ್‌ನಲ್ಲಿ ಬಹಳ ನಿಧಾನಕ್ಕೆ ಹೇಳ್ತಿದ್ರು. ನಾನು ಸ್ಟೇಜ್‌ನಲ್ಲಿ ನಿಂತು ಅವರ ಮಾತುಗಳನ್ನು ಕೇಳಿಸಿಕೊಂಡು ಕನ್ನಡಕ್ಕೆ ಅನುವಾದ ಮಾಡಿ ಮಾತಾಡಬೇಕಿತ್ತು. ಪಟಪಟ ಮಾತಾಡೋ ನನಗೆ ಅವರ ನಿಧಾನದ ಮಾತನ್ನು ಕೇಳಿಸಿಕೊಂಡು ಟ್ರಾನ್ಸ್‌ಲೇಟ್ ಮಾಡಿ ಮಾತಾಡೋದು ಬಹಳ ಚಾಲೆಂಜಿಂಗ್ ಆಗಿತ್ತು.
ಎದುರು ನಿಂತ ಸುದೀಪ್ ಮಾತು ಕೇಳಿಸಿಕೊಳ್ಳಲೂ ಆಗುತ್ತಿರಲಿಲ್ಲ. ನಾನೇನು ಮಾತಾಡ್ತಿದ್ದೆ ಅಂತಲೂ ಕನ್‌ಫ್ಯೂಶನ್. ಆದರೆ ಸುದೀಪ್ ನಗುತ್ತಿದ್ದರು. ಯಡವಟ್ಟೇನೂ ಆಗಿರಲಿಕ್ಕಿಲ್ಲ ಅಂತ ನನಗೆ ನಾನು ಸಮಾಧಾನ ಮಾಡ್ಕೊಂಡಿದ್ದೆ’ ಅಂತ ಹಿಂದೆಂದೋ ನಡೆದ ಎಡವಟ್ಟಿನ ಘಟನೆಯನ್ನು ಬಿಚ್ಚಿಟ್ಟರು ಸುಷ್ಮಾ.
ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದ ನಟಿ; ಬೀದಿ ಶ್ವಾನಗಳಿಗೆ ಊಟ ವ್ಯವಸ್ಥೆ!
ಸೆಲೆಬ್ರಿಟಿಗಳ ಜೊತೆಗೆ ಫ್ಲರ್ಟ್ ಮಾಡೋದು ನಂಗಿಷ್ಟಆಗಲ್ಲ
‘ನನ್ನದೇನಿದ್ದರೂ ಡೀಸೆಂಟ್ ನಿರೂಪಣೆ. ಹಾಸ್ಯ ಇರುತ್ತೆ. ಆದರೆ ಅತಿಥಿಗಳನ್ನು ಫ್ಲರ್ಟ್ ಮಾಡುತ್ತಾ, ಕೆಟ್ಟಕೆಟ್ಟಜೋಕ್ ಮಾಡೋದು ನನ್ನ ಸ್ಟೈಲ್ ಅಲ್ಲ’ ಅನ್ನುವ ಸುಷ್ಮಾಗೆ, ಆ್ಯಂಕರಿಂಗ್ ನಲ್ಲಿ ಸಹಜವಾಗಿ ಇರೋದಿಷ್ಟ. ಸಹಜತೆ ಮೂಲಕವೇ ಜನರನ್ನು ರೀಚ್ ಆಗೋದಿಷ್ಟ. ಅದರಲ್ಲಿ ಇಲ್ಲದ ಗಿಮಿಕ್ ಮಾಡೋದು ಅಷ್ಟಾಗಿ ಹಿಡಿಸಲ್ಲ.
ಟಿವಿ ಆ್ಯಂಕರ್ ಆಗಬೇಕು ಅನ್ನುವವರಿಗೆ ಟಿಫ್ಸ್
- ಶುದ್ಧ ಕನ್ನಡದಲ್ಲಿ ಮಾತನಾಡೋದು ರೂಢಿಸಿಕೊಳ್ಳಿ.
- ಮದುವೆ, ಬತ್‌ರ್ ಡೇ ಪಾರ್ಟಿಯಂಥಾ ಕಡೆ ಮೈಕ್ ಎತ್ಕೊಂಡು ಮಾತಾಡೋದಕ್ಕೆ ಶುರು ಮಾಡಿ. ಅಲ್ಲಿರೋರೆಲ್ಲ ನಿಮ್ಮ ಆತ್ಮೀಯರೇ ಆಗಿರುವ ಕಾರಣ ಭಯ ಆಗಲ್ಲ. ಅವರನ್ನು ಫೇಸ್ ಮಾಡೋದು ಸುಲಭ.
- ಶುರುವಿನಲ್ಲೇ ಟಾಕ್ ಬ್ಯಾಕ್ ಹಾಕಿಕೊಂಡು ಮಾತಾಡೋದನ್ನು ರೂಢಿಸಿಕೊಂಡರೆ ಉತ್ತಮ.
- ಬಾಲ್ಯದಲ್ಲಿ ನಿರೂಪಣೆ ಮಾಡಲು ಕಷ್ಟಪಡುತ್ತಿದ್ದವರೂ ಈಗ ನಿರೂಪಕರಾಗಬಹುದು. ಏಕೆಂದರೆ ನನಗೂ ಈ ಸಮಸ್ಯೆ ಇತ್ತು. ಆದರೆ ಅಭ್ಯಾಸ, ಆತ್ಮವಿಶ್ವಾಸ ಹೆಚ್ಚುತ್ತಾ ಹೋದ ಹಾಗೆ ಸಮಸ್ಯೆ ಇರಲ್ಲ.
ಆತ್ಮವಿಶ್ವಾಸ ತುಂಬಿದ್ದು ಸೃಜನ್ ಲೋಕೇಶ್
ಈಗ ಆತ್ಮವಿಶ್ವಾಸದಿಂದ ಸ್ಟೇಜ್‌ನಲ್ಲಿ ನಿಂತು ಮಾತಾಡುವ ಸುಷ್ಮಾಗೆ ಬಾಲ್ಯದಲ್ಲಿ ನಿರೂಪಣೆ ಅಂದ್ರೆ ಸಿಕ್ಕಾಪಟ್ಟೆಭಯ. ಡ್ಯಾನ್ಸ್, ನಾಟಕಗಳಲ್ಲೆಲ್ಲ ಲೀಲಾಜಾಲವಾಗಿ ಅಭಿನಯಿಸುತ್ತಿದ್ದವರಿಗೆ, ನಿರೂಪಣೆಗೆ ಸ್ಟೇಜ್ ಹತ್ತಿದ್ರೆ ನಡುಕ ಬರ್ತಿತ್ತು. ಆರಂಭದಲ್ಲಿ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾಗಲೇ ಸೃಜನ್ ಲೋಕೇಶ್ ಜೊತೆ ‘ಸೈ’ ಶೋದ ಆಂಕರಿಂಗ್‌ಗೆ ಕರೆಬಂತು. ಇವರು ಖಡಾಖಂಡಿತವಾಗಿ ‘ನೋ’ ಅಂದ್ರು.
ಆಗ ಇವರಿಗೆ ತಿಳಿಹೇಳಿ, ಆತ್ಮವಿಶ್ವಾಸ ತುಂಬಿ ಇವರೊಳಗಿದ್ದ ನಿರೂಪಕಿಯನ್ನು ಆಚೆ ತಂದದ್ದು ಸೃಜನ್ ಲೋಕೇಶ್. ಒಮ್ಮೆ ನಿರೂಪಣೆಯಲ್ಲೂ ಸಕ್ಸಸ್ ಆದ ಮೇಲೆ ಇವರಿಗೆ ನಡುಕ, ಭಯ ಹೊರಟೇ ಹೋಯ್ತು. ಸಾವಿರಾರು ಜನ ನೆರೆಯುವ ಸೀರಿಯಲ್ ಸಂತೆಯಂಥಾ ಕಾರ್ಯಕ್ರಮಗಳಲ್ಲೂ ಲವಲವಿಕೆಯಿಂದ ನಿರೂಪಣೆ ಮಾಡಿ ಶಹಭಾಸ್ ಅನಿಸಿಕೊಂದ್ರು. ಜೀನ್ಸ್ ಶೋದ ಎರಡನೇ ಸೀಸನ್‌ನಲ್ಲೂ ಇವರೇ ನಿರೂಪಕಿ.
ನಿರೂಪಣೆ ಅಂದ್ರೆ ಬೆಚ್ಚುತ್ತಿದ್ದ ಹುಡುಗಿ ಈಗ ಬೆಸ್ಟ್ ಆ್ಯಂಕರ್
ಹಿಂದೆಲ್ಲಾ ಜನ, ನೀವು ‘ಗುಪ್ತಗಾಮಿನಿ’ ಸೀರಿಯಲ್ ಭಾವನ ಅಲ್ವಾ ಅಂತ ಕೇಳುತ್ತಿದ್ದರು. ಈಗ ಆ್ಯಂಕರ್ ಆದ ಮೇಲೆ ನನ್ನನ್ನು ನನ್ನ ಹೆಸರಿನ ಮೂಲಕವೇ ಗುರುತಿಸುತ್ತಾರೆ ಎನ್ನುವ ಸ್ನಿಗ್ಧ ಸುಂದರಿ ಸುಷ್ಮಾ ರಾವ್ ಈಗ ಜೀ ಕನ್ನಡದ ‘ಜೀನ್ಸ್’ ಕಾರ್ಯಕ್ರಮದ ನಿರೂಪಕಿ. ಸ್ಕೂಲ್ ಡೇಸ್‌ನಲ್ಲಿ ಆ್ಯಂಕರಿಂಗ್ ಅಂದ್ರೆ ಭಯಪಡ್ತಿದ್ದ ಈಕೆ ಈಗ ಬೆಸ್ಟ್ ಆ್ಯಂಕರ್ ಆಗಿರೋದರ ಹಿಂದಿನ ಕತೆ ಸ್ಫೂರ್ತಿದಾಯಕ.